ಬಂಗಾರಪೇಟೆ ಪುರಸಭೆ ಅಧಿಕಾರಿಗಳಿಂದ ಕನ್ನಡ ವಿರೋಧಿ ನಡೆ, ಕಸ ತುಂಬಿದ ಲಾರಿ ನಿಲ್ಲಿಸಿ ಕಾರ್ಯಕ್ರಮಕ್ಕೆ ಅಡ್ಡಿ
ಕನ್ನಡ ಸಂಘದ ವತಿಯಿಂದ ಇಂದು ಸಂಜೆ ಆಯೋಜನೆ ಮಾಡಿದ್ದ ಕಾರ್ಯಕ್ರಮಕ್ಕೆ ಪುರಸಭೆ ಅಧಿಕಾರಿಗಳು ಅಡ್ಡಿಪಡಿಸಿದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಕುವೆಂಪು ವೃತ್ತದಲ್ಲಿ ನಡೆದಿದೆ.
ಕೋಲಾರ (ಅ.1): ಕನ್ನಡ ಸಂಘದ ವತಿಯಿಂದ ಇಂದು ಸಂಜೆ ಆಯೋಜನೆ ಮಾಡಿದ್ದ ಕಾರ್ಯಕ್ರಮಕ್ಕೆ ಪುರಸಭೆ ಅಧಿಕಾರಿಗಳು ಅಡ್ಡಿಪಡಿಸಿದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಕುವೆಂಪು ವೃತ್ತದಲ್ಲಿ ನಡೆದಿದೆ.
125ನೇ ತಿಂಗಳ ಕನ್ನಡ ಸಾಂಸ್ಕೃತಿಕ ಹಬ್ಬ ಹಮ್ಮಿಕೊಳ್ಳಲಾಗಿತ್ತು.ಇಂದಿನ ಕಾರ್ಯಕ್ರಮದಲ್ಲಿ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹಾಗೂ ಕನ್ನಡದಲ್ಲಿ ಡಾಕ್ಟರೇಟ್ ಪಡೆದ ಪ್ರಾದ್ಯಾಪಕಿ ಜ್ಯೋತಿ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಬೇಕಿತ್ತು. ರಿಚರ್ಡ್ ಲೂಯಿಸ್ ಅವರಿಂದ ನಗೆ ಹಬ್ಬ ಕೂಡ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಎಲ್ಲ ಅಂದುಕೊಂಡಂತೆ ಆಗಿದ್ರೆ ಕಾರ್ಯಕ್ರಮ ಶುರುವಾಗಬೇಕಿತ್ತು. ಆದರೆ ಕನ್ನಡ ಹಬ್ಬಕ್ಕೆ ವೇದಿಕೆ ನಿರ್ಮಾಣಕ್ಕೆ ಮುಂದಾದಾಗ ಪುರಸಭೆ ಅಧಿಕಾರಿಗಳು ಅಡ್ಡಿಪಡಿಸಿದ ಆರೋಪ ಕೇಳಿಬಂದಿದೆ.
ಕೋಲಾರ ಕಾಂಗ್ರೆಸ್ ಸಮಾವೇಶದಲ್ಲಿ ಮಾರಾಮರಿ, ಶಾಸಕರ ಮುಂದೆಯೇ ಬಡಿದಾಡಿಕೊಂಡ ಕಾರ್ಯಕರ್ತರು!
ಕಳೆದ ಹತ್ತು ವರ್ಷಗಳಿಂದ ಕನ್ನಡ ಹಬ್ಬ ನಡೆಸಿಕೊಂಡು ಬರುತ್ತಿರುವ ಬಂಗಾರಪೇಟೆ ಕನ್ನಡಿಗರು. ಇಂದು ಸಹ ಕನ್ನಡ ಹಬ್ಬದ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಕಾರ್ಯಕ್ರಮಕ್ಕೆ ಸ್ಥಳ ಬಿಟ್ಟುಕೊಡದೇ ಕಾರ್ಯಕ್ರಮ ನಡೆಯಬೇಕಿದ್ದ ಸ್ಥಳದಲ್ಲಿ ಕಸ ತುಂಬಿದ ವಾಹನ ನಿಲ್ಲಿಸಿದ ಕನ್ನಡ ವಿರೋಧಿ ಪುರಸಭೆ ಅಧಿಕಾರಿಗಳು. ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಾಣ ಮಾಡುವ ಜಾಗದಲ್ಲಿ ಅಡ್ಡದಿಡ್ಡಿ ಕಸದ ವಾಹನಗಳನ್ನು ನಿಲ್ಲಿಸಿ ಉದ್ದೇಶ ಪೂರ್ವಕವಾಗಿ ಅಡ್ಡಿಪಡಿಸಲಾಗಿದೆ ಪುರಸಭೆ ಕನ್ನಡ ವಿರೋಧಿ ಧೋರಣೆಗೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.