Asianet Suvarna News Asianet Suvarna News

Panchamasali Reservation: ಬೊಮ್ಮಾಯಿ ಸರ್ಕಾರಕ್ಕೆ ಡೆಡ್‌ಲೈನ್‌ ಕೊಟ್ಟ ಕೂಡಲ ಶ್ರೀ..!

*   ಉಗ್ರ ಹೋರಾಟ: ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ
*   ಅಧಿವೇಶನ ಮುಗಿಯುವುದರೊಳಗೆ ಹಿಂದುಳಿದ ಆಯೋಗ ವರದಿ ಪಡೆಯಲು ಒತ್ತಾಯ
*   ಸಮುದಾಯದ ಶಾಸಕರಿಗೆ ಅಧಿವೇಶನದಲ್ಲಿ ದನಿ ಎತ್ತಲು ಆಗ್ರಹ
 

April 14th Deadline to CM Basavaraj Bommai Government for Panchamasali Reservation grg
Author
First Published Mar 16, 2022, 8:00 AM IST

ಬೆಂಗಳೂರು(ಮಾ.16):  ವಿಧಾನಸಭೆಯ ಪ್ರಸಕ್ತ ಅಧಿವೇಶನ(Assembly Session) ಮುಗಿಯುವುದರೊಳಗೆ ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆದು, ಏ.14ರೊಳಗೆ ಪಂಚಮಸಾಲಿ(Panchamasali) ಲಿಂಗಾಯತ ಸಮುದಾಯಕ್ಕೆ 2 ಎ ಮೀಸಲಾತಿ ಘೋಷಿಸದಿದ್ದರೆ ರಾಜ್ಯಾದ್ಯಂತ ಉಗ್ರಹೋರಾಟ ನಡೆಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ(Jaya Mrutunjaya Swamiji) ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪಂಚಮಸಾಲಿ ಸಮುದಾಯದ ಪ್ರಮುಖರೊಂದಿಗಿನ ಮೀಸಲಾತಿ(Reservation) ಕುರಿತ ದುಂಡುಮೇಜಿನ ಸಭೆಯ ಬಳಿಕ ಮಾತನಾಡಿದ ಅವರು, ‘2021 ಮಾ.15ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ಅಧಿವೇಶನದಲ್ಲಿ ಮುಂದಿನ ಆರು ತಿಂಗಳಲ್ಲಿ ಮೀಸಲಾತಿ ನೀಡುವುದಾಗಿ ಮಾತುಕೊಟ್ಟಿದ್ದರು. ಬಳಿಕ ಬಸವರಾಜ ಬೊಮ್ಮಾಯಿ(Basavaraj Bommai) ಮುಖ್ಯಮಂತ್ರಿಯಾದ ನಂತರ ಅಕ್ಟೋಬರ್‌ನಲ್ಲಿ ಸಭೆ ಕರೆದು ಒಂದಿಷ್ಟು ಕಾಲಾವಕಾಶ ಕೇಳಿಕೊಂಡು ಬಜೆಟ್‌ ಅಧಿವೇಶನ ಮುಕ್ತಾಯವಾಗುವುದೊಳಗೆ ತೀರ್ಮಾನಿಸಲಾಗುವುದು ಎಂದಿದ್ದರು. ಆದರೆ, ಕಳೆದ 10 ದಿನಗಳಿಂದ ನಡೆಯುತ್ತಿರುವ ಅಧಿವೇಶನದಲ್ಲಿ ಮೀಸಲಾತಿ ನೀಡುವ ಕುರಿತು ಚರ್ಚೆಗಳಾಗಿಲ್ಲ. ಮೀಸಲಾತಿ ಕುರಿತು ಜಯಪ್ರಕಾಶ್‌ ಹೆಗ್ಡೆ ಅವರ ಹಿಂದುಳಿದ ಆಯೋಗದ ವರದಿಯನ್ನೇ ಸರ್ಕಾರ ಪಡೆದುಕೊಂಡಿಲ್ಲ. ಹೀಗಾಗಿ, ಸರ್ಕಾರಕ್ಕೆ ಏ.14 ಅಂತಿಮ ಗಡುವು ನೀಡಲಾಗಿದೆ’ ಎಂದರು.

Third Panchamasali Peetha: 'ಬಿಎಸ್‌ವೈ ಪಂಚಮಸಾಲಿ ವಿರೋಧಿ ಎಂದು ಬಿಂಬಿಸಿದರು'

‘ಸುಮಾರು ಒಂದು ವರ್ಷ ಮೂರು ತಿಂಗಳಿಂದ ಮೀಸಲಾತಿ ಹೋರಾಟ ಜೀವಂತವಾಗಿದೆ. ಸಮುದಾಯದ ಮುಖಂಡರಲ್ಲಿ ಪ್ರಾಮಾಣಿಕರು ಹೆಚ್ಚಿದ್ದು, ಹೋರಾಟ ಹತ್ತಿಕ್ಕಲು ಸಾಕಷ್ಟು ಪ್ರಯತ್ನಗಳಾದರು ಸಾಧ್ಯವಾಗಿಲ್ಲ. ಸರ್ಕಾರಕ್ಕೆ(Government of Karnataka) ನೀಡಿದ್ದ ಕಾಲಾವಕಾಶ ಮುಕ್ತಾಯವಾಗಿದೆ. ಇನ್ನಷ್ಟುಸಮಯ ನೀಡಿದರೆ ವಿಧಾನಸಭೆ ಚುನಾವಣೆ ಬಂದು ನೀತಿ ಸಂಹಿತೆ ಎನ್ನುತ್ತಾರೆ. ಅಂಬೇಡ್ಕರ್‌ ಜಯಂತಿಯೊಳಗೆ ಸರ್ಕಾರ ನಮಗೆ ಮೀಸಲಾತಿ ನೀಡಿದಿದ್ದರೆ ಎಲ್ಲರೂ ಕೂಡಲಸಂಗಮಕ್ಕೆ ಬನ್ನಿ ಅಲ್ಲಿಂದಲೇ ಉಗ್ರ ಹೋರಾಟ ನಡೆಸೋಣ ಎಂದು ಕರೆಕೊಟ್ಟರು. ಅಧಿವೇಶನದಲ್ಲಿರುವ ಸಮುದಾಯದ ಜನಪ್ರತಿನಿಧಿಗಳು ಮೀಸಲಾತಿ ಕುರಿತು ದನಿ ಎತ್ತಬೇಕು, ಸಮುದಾಯದ ಋುಣದಲ್ಲಿರುವ ಇತರೆ ಸಮುದಾಯದ ಜನಪ್ರತಿನಿಧಿಗಳು ಬೆಂಬಲ ನೀಡಬೇಕು’ ಎಂದು ಸ್ವಾಮೀಜಿ ಆಗ್ರಹಿಸಿದರು.

ಇದಕ್ಕೂ ಮುನ್ನ ನಡೆದ ದುಂಡು ಮೇಜಿನ ಸಭೆಯಲ್ಲಿ ಸಮುದಾಯದ ಶಾಸಕರಾದ ಅರವಿಂದ ಬೆಲ್ಲದ, ಸಿದ್ದು ಸವದಿ, ಮಾಜಿ ಶಾಸಕ ಎಚ್‌.ಎಸ್‌.ಶಿವಶಂಕರ್‌ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಪಂಚಮಸಾಲಿ ಗೌಡ, ಮಲೆಗೌಡ, ದೀಕ್ಷಾ ಲಿಂಗಾಯತ ಸಮುದಾಯದ ಮುಖಂಡರು ಮುಂದಿನ ಹೋರಾಟದ ಬಗ್ಗೆ ಸಲಹೆ ನಿಡಿದರು.

ಷಡ್ಯಂತ್ರ ನಡೆಯುತ್ತಿದೆ:

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌(Basanagouda Patil Yatnal) ಮಾತನಾಡಿ, ‘ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಮೀಸಲಾತಿ ಕುರಿತು ಹಲವು ಸ್ವಾಮೀಜಿಗಳು ತಪ್ಪು ಸಲಹೆ ನೀಡಿ ಷಡ್ಯಂತ್ರ ಮಾಡುತ್ತಿದ್ದಾರೆ. ಒಂದು ವೇಳೆ ಸರ್ಕಾರ ಈಗ ಮೀಸಲಾತಿ ಕೊಟ್ಟರೆ ಅದರ ಯಶಸ್ಸು ಕೂಡಲಸಂಗಮ ಸ್ವಾಮೀಜಿಗೆ ಸೇರುತ್ತದೆ ಎಂಬ ಕಾರಣಕ್ಕೆ ಇನ್ನಷ್ಟುದಿನ ತಡವಾಗುವಂತೆ ತಪ್ಪಿಸುತ್ತಿದ್ದಾರೆ. ಅಂತಹ ಸ್ವಾಮೀಜಿಗಳನ್ನು ಸಮುದಾಯದ ಜನ ಸಾರ್ವಜನಿಕವಾಗಿ ಬಹಿಷ್ಕರಿಸಬೇಕು. ಇನ್ನು ಹೋರಾಟ ಕೊನೆಯ ಹಂತಕ್ಕೆ ಬಂದಿದ್ದು, ಬಸವರಾಜ ಬೊಮ್ಮಾಯಿಯವರ ಮೇಲೆ ವಿಶ್ವಾಸವಿದ್ದು, ಶೀಘ್ರ ನಿರ್ಧಾರ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

Kalaburagi: ಪಂಚಮಸಾಲಿ ಮೂರನೇ ಪೀಠ ಯಾರ ವಿರುದ್ಧವಾಗಿ ಪ್ರಾರಂಭವಾಗುತ್ತಿಲ್ಲ: ಸಚಿವ ನಿರಾಣಿ!

ಮಾಡು ಇಲ್ಲವೆ ಮಡಿ ಹೋರಾಟ:

ಲಿಂಗಾಯತ ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ‘ಭರವಸೆ ಮೇಲೆ ತಾತ್ಕಾಲಿಕವಾಗಿ ಹೋರಟ ನಿಲ್ಲಿಸಿದ್ದೆವು. ಕಣ್ಣು ಹೃದಯವಿಲ್ಲದ ಸರ್ಕಾರ ಹಿಂದಿನ ಹೋರಾಟಕ್ಕೆ ಬೆಲೆ ಕೊಡಲಿಲ್ಲ. ಸರ್ಕಾರಕ್ಕೆ ಸಾಮೀಜಿಗಳು ನೀಡಿರುವ ಗಡುವು ಮುಗಿದ ನಂತರ ಮಾಡು ಇಲ್ಲವೆ ಮಡಿಯುವ ಹೋರಾಟ ಮಾಡಲಾಗುವುದು. ಮೀಸಲಾತಿ ಆದೇಶ ಪ್ರತಿ ಸಿಗೋವರೆಗೂ ಹೋರಾಟ ಬಿಡುವುದಿಲ್ಲ’ ಎಂದು ಎಚ್ಚರಿಕೆಕೊಟ್ಟರು.

ಮತ್ತೊಂದು ಮಠ ಗೊತ್ತಿಲ್ಲ

‘ರಾಜ್ಯದಲ್ಲಿ ಕೂಡಲಸಂಗಮದಲ್ಲಿ(Kudala Sangama) ಸ್ಥಾಪನೆಯಾಗಿರುವ ಲಿಂಗಾಯತ ಪಂಚಮಸಾಲಿ ಪೀಠ ಹೊರತು ಪಡಿಸಿ ಪಂಚಮಸಾಲಿ ಸಮುದಾಯದ ಬೇರೆ ಪೀಠ ಇರುವುದು ನನಗೆ ಗೊತ್ತಿಲ್ಲ’ ಎನ್ನುವ ಮೂಲಕ ಇತರೆ ಪಂಚಮಸಾಲಿ ಪೀಠಗಳ ಸ್ವಾಮೀಜಿಗಳ ಮೇಲೆ ಬಸವಜಯಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
 

Follow Us:
Download App:
  • android
  • ios