Asianet Suvarna News Asianet Suvarna News

ಆನೇಕಲ್ ಬಾಲ್ಯ ವಿವಾಹಕ್ಕೆ ಸಿಕ್ತು ರೋಚಕ ಟ್ವಿಸ್ಟ್; ಅಜ್ಜಿ ಕೊನೇ ಆಸೆ ಈಡೇರಿಸಲು ಮೊಮ್ಮಗಳ ಬಲಿ ಕೊಟ್ಟರು

ಆನೇಕಲ್‌ನ ಬಾಲ್ಯ ವಿವಾಹ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಅಜ್ಜಿಯೇ ತನ್ನ ಕೊನೆಯ ಆಸೆಯನ್ನು ಈಡೇರಿಸಬೇಕು ಎಂದು ಅಪ್ರಾಪ್ತ ವಯಸ್ಕ (14 ವರ್ಷ) ಮೊಮ್ಮಗಳ ಮದುವೆ ಮಾಡಿಸಿದ್ದಾಳೆ.

Anekal child marriage get twist Grandma sacrificed her granddaughter to fulfill her last wish sat
Author
First Published Feb 17, 2024, 4:10 PM IST

ಬೆಂಗಳೂರು ಗ್ರಾಮಾಂತರ/ಆನೇಕಲ್  (ಫೆ.17): ಆನೇಕಲ್‌ನ ಬಾಲ್ಯ ವಿವಾಹ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಅಜ್ಜಿಯೇ ತನ್ನ ಕೊನೆಯ ಆಸೆಯನ್ನು ಈಡೇರಿಸಬೇಕು ಎಂದು ಅಪ್ರಾಪ್ತ ವಯಸ್ಕ (14 ವರ್ಷ) ಮೊಮ್ಮಗಳ ಮದುವೆ ಮಾಡಿಸಿದ್ದಾಳೆ ಎಂದು ತಿಳಿದುಬಂದಿದೆ. 

ಹೌದು, ಅಪ್ರಾಪ್ತ ಬಾಲಕಿ ಬಾಲ್ಯ ವಿವಾಹ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಅಜ್ಜಿ ಕರೆ ಮಾಡಿ ತನಗೆ ಹುಷಾರಿಲ್ಲ, ನೀನು ನನ್ನನ್ನು ನೋಡೋದಕ್ಕೆ ಹೊಸಕೋಟೆ ಕಾಟೇರಮ್ಮ ದೇವಸ್ಥಾನಕ್ಕೆ ಬಾ ಮೊಮ್ಮಗಳೇ ಎಂದು ಕರೆಸಿಕೊಂಡಿದ್ದಾಳೆ. ಆದರೆ, ಅಜ್ಜಿ ನೀನು ನನ್ನ ಕೊನೆ ಆಸೆಯನ್ನು ಈಡೇರಿಸಸಬೇಕು ಎಂದು ಪ್ರಮಾಣ ಮಾಡಿಸಿಕೊಂಡು ಮಾವನೊಂದಿಗೆ ಮದುವೆ ಮಾಡಿಕೊಳ್ಳಬೇಕು ಎಂದು 14 ವರ್ಷದ ಬಾಲಕಿಯನ್ನು ಒಪ್ಪಿಸಿದ್ದಾಳೆ. ಅಜ್ಜಿಯ ಕೊನೇ ಆಸೆ ಈಡೇರಿಸಲು ಒಪ್ಪಿಕೊಂಡ 8ನೇ ತರಗತಿ ಬಾಲಕಿಯನ್ನು 24 ವರ್ಷದ ಯುವಕನೊಂದಿಗೆ ಗುಪ್ತವಾಗಿ ಕೆಲವೇ ಜನರು ಸೇರಿಕೊಂಡು ದೇವಸ್ಥಾನದಲ್ಲಿ ವಿವಾಹ ಮಾಡಿಸಿದ್ದಾರೆ.

ಎಂಥಾ.. ಮಕ್ಕಳನ್ನ ಹೆತ್ತುಬಿಟ್ಟೆ ಪಂಕಜಾಕ್ಷೀ; ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟ ಮಕ್ಕಳು

ಅಜ್ಜಿ ತನ್ನ ಕೊನೆ ಆಸೆ ಈಡೇರಿಸಲು ಅಪ್ರಾಪ್ತ ವಯಸ್ಸಿನ ಮೊಮ್ಮಗಳಿಗೆ ವಿವಾಹ ಮಾಡಿಕೊಳ್ಳುವಂತೆ ಹೇಳಿದ್ದಾಳೆ. ತನ್ನ ಸಂಬಂಧಿಕರಲ್ಲಿಯೇ ಮೊಮ್ಮಗಳ ಮದುವೆ ಮಾಡಿಸುವ ಆತುರದಲ್ಲಿ ಯಡವಟ್ಟು ಮಾಡಿದ್ದಾಳೆ. ಭಾರತೀಯ ಕಾನೂನಿನ ಪ್ರಕಾರ ಹೆಣ್ಣಿಗೆ 18 ವರ್ಷ ಹಾಗೂ ಗಂಡಿಗೆ 21 ವರ್ಷ ಮದುವೆಯಾಗಲು ಇರುವ ವಯಸ್ಸಿನ ಮಿತಿಯಾಗಿದೆ. ಆದರೆ, ಅಜ್ಜಿ 14 ವರ್ಷದ ಮೊಮ್ಮಗಳನ್ನು ಮದುವೆ ಮಾಡಿಸಿ ಈಗ ಕೊನೇ ಆಸೆಯ ಜೊತೆಗೆ ಜೈಲು ಶಿಕ್ಷೆಯನ್ನೂ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರು: ಬಾಲಕಿಯ ಹೆತ್ತವರಿಗೆ ತಿಳಿಸದೆ 8ನೇ ತರಗತಿ ಬಾಲಕಿಗೆ ಬಾಲ್ಯ ವಿವಾಹ ಮಾಡಿಸಿದ ಕುಟುಂಬ!

ಬಾಲಕಿ ಬಾಲ್ಯ ವಿವಾಹ ಪ್ರಕರಣ ನಡೆದಿದ್ದೇಗೆ?
8ನೇ ತರಗತಿ ಓದುತ್ತಿದ್ದ ಬಾಲಕಿ ಫೆ.15ರಂದು ಅಜ್ಜಿ ಮನೆಗೆ ಹೋಗಿದ್ದಾಳೆ. ನಿನ್ನೆ ಬೆಳಗ್ಗೆ 9 ಗಂಟೆಯಿಂದ ಅಜ್ಜಿ ಮತ್ತು ಮೊಮ್ಮಗಳು ಕಾಣೆಯಾಗಿದ್ದಾರೆ. ನಂತರ, ಅಜ್ಜಿ ಮೊಮ್ಮಗಳನ್ನು ಕರೆದುಕೊಂಡು ಕೈವಾರಕ್ಕೆ ಹೋಗಿದ್ದಾಳೆ. ಅಲ್ಲಿ ತನ್ನ ಯೋಜನೆಯಂತೆ ಸಂಬಂಧಿಕರ ಯುವಕನೊಂದಿಗೆ ಸಂಜೆ ಹೊತ್ತಿಗೆ ಮೊಮ್ಮಗಳನ್ನ ಮದುವೆ ಮಾಡಿ ಮುಗಿಸಿದ್ದಾಳೆ. ಇಷ್ಟಕ್ಕೆ ಬಿಡದೇ ಮೊಮ್ಮಗಳನ್ನು ವರನ ಮನೆಗೆ ಕಳುಹಿಸಿ, ಮೊಮ್ಮಗಳ ತಾಯಿಗೆ ಕರೆ ಮಾಡಿ ತಿಳಿಸಿದ್ದಾಳೆ. ಈ ಬಗ್ಗೆ ಬಾಲಕಿಯ ತಂದೆ, ತಾಯಿ ಗಾಬರಿಗೊಂಡು ಸರ್ಜಾಪುರ ಪೊಲೀಸ್ ಠಾಣೆಗೆ ತೆರಳಿ ಬಾಲಕಿಯ ಅಜ್ಜಿ ರಾಜಮ್ಮ, ದೊಡ್ಡಪ್ಪ ಶ್ರೀನಿವಾಸ್, ದೊಡ್ಡಮ್ಮ ವೀಣಾ ಸೇರಿ 9 ಮಂದಿ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.

Follow Us:
Download App:
  • android
  • ios