ಸರ್ಕಾರಿ ನೌಕರರು ಆಯ್ತು, ರೈತರಿಗೆ ಗುಡ್ ನ್ಯೂಸ್ ಕೊಟ್ಟ ಕಾಂಗ್ರೆಸ್ ಸರ್ಕಾರ: ಅಮೃತ ಮಳಿಗೆ ಆರಂಭ
ನಂದಿನಿ ಮಿಲ್ಕ್ ಪಾರ್ಲರ್ ಮಾದರಿಯಲ್ಲಿಯೇ ರಾಜ್ಯಾದ್ಯಂತ ಅಮೃತ ಮಳಿಗೆಯನ್ನು ಆರಂಭಿಸಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗುವುದು.
ಬೆಂಗಳೂರು (ಮೇ 30): ರಾಜ್ಯದಲ್ಲಿ ರೈತರ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲ ಆಗುವಂತೆ ರಾಜ್ಯಾದ್ಯಂತ ಇರುವ ನಂದಿನಿ ಮಿಲ್ಕ್ ಪಾರ್ಲರ್‌ಗಳ ಪಕ್ಕದಲ್ಲಿಯೇ ಅಮೃತ ಮಳಿಗೆಯನ್ನು ಆರಂಭಿಸಲಾಗುತ್ತದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.
ಈ ಕುರಿತು ಕೃಷಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ ಕೃಷಿ ಸಚಿವರು ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ನಂದಿನಿ ಮಿಲ್ಕ್ ಪಾರ್ಲರ್ ಪಕ್ಕದಲ್ಲೇ ಅಮೃತ ಮಳಿಗೆ ಆರಂಭ ಮಾಡುತ್ತೇವೆ. ಈ ಅಮೃತ ಮಳಿಗೆಯಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಾಗುತ್ತದೆ. ರಾಜ್ಯದ ಎಲ್ಲಾ ನಂದಿನಿ ಪಾರ್ಲರ್‌ಗಳ ಪಕ್ಕದಲ್ಲಿ ನಿರ್ಮಿಸಲು ಚಿಂತನೆ ಮಾಡಲಾಗಿದೆ. ಕೃಷಿ ಇಲಾಖೆ ಜವಾಬ್ದಾರಿ ನೀಡಿದ ಬಳಿಕ ಮೊದಲ ಬಾರಿಗೆ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದೇನೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ಸರ್ಕಾರಿ ನೌಕರರಿಗೆ ಶೇ.4 ತುಟ್ಟಿಭತ್ಯೆ ಹೆಚ್ಚಳ: ಜನವರಿಯಿಂದ ಪೂರ್ವಾನ್ವಯ
ಕೃಷಿ ಇಲಾಖೆಯಲ್ಲಿ ಶೇ.57 ಹುದ್ದೆ ಖಾಲಿ: ಮುಂಗಾರು ಸಂಬಂಧ ಮುನ್ನೆಚ್ಚರಿಕಾ ಕ್ರಮ ಬಗ್ಗೆ ಚರ್ಚೆ ಮಾಡಲಾಗಿದೆ. ಸದ್ಯಕ್ಕೆ ಯಾವ ತೊಂದರೆ ಇಲ್ಲ. ರಸಗೊಬ್ಬರ ಪೂರೈಕೆಗೂ ಕ್ರಮ ಕೈಗೊಳ್ಳಲಿದೆ. ಜೂನ್ ಹತ್ತರಿಂದ ಮುಂಗಾರು ಆರಂಭವಾಗಲಿದೆ. ಇದಕ್ಕೆ ಕೃಷಿ ಇಲಾಖೆ ಎಲ್ಲಾ ರೀತಿ ಸಿದ್ದತೆ ನಡೆಸಿದೆ. ತುರ್ತು ಇರುವ ಹುದ್ದೆಗಳಿಗೆ ಹಣಕಾಸು ಇಲಾಖೆ ಸಮ್ಮತಿ ಪಡೆದು ಭರ್ತಿ ಮಾಡಲು ಕ್ರಮವಹಿಸಲಾಗುವುದು. ಕೃಷಿ ಇಲಾಖೆಯಲ್ಲಿ 57% ಹುದ್ದೆಗಳು ಖಾಲಿ ಇವೆ. ಇದರಿಂದ ರೈತರಿಗೆ ಹೇಗೆ ಸ್ಪಂದಿಸೋದು ಎನ್ನುವಂತಾಗಿದೆ. ಖಾಯಂ ನೇಮಕಾತಿ ಮಾಡುವುದಾ, ಹೊರ ಗುತ್ತಿಗೆ ಮೇಲೆ ನೇಮಕ ಮಾಡುವುದಾ ಎಂಬ ಕುರಿತು ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಗ್ಯಾರಂಟಿ ಈಡೇರಿಕೆ ಬಗ್ಗೆ ನಾಳೆ ಸಿಎಂ ನೇತೃತ್ವದಲ್ಲಿ ಸಭೆ: ಕೊಟ್ಟಿರುವ ಭರವಸೆಗಳ ಗ್ಯಾರೆಂಟಿಗಳ ಈಡೇರಿಸ್ತೇವೆ ಅಂತ ಬೇರೆ ಇಲಾಖೆಗಳನ್ನ ಮುಚ್ಚಲ್ಲ. ಬೇರೆ ಇಲಾಖೆಗಳ ಅಭಿವೃದ್ಧಿಗೆ ಕುಂಠಿತವಾಗಲ್ಲ. ನಾಳೆ ಎಲ್ಲಾ ಸಚಿವರ ಜೊತೆ ಸಿಎಂ ಸಭೆ ಕರೆದಿದ್ದಾರೆ. ಗ್ಯಾರೆಂಟಿಗಳ ಅನುಷ್ಟಾನಕ್ಕೆ ಬೇರೆ ಇಲಾಖೆ ಅನುಧಾನ ಬಳಕೆ ಬಗ್ಗೆ ಅಲ್ಲಿ ಚರ್ಚೆ ಆಗುತ್ತದೆ. ಮುಖ್ಯಮಂತ್ರಿಗಳ ತೀರ್ಮಾನ ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಕಾಫಿನಾಡಿನ ಉರಗ ತಜ್ಞ ಸ್ನೇಕ್ ನರೇಶ್ ಹಾವು ಕಚ್ಚಿ ಸಾವು: ರಕ್ಷಣೆ ಮಾಡಿದ ಹಾವೇ ಕಚ್ಚಿಬಿಡ್ತು!
ತೊಗರಿ ಬೆಳೆ ನಷ್ಟಕ್ಕೆ ಪರಿಹಾರವೇ ಕೊಟ್ಟಿಲ್ಲ: ರಾಜ್ಯದಲ್ಲಿ ನೆಟೆರೋಗದಿಂದ ತೊಗರಿ ಬೆಳೆಯ ನಷ್ಟ ಅನುಭವಿಸಿರುವ ರೈತರಿಗೆ ಹಿಂದಿನ ಸರ್ಕಾರ ಪರಿಹಾರ ಘೋಷಣೆ ಮಾಡಿತ್ತು. ಆದರೆ ಪರಿಹಾರದ ಮೊತ್ತ ವಿತರಣೆ ಮಾಡದೇ ಇರುವುದು ಗಮನಕ್ಕೆ ಬಂದಿದೆ. ಒಟ್ಟು 223 ಕೋಟಿ ರೂಪಾಯಿಗಳನ್ನು ಹಣಕಾಸು ಇಲಾಖೆಯ ಅನುಮತಿಯೊಂದಿಗೆ ವಿತರಣೆ ಆಗಲಿದೆ. ಇದಕ್ಕೆ ಕುಡಲೇ ಕ್ರಮ ಕೈಗೊಳ್ಳಲಾಗುತ್ತದೆ. ಹಿರಿಯ ಅಧಿಕಾರಿಗಳ ಜೊತೆಗೆ ಇಲಾಖೆ ಕುರಿತು ಚರ್ಚೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.