ದಶಕದ ಹಿಂದೆಯೇ ಚಿನ್ಮಯಾನಂದ ಸ್ವಾಮೀಜಿ ಕೊಲೆಗೆ ನಡೆದಿತ್ತು ಯತ್ನ!
ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಹತ್ಯೆಗೀಡಾದ ಆನಂದ ಮಾರ್ಗ ಸಂಸ್ಥೆಯ ಆಚಾರ್ಯ ಚಿನ್ಮಯಾನಂದ ಸ್ವಾಮೀಜಿ ಮೇಲೆ ಹದಿನೈದು ವರ್ಷಗಳ ಹಿಂದೆಯೇ ಆರೋಪಿಗಳಾದ ಧರ್ಮಪ್ರಾಣಾನಂದ ಮತ್ತು ಪ್ರಾಣೇಶ್ವರ ಅವಧೂತ ಸ್ವಾಮೀಜಿಗಳಿಂದ ಕೊಲೆ ಯತ್ನ ನಡೆದಿತ್ತು ಎಂಬ ವಿಚಾರ ಇ ದೀಗ ಬಯಲಾಗಿದೆ.
ಮಾಲೂರು (ಜೂ.24) : ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಹತ್ಯೆಗೀಡಾದ ಆನಂದ ಮಾರ್ಗ ಸಂಸ್ಥೆಯ ಆಚಾರ್ಯ ಚಿನ್ಮಯಾನಂದ ಸ್ವಾಮೀಜಿ ಮೇಲೆ ಹದಿನೈದು ವರ್ಷಗಳ ಹಿಂದೆಯೇ ಆರೋಪಿಗಳಾದ ಧರ್ಮಪ್ರಾಣಾನಂದ ಮತ್ತು ಪ್ರಾಣೇಶ್ವರ ಅವಧೂತ ಸ್ವಾಮೀಜಿಗಳಿಂದ ಕೊಲೆ ಯತ್ನ ನಡೆದಿತ್ತು ಎಂಬ ವಿಚಾರ ಇ ದೀಗ ಬಯಲಾಗಿದೆ.
10 ವರ್ಷಗಳ ಹಿಂದೆ ಸಂತೇಹಳ್ಳಿ ಗೇಟ್ ಬಳಿಯ ಆನಂದ ಮಾರ್ಗ ಪಾಲಿಟೆಕ್ನಿಕ್‌ನಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು. ಆಗ ಅಂದಿನ ಪಿಎಸೈ ಸಲೀಂ ನದಾಫ್(ಇಂದು ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಿಪಿಐ)ಡಿ.ಆರ್. ಸಿಬ್ಬಂದಿಯೊಂದಿಗೆ ಹೋಗಿ ಪರಿಸ್ಥಿತಿ ನಿಯಂತ್ರಿಸಿದ್ದರು. ಈ ಮಾರಾಮಾರಿಯಲ್ಲಿ ಆಚಾರ್ಯ ಚಿನ್ಮಯಾನಂದ ಸ್ವಾಮೀಜಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆಚಾರ್ಯ ಧರ್ಮಪ್ರಾಣಾನಂದ, ಆಚಾರ್ಯ ಪ್ರಾಣೇಶ್ವರ ಅವಧೂತ ಹಾಗೂ ಅರುಣ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿ ಮೂವರನ್ನೂ ಜೈಲಿಗಟ್ಟಲಾಗಿತ್ತು.
ರಾಜ್ಯದಲ್ಲಿ ಮತ್ತೊಬ್ಬ ಸ್ವಾಮೀಜಿ ಭೀಕರ ಹತ್ಯೆ; ಆನಂದ ಮಾರ್ಗ ಆಶ್ರಮ ಆಸ್ತಿಗೆ ಸ್ವಾಮೀಜಿ ಹೊಡೆದು ಕೊಂದ ಆಚಾರ್ಯರು
ಎಂಜಿನಿಯರ್ ಆಗಿದ್ದ ಚಿನ್ಮಯಾನಂದ ಅವಧೂತ ಅವರು ಕೋಲಾರದ ಶಾರದಾ ಟಾಕೀಸ್ ಹಿಂಭಾಗದಲ್ಲಿ ೧೯೮೬ ರಲ್ಲಿ ಪ್ರಾರಂಭವಾಗಿದ್ದ ಆನಂದ ಮಾರ್ಗ ಸಂಸ್ಥೆಯನ್ನು ಜಿಲ್ಲೆಯ ಇತರೆಡೆ ಬೆಳಸಲು ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡಿದ್ದರು. ಕೇಂದ್ರ ಸರ್ಕಾರ ಆನಂದ ಮಾರ್ಗ ಸಂಸ್ಥೆ ಮೇಲೆ ನಿರ್ಬಂಧ ಹೇರಿದ್ದ ಸಮಯದಲ್ಲೂ ಸ್ಥಳೀಯರ ಸಹಕಾರದಿಂದ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದರು. ಮಾಲೂರಿನಲ್ಲಿ ಪಾಲಿಟೆಕ್ನಿಕ್ ಆರಂಭಿಸಲೂ ಮುಖ್ಯ ಕಾರಣರಾಗಿದ್ದರು. ಜತೆಗೆ ಆ ಕಾಲೇಜನ್ನು ಯಶಸ್ವಿಯಾಗಿ ಹಲವು ವರ್ಷ ಕಾಲ ಬೆಳೆಸಿದ್ದರು. ಕೋಲಾರ ತಾಲೂಕಿನ ಕಿತ್ತಂಡೂರಿನಲ್ಲಿ ಆನಂದ ಮಾರ್ಗ ಶಾಖೆ ಆರಂಭಿಸಿ ಶಾಲೆ ಆರಂಭಿಸಿದ್ದರು. ವರ್ಷಕ್ಕೊಮ್ಮೆ ಮಾರ್ಗಶಿರ ಋತುವಿನ ಹುಣ್ಣೆಮೆ ದಿನ ಆಸ್ತಮಾ ಪೀಡಿತರಿಗೆ ಉಚಿತ ಔಷಧ ವಿತರಿಸುತ್ತಿದ್ದರು.