ಕೆಕೆಆರ್‌ಡಿಬಿ 300 ಕೋಟಿ ಅನುದಾನ ದುರ್ಬಳಕೆ?: ಯಡಿಯೂರಪ್ಪ ಕಾಲದ ಇನ್ನೊಂದು ಅಕ್ರಮ ತನಿಖೆಗೆ ಆದೇಶ

ಕಾಂಗ್ರೆಸ್ ಸರ್ಕಾರ ಕೆಕೆಆರ್‌ಡಿಬಿ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಕ್ರಮದ ತನಿಖೆಗೆ ಮುಂದಾಗಿದೆ. ಅದಕ್ಕಾಗಿ ನಿವೃತ್ತ ಐಎ ಎಸ್ ಅಧಿಕಾರಿ ಸುಧೀ‌ರ್ ಕುಮಾರ್ ನೇತೃತ್ವದ ತನಿಖಾ ಸಮಿತಿ ರಚಿಸಲಾಗಿದೆ. 
 

Another illegal investigation of BS Yediyurappa's Government grg

ಬೆಂಗಳೂರು(ನ.12):  ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನ ದುರ್ಬಳಕೆಗೆ ಸಂಬಂಧಿಸಿದಂತೆ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದ್ದು, ಆ ಮೂಲಕ ಬಿಜೆಪಿ ಸರ್ಕಾರದ ಅವಧಿಯ ಮತ್ತೊಂದು ಅಕ್ರಮದ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. 

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೆಕೆಆರ್‌ಡಿಬಿ (ಆಗ ದತ್ತಾತ್ರೇಯ ಪಾಟೀಲ್ ರೇವೂರ ಅಧ್ಯಕ್ಷರಾಗಿದ್ದರು) ಅಡಿಯಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ ರಚಿಸಲಾಗಿತ್ತು. 2020-21 ರಿಂದ 2022-23 ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘಕ್ಕೆ ಪ್ರತಿ ವರ್ಷ 100 ಕೋಟಿ ರು.ನಂತೆ ಒಟ್ಟು 300 ಕೋಟಿ ರು. ಅನುದಾನ ನೀಡಲಾಗಿತ್ತು. 
ಕೆಕೆಆ‌ರ್ ಡಿಬಿ ಇರುವಾಗ ಅದರ ಅಡಿ ಸಂಘ ರಚನೆ ಹಾಗೂ ಸಂಘಕ್ಕೆ ನೀಡಿರುವ ಅನುದಾನ ದುರ್ಬಳಕೆ ಕುರಿತಂತೆ ಬಿಜೆಪಿ ಸರ್ಕಾರದ ವಿರುದ್ದ ಕಾಂಗ್ರೆಸ್ ಶಾಸಕರು ಆಕ್ರೋಶ ವ್ಯಕ್ತಪ ಡಿಸಿದ್ದರು. ಜತೆಗೆ ಅಕ್ರಮದ ಕುರಿತು ತನಿಖೆ ನಡೆಸುವಂತೆಯೂ ಆಗ್ರಹಿಸಿದ್ದರು. 

ಮಿನಿ ಸಮರದಲ್ಲಿ ಹಿರಿಯ ನಾಯಕರ ಪ್ರತಿಷ್ಠೆ ಪಣಕ್ಕೆ

ಇದೀಗ ಕಾಂಗ್ರೆಸ್ ಸರ್ಕಾರ ಕೆಕೆಆರ್‌ಡಿಬಿ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಕ್ರಮದ ತನಿಖೆಗೆ ಮುಂದಾಗಿದೆ. ಅದಕ್ಕಾಗಿ ನಿವೃತ್ತ ಐಎ ಎಸ್ ಅಧಿಕಾರಿ ಸುಧೀ‌ರ್ ಕುಮಾರ್ ನೇತೃತ್ವದ ತನಿಖಾ ಸಮಿತಿ ರಚಿಸಲಾಗಿದೆ. 

ಏನು ಆರೋಪ?

* ಬಿ.ಎಸ್. ಯಡಿಯೂರಪ ಮುಖ್ಯಮಂತ್ರಿ ಆಗಿದ್ದಾಗ 2020 ರಿಂದ 2023 ಕೆಕೆಆರ್‌ಡಿಬಿಗೆ 300 ಕೋಟಿ ರು. ಅನುದಾನ ಬಿಡುಗಡೆ 
* ಈ ಅನುದಾನ ವೆಚ್ಚ ಮಾಡು ವಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಆಗಲೇ ಆರೋಪ ಮಾಡಿದ್ದ ಕಾಂಗ್ರೆಸ್ ಶಾಸಕರು 
*ಈಗ ಈ ಬಗ್ಗೆ ತನಿಖೆ ನಡೆಸಲು ನಿವೃತ್ತ ಐಎಎಸ್ ಅಧಿಕಾರಿ ಸುಧೀರ್ ಕುಮಾ‌ರ್ ನೇತೃತ್ವದ ತನಿಖಾ ಸಮಿತಿ ರಚನೆ 
* ಕೋವಿಡ್ ಅವಧಿಯಲ್ಲಿ ಮೃತಪಟ್ಟ ಶಿಕ್ಷಕರ ಕುಟುಂಬಕ್ಕೆ ಪರಿಹಾರ ನೀಡಿಕೆ, ದೇಶಿ ಹಸುಗಳ ಸಾಕಣೆಗೆ ಪ್ರೋತ್ಸಾಹ ಧನ ವಿತರಣೆ, 1 ಕೋಟಿ ಸಸಿ ನೆಟ್ಟಿರುವ ಬಗ್ಗೆಯೂ ತನಿಖೆ 
* ಕೊರೋನಾ ಅವಧಿಯ ಆಕ್ರಮ ಗಳ ತನಿಖೆ ಬೆನ್ನಲ್ಲೇ ಬಿಜೆಪಿ ವಿರುದ್ಧ ಇನ್ನೊಂದು ತನಿಖಾಸ್ತ್ರ

Latest Videos
Follow Us:
Download App:
  • android
  • ios