ಸಿಎಂ ಗಿಂತ ಪತ್ನಿ ಸಿರಿವಂತೆ : ಅನಿತಾ ಕುಮಾರಸ್ವಾಮಿ ಆಸ್ತಿ ಮೊತ್ತವೆಷ್ಟು..?

 ವಿಧಾನಸಭಾ ಉಪಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಕಣಕ್ಕಿಳಿದಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ತಮ್ಮ ಆಸ್ತಿ ಮೊತ್ತವನ್ನು ಘೋಷಿಸಿಕೊಂಡಿದ್ದಾರೆ. ಈ ವೇಳೆ ಅವರು ಸಿಎಂಗಿಂತಲೂ ಶ್ರೀಮಂತೆ ಎನ್ನುವ ವಿಚಾರ ತಿಳಿದು ಬಂದಿದೆ.

Anitha Kumaraswamy Richer Than CM HD Kumaraswamy

ರಾಮನಗರ: ವಿಧಾನಸಭಾ ಉಪಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಕಣಕ್ಕಿಳಿದಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪತ್ನಿ ಅನಿತಾ 94 ಕೋಟಿ ರು. ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ. 

ತಮ್ಮ ಪತಿಯ ಆಸ್ತಿ ವಿವರವನ್ನೂ ನೀಡಿದ್ದು, ಅದರ ಪ್ರಕಾರ ಕುಮಾರಸ್ವಾಮಿ 7.81 ಕೋಟಿ ರು. ಸಂಪತ್ತು ಹೊಂದಿದ್ದಾರೆ.

ತಮ್ಮ ಬಳಿ ಮುಕ್ಕಾಲು ಕೆಜಿ ಚಿನ್ನ, 12.5 ಕೆಜಿ ಬೆಳ್ಳಿ ಹಾಗೂ 4 ಕ್ಯಾರೆಟ್‌ ವಜ್ರ ಇದೆ ಎಂದೂ ಅನಿತಾ ಘೋಷಿಸಿದ್ದಾರೆ. ಅವರ ಬಳಿ ಅಮೆರಿಕದ ಹಾರ್ಲೆ ಡೇವಿಡ್ಸನ್‌ ಬೈಕ್‌ ಕೂಡ ಇರುವುದು ವಿಶೇಷ.

Latest Videos
Follow Us:
Download App:
  • android
  • ios