ಬೆಂಗಳೂರು, [ಫೆ.20]: ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಅಮೂಲ್ಯ ಲಿಯೋನ್ ವಿರುದ್ಧ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಎ ಹಾಗೂ ಎನ್‍ಸಿಆರ್ ವಿರೋಧಿಸಿ ಇಂದು [ಗುರುವಾರ] ಬೆಂಗಳೂರಿನ ಫ್ರೀಡಂ  ಪಾರ್ಕಿನಲ್ಲಿ ಆಸಾದುದ್ದೀನ್ ಓವೈಸಿ ಭಾಗವಹಿಸಿದ್ದ ಪ್ರತಿಭಟನಾ ಕಾರ್ಯಕ್ರಮದ  ವೇದಿಕೆಯಲ್ಲೇ ಅಮೂಲ್ಯ ಲಿಯೋನಾ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾಳೆ.

ವಿಮಾನ ನಿಲ್ದಾಣದಲ್ಲಿ ದೇಶ ಭಕ್ತಿ ಪರ ಪಾಠ ಮಾಡಿದ್ದವಳೇ ಪಾಕ್ ಜಿಂದಾಬಾದ್ ಎಂದವಳು

ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಅಮೂಲ್ಯಳ ವಿರುದ್ಧ ಕಠಿಣ ಕ್ರಮಕೖಗೊಳ್ಳುವಂತೆ ಆಗ್ರಹಗಳು ವ್ಯಕ್ತವಾಗುತ್ತಿವೆ. ಮತ್ತೊಂದೆಡೆ ಈ ಬಗ್ಗೆ ಖದ್ದು ಅಮೂಲ್ಯಳ ತಂದೆ  ವಾಜಿ ಪ್ರತಿಕ್ರಿಯಿಸಿದ್ದು,  ಅವಳು ನಮ್ಮ ಮಗಳೇ ಅಲ್ಲ. ಮಗಳ ಕೃತ್ಯವನ್ನು ನಾನು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಸಾಕಷ್ಟು ಬುದ್ಧಿ ಹೇಳಿದ್ದೇವೆ. ಏನೇ ಹೇಳಿದ್ರೂ ಆಕೆ ಕೇಳಿರಲಿಲ್ಲ. ಅವಳಿಗೂ ನಮಗೂ ಸಂಬಂಧ ಇಲ್ಲ. ತಪ್ಪು ಮಾಡಿದ್ರೆ ಶಿಕ್ಷೆ ಆಗಬೇಕು ಎಂದು ವಾಜಿ ತಮ್ಮ ಪುತ್ರಿ ಅಮೂಲ್ಯಳ ವಿರುದ್ಧ ಕಿಡಿಕಾರಿದರು.