ರಾಜ್ಯದಲ್ಲಿ ಮತ್ತೊಬ್ಬ ಸ್ವಾಮೀಜಿ ಭೀಕರ ಹತ್ಯೆ; ಆನಂದ ಮಾರ್ಗ ಆಶ್ರಮ ಆಸ್ತಿಗೆ ಸ್ವಾಮೀಜಿ ಹೊಡೆದು ಕೊಂದ ಆಚಾರ್ಯರು
ಕೋಲಾರದಲ್ಲಿ ಆನಂದ ಮಾರ್ಗ ಆಶ್ರಮದ ಜಮೀನು ವಿವಾದದ ಹಿನ್ನೆಲೆಯಲ್ಲಿ ಇಬ್ಬರು ಸ್ವಾಮೀಜಿಗಳ ನಡುವೆ ಮಾರಾಮಾರಿ ಗಲಾಟೆ ನಡೆದಿದ್ದು, ಒಬ್ಬ ಹಿರಿಯ ಸ್ವಾಮೀಜಯನ್ನು ಮತ್ತೊಬ್ಬ ಸ್ವಾಮೀಜಿ ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.
ಕೋಲಾರ (ಜೂ.22): ಕೋಲಾರದಲ್ಲಿ ಆನಂದ ಮಾರ್ಗ ಆಶ್ರಮದ ಜಮೀನು ವಿವಾದದ ಹಿನ್ನೆಲೆಯಲ್ಲಿ ಇಬ್ಬರು ಸ್ವಾಮೀಜಿಗಳ ನಡುವೆ ಮಾರಾಮಾರಿ ಗಲಾಟೆ ನಡೆದಿದ್ದು, ಒಬ್ಬ ಹಿರಿಯ ಸ್ವಾಮೀಜಯನ್ನು ಮತ್ತೊಬ್ಬ ಸ್ವಾಮೀಜಿ ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.
ಹೌದು, ಕೋಲಾರದ ಆನಂದ ಮಾರ್ಗ ಆಶ್ರಮದ ಜಮೀನು ವಿವಾದದ ಕುರಿತು ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಹಲ್ಲೆ ಗೊಳಗಾದ ಓರ್ವ ಸ್ವಾಮಿಜಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಸಂತಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಕೊಲೆಯಾದವರು ಆಚಾರ್ಯ ಚಿನ್ಮಯಾನಂದ ಅವದೂರ್ ಸ್ವಾಮೀಜಿ (65) ಎನ್ನುವವರಾಗಿದ್ದಾರೆ. ಆಚಾರ್ಯ ಧರ್ಮ ಪ್ರಾಣಾನಂದ ಸ್ವಾಮೀಜಿ ಅವರ ಗುಂಪಿನಿಂದ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸೂರಜ್ ರೇವಣ್ಣ ಸಲಿಂಗ ಕಾಮದ ಕುರಿತು ಅಧಿಕೃತ ದೂರು ದಾಖಲಾಗಿಲ್ಲ: ಗೃಹ ಸಚಿವ ಪರಮೇಶ್ವರ
ಮಾಲೂರು ತಾಲ್ಲೂಕು ಸಂತಳ್ಳಿ ಗ್ರಾಮದಲ್ಲಿರುವ 4 ಎಕರೆ ಆಶ್ರಮದ ಜಾಗಕ್ಕಾಗಿ ವಿವಾದ ನಡೆಯುತ್ತಿತ್ತು. ಕಳೆದ ಹಲವು ವರ್ಷಗಳಿಂದ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಇಂದು ಬೆಳಿಗ್ಗೆ ಕೋರ್ಟ್ ಗೆ ದಾಖಲೆ ಸಹಿತ ಹೋಗುವ ವೇಳೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಗಂಭೀರ ಗಾಯಗೊಂಡ ಚಿನ್ಮಯಾನಂದ ಅವರು ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಸ್ವಾಮೀಇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆಚಾರ್ಯ ಧರ್ಮ ಪ್ರಾಣಾನಂದ ಹಾಗೂ ಅರುಣ್ ಎಂಬುವರನ್ನು ಮಾಲೂರು ಪೊಲೀಸರು ಬಂಧಿಸಿದ್ದಾರೆ.
ನಾನು ದಿನನಿತ್ಯದಂತೆ ನಿತ್ಯ ಕರ್ಮವನ್ನು ಮುಗಿಸಲು ಶೌಚಗೃಹಕ್ಕೆ ಹೋಗಿದ್ದೆ. ಆಗ ಅಲ್ಲಿಗೆ ಬಂದು ಬಾಗಿಲನ್ನು ಒಡೆದು ಹಾಕಿದ ಅವರು ನನ್ನನ್ನು ಎಳೆದುಕೊಂಡು ದೊಡ್ಡ ದೊಣ್ಣೆಗಳನ್ನು ಹಿಡಿದು ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಸುಮಾರು 30 ನಿಮಿಷಗಳವರೆಗೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಅವರ ಕೈಯಲ್ಲಿದ್ದ ದೊಡ್ಡ ದೊಣ್ಣೆಗಳು ಪುಡಿ ಪುಡಿ ಆಗಿದ್ದು, ನನ್ನ ದೇಹದಲ್ಲಿನ ಬಹುತೇಕ ಮೂಳೆಗಳು ಮುರಿದು ಹೋಗಿವೆ. ನನ್ನ ಕಣ್ಣು ಸಂಪೂರ್ಣವಾಗಿ ಹಾನಿಗೊಗಾಗಿ ಕಾಣಿಸುತ್ತಿಲ್ಲ. ಒಂದು ಕಣ್ಣು ಮಾತ್ರ ಕಾಣುತ್ತಿದೆ. ನಾನು ಬದುಕುತ್ತೇನೆಂಬ ವಿಶ್ವಾಸವೇ ಇಲ್ಲದಂತಾಗಿದೆ. ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಿ ಎಂದು ಸಾಯುವ ಮುನ್ನ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಹೆಂಡ್ತಿ, ಮಕ್ಕಳು ಕೊಲೆಯಾಗಿದ್ದಾರೆಂದು ಪೊಲೀಸರಿಗೆ ಕರೆ ಮಾಡಿ ಮಾನಸಿಕ ಅಸ್ವಸ್ಥ:
ಉತ್ತರ ಕನ್ನಡ (ಜೂ.22): ತನ್ನ ಪತ್ನಿ ಹಾಗೂ ಮಗಳನ್ನು ಯಾರೋ ಮರ್ಡರ್ ಮಾಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿ ಕೊಲೆಗಡುಕರನ್ನು ಬಂಧಿಸುವಂತೆ 112 (ಪೊಲೀಸ್ ಸಹಾಯವಾಣಿಗೆ) ಕರೆ ಮಾಡಿ ಗೋಗೆರೆದಿದ್ದ ಮಾನಸಿಕ ಅಸ್ವಸ್ಥನ ಮಾತು ನಂಬಿ ಪೊಲೀಸರೇ ಪೇಚಿಗೀಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಿಲ್ಲೂರಿನ ಬಿಲ್ಲನಬೈಲ‌್‌ನಲ್ಲಿ ನಡೆದಿದೆ. ವ್ಯಕ್ತಿಯ ಕರೆಯ ಹಿನ್ನೆಲೆ ಪೊಲೀಸರು ತುರ್ತಾಗಿ ಸ್ಥಳಕ್ಕೆ ತೆರಳಿ ಶವದ ಹುಡುಕಾಟ ಕೂಡಾ ನಡೆಸಿದ್ದರು. ಅದರೆ, ಕೊನೆಗೆ ಪೊಲೀಸರಿಗೆ ದೂರು ನೀಡಿದ ವ್ಯಕ್ತಿ ಮಾನಸಿಕ ಅಸ್ವಸ್ಥನೆಂದು ತಿಳಿದುಬಂದಿದ್ದು, ಪೇಚಿಗೆ ಸಿಲುಕಿ ವಾಪಸ್ ಹೋಗಿದ್ದಾರೆ.
ಪ್ರದೀಪ್ ಈಶ್ವರ್‌ನನ್ನು ಮೊದಲ ಬಾರಿಗೆ ನೋಡಿ ಯಾರೋ ಹುಚ್ಚ ಅನ್ಕೊಂಡಿದ್ದೆ; ಡಿಸಿಎಂ ಡಿ.ಕೆ. ಶಿವಕುಮಾರ್
ಕರೆ ಬಂದ 25 ನಿಮಿಷದಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿ ಮಂಜುನಾಥ ಬೊಮ್ಮಯ್ಯ ನಾಯಕ ಅವರ ಮನೆಯ ಸುತ್ತಮುತ್ತ ಶವದ ಹುಡುಕಾಟ ನಡೆಸಿದ್ದರು. ಆದರೆ, 15 ನಿಮಿಷ ಕಳೆದರೂ ಶವ ಪತ್ತೆ ಆಗದೆ ಹೋದಾಗ ಅಲ್ಲಿ ಮುಗುಳು ನಗುತ್ತಲೇ ಬಂದ ಮಂಜುನಾಥ ನಾಯಕ, ನಿಮಗೆ ನನ್ನ ಪತ್ನಿ ಹಾಗೂ ಮಗಳ ಶವ ಸಿಕ್ಕಿತೆ..? ಎಂದು ಪೊಲೀಸರಲ್ಲಿ ಪ್ರಶ್ನಿಸಿದ್ದಾನೆ. ಅದು ಸಿಗಲ್ಲಾ ಬಿಡಿ ಅವರು ಮುಂದೆ ಕೊಲೆ ಆದರೂ ಆಗಬಹುದು. ನಾನೇ ಮುನ್ನೆಚ್ಚರಿಕೆಯಾಗಿ ಕರೆ ಮಾಡಿದ್ದೆ. ಅವರು ಮನೆಯಲ್ಲಿ ಕಾಣ್ತಾ ಇಲ್ಲಾ. ಹಾಗಾಗಿ ಸುಳ್ಳು ಕರೆ ಮಾಡಿದ್ದೆ ಎಂದು ಪೊಲೀಸರ ಮುಂದೆ ಹಲ್ಲು ಕಿರಿದು ನಕ್ಕಿದ್ದಾನೆ. ಈತನ ಮಾತು ಕೇಳಿ ಪಿತ್ತ ನೆತ್ತಿಗೆ ಏರಿದ ಪೊಲೀಸರು ಈತನಿಗೆ ಎರಡು ಬಿಗಿಯುವ ಮೂಲಕ ಸರಿಯಾಗಿ ಲಾಠಿಯ ರುಚಿ ತೋರಿಸಿದ್ದಾರೆ.