ಬೆಂಗಳೂರು(ಜು.09): ಕೊರೋನಾ ಸೋಂಕಿಗೆ ನಾಲ್ಕು ದಿನಗಳ ಕಾಲ ಚಿಕಿತ್ಸೆ ನೀಡಿದ ಮಲ್ಲೇಶ್ವರದ ಅಪೋಲೋ ಆಸ್ಪತ್ರೆ ರೋಗಿಯೊಬ್ಬರಿಗೆ ಎರಡು ಲಕ್ಷ ರು.ಗಳಿಗೆ ಚಿಕಿತ್ಸಾ ವೆಚ್ಚ ಪಾವತಿಸಿ ಆಸ್ಪತ್ರೆಯಿಂದ ಬಿಡುಗಡೆಯಾಗುವಂತೆ ಸೂಚಿಸಿದೆ ಎಂಬ ಆರೋಪ ಕೇಳಿ ಬಂದಿದೆ. 

ನಾಲ್ಕು ದಿನಗಳ ಹಿಂದೆ ಆಸ್ಪತ್ರೆಗೆ ಬಂದಾಗ ಕೊರೋನಾ ಪರೀಕ್ಷೆ ಮಾಡಬೇಕು ಎಂದು 35 ಸಾವಿರ ರು. ಪಡೆದಿದ್ದಾರೆ. 

ಇದೇ ಮೊದಲು ರಾಜ್ಯದಲ್ಲಿ ಒಂದೇ ದಿನ 50ಕ್ಕೂ ಹೆಚ್ಚು ಕೊರೋನಾ ಸೋಂಕಿತರು ಸಾವು..!

ಇದೀಗ ಇಎಸ್‌ಐ ಆಸ್ಪತ್ರೆಯಲ್ಲಿ ಬೆಡ್‌ ಇದೆ ಬನ್ನಿ ಎಂದು ಬಿಬಿಎಂಪಿಯಿಂದ ಕರೆ ಬರುತ್ತಿದೆ. ಆದರೆ, ಎರಡು ಲಕ್ಷ ಪಾವತಿಸಿದರೆ ಮಾತ್ರ ಬಿಡುಗಡೆ ಮಾಡುವುದಾಗಿ ಆಸ್ಪತ್ರೆಯವರು ಹೇಳುತ್ತಿದ್ದಾರೆ ಎಂದು ರೋಗಿಯ ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ.