Border Dispute: ಗಡಿ ವಿವಾದ ವಿಚಾರಕ್ಕೆ ಉಭಯ ರಾಜ್ಯ ಮುಖ್ಯಮಂತ್ರಿಗಳ ಸಭೆ ಕರೆದ ಅಮಿತ್‌ಶಾ

ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಎರಡೂ ರಾಜ್ಯಗಳಲ್ಲಿ ಹಿಂಸಾಚಾರ ಆರಂಭ
ಮಹಾರಾಷ್ಟ್ರ ವಿಕಾಸ್ ಅಘಾಡಿ ಸಂಸದರ ನಿಯೋಗದಿಂದ ಕೇಂದ್ರ ಸಚಿವ ಅಮಿತ್‌ ಶಾ ಭೇಟಿ
ಉಭಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಡಿ.14 ಅಥವಾ ಡಿ.15ರಂದು ಸಭೆ ಆಯೋಜನೆ

Amit Shah called a meeting two states Chief Ministers to discuss the border dispute sat

ಬೆಂಗಳೂರು (ಡಿ.10): ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದವನ್ನು ಆರಂಭಿಸಿದ ಮಹಾರಾಷ್ಟ್ರ ಸರ್ಕಾರ ಎರಡೂ ರಾಜ್ಯಗಳಲ್ಲಿ ಹಿಂಸಾಚಾರ ಆರಂಭವಾಗಲು ನೇರ ಕಾರಣವಾಗಿದೆ. ಆದರೆ, ಈಗ ಮಹಾರಾಷ್ಟ್ರ ವಿಕಾಸ್ ಅಘಾಡಿ ಸಂಸದರ ನಿಯೋಗವು ಇಂದು ಕೇಂದ್ರ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ಹಿಂಸಾಚಾರ ತಡೆಯುವಂತೆ ಮನವಿ ಮಾಡಿದೆ. ಇದರ ಬೆನ್ನಲ್ಲೇ ಅಮಿತ್‌ ಶಾ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಡಿ.14 ಅಥವಾ ಡಿ.15ರಂದು ಸಭೆ ನಡೆಸಲು ಮುಂದಾಗಿದ್ದಾರೆ.

ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದವನ್ನು ಆರಂಭಿಸಿರುವ ಮಹಾರಾಷ್ಟ್ರ ಸರ್ಕಾರ ಈಗಾಗಲೇ ಸುಪ್ರೀಂ ಕೋರ್ಟನಲ್ಲಿ ಪ್ರಕರಣ ದಾಖಲಿಸಿದೆ. ಈಗ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ದೆಹಲಿಯಲ್ಲಿ ಮಹಾರಾಷ್ಟ್ರ ವಿಕಾಸ್ ಅಘಾಡಿ ( Maha Vikas Aghadi-MVA) ಸಂಸದರ ನಿಯೋಗವು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amith Sha) ಅವರನ್ನು ಭೇಟಿಯಾಗಿ ಗಡಿ ವಿವಾದವು ಎರಡೂ ರಾಜ್ಯಗಳಲ್ಲಿ ಹಿಂಸಾಚಾರದ ಸ್ವರೂಪ ತಾಳುತ್ತಿದೆ ಎಂದು ದೂರು ನೀಡಿದೆ. ಜೊತೆಗೆ. ಈ ವೇಳೆ ಸಂಸದರು ಹಿಂಸಾಚಾರ ಸ್ವರೂಪವನ್ನು ತಡೆಯಲು ಕ್ರಮ ಕೈಗೊಳ್ಳುವಂತೆಯೂ ಮನವಿ ಮಾಡಿದ್ದಾರೆ. ಒಂದು ಕಡೆ ಸುಮ್ಮನೆ ಮಲಗಿದ್ದ ಮಗುವನ್ನು ಚಿವುಟಿ ಅಳಿಸುವ ಜೊತೆಗೆ, ಮತ್ತೊಂದೆಡೆ ತೊಟ್ಟಿಲು ತೂಗುವ ನಾಟಕವನ್ನು ಮಹಾರಾಷ್ಟ್ರ ಮುಂದುವರೆಸಿದೆ.

Border row:ಕನ್ನಡಿಗರ ಪ್ರತಿಭಟನೆಗೆ ಹೆದರಿದ ಮಹಾರಾಷ್ಟ್ರ ಸಚಿವರು?: ಬೆಳಗಾವಿ ಭೇಟಿ ದಿಢೀರ್‌ ರದ್ದು

ಇಬ್ಬರೂ ಮುಖ್ಯಮಂತ್ರಿಗಳೊಂದಿಗೆ ಸಭೆ: ಕರ್ನಾಟಕ - ಮಹಾರಾಷ್ಟ್ರ (Karnataka- Maharashtra) ನಡುವೆ ನಡೆಯುತ್ತಿರುವ ಗಡಿ ವಿವಾದ (Border Dispute) ತಾರಕಕ್ಕೇರಿದ್ದು, ಉಭಯ ರಾಜ್ಯಗಳಲ್ಲಿ ಹೋರಾಟಗಾರರು ಬಸ್ ಗಳಿಗೆ ಮಸಿ ಬಳಿದು, ಕಲ್ಲು ಹೊಡೆಯುವ ಕುಕೃತ್ಯ ಘನನೆಗಳು ವರದಿಯಾಗಿವೆ. ಇದು ಎರಡೂ ರಾಜ್ಯಗಳ ನಡುವಿನ ಸಾರಿಗೆ ವ್ಯವಸ್ಥೆ (Transport System) ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಅಲ್ಲದೆ ಗಡಿ ಗ್ರಾಮಗಳಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಪರಿಸ್ಥಿತಿ ಯಾವುದೇ ಸಂದರ್ಭದಲ್ಲೂ ಬಿಗಾಡಾಯಿಸಬಹುದು. ಈ ಘಟನೆಗಳ ಬಗ್ಗೆ ಮಾಹಿತಿ ಪಡೆದಿರುವ ಅಮಿತ್‌ ಶಾ ಡಿ.14ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Ekanath Shindhe) ಮತ್ತು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಸಭೆಯನ್ನು ಅಮಿತ್ ಶಾ ಚರ್ಚೆಗೆ ಕರೆದಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಗಡಿ ವಿವಾದ ಅಖಾಡಕ್ಕಿಳಿದ ಸಿಎಂ ಬೊಮ್ಮಾಯಿ: ಗಡಿ ವಿವಾದದ ಕುರಿತು ಮಹಾರಾಷ್ಟ್ರ ಸಂಸದರ ನಿಯೋಗವು ಅಮಿತ್‌ ಶಾ ಅವರನ್ನು ಭೇಟಿಯಾಗಿ ಬಂದ ತಕ್ಷಣವೇ ಗೃಹ ಸಚಿವರಿಗೆ ಕರೆ ಮಾಡಿ ಮಾಹಿತಿ ಪಡೆಯಲಾಗಿದೆ. ಗಡಿ ವಿವಾದದ ವಿಚಾರವಾಗಿ ಡಿ.14 ಅಥವಾ ಡಿ.15 ರಂದು ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆದಿದ್ದು, ನಾನೂ ಅದಕ್ಕೆ ಹಾಜರಾಗುತ್ತಿದ್ದೇನೆ. ಇದಕ್ಕಿಂತಲೂ ಮುಂಚಿತವಾಗಿ ಸರ್ವ ಪಕ್ಷಗಳ ಸಭೆ ಕರೆಯಲಾಗುತ್ತದೆ. ಈಗಾಗಲೇ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಮಾತನಾಡಲಾಗಿದೆ. ಗೃಹಮಂತ್ರಿಗಳ ಮುಂದೆ ಚರ್ಚೆ ಮಾಡುವ ವೇಳೆ ಏನೆಲ್ಲಾ ವಿಚಾರಗಳನ್ನು ಮುಂದಿಡಬೇಕು ಎಂದು ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Border Issue: ನಾಳೆ ಬೆಳಗಾವಿಗೆ ಮಹಾ ಸಚಿವರು ಆಗಮನ: ಕನ್ನಡ ಸಂಘಟನೆಗಳಿಂದ ವಿರೋಧ

ಕರ್ನಾಟಕ ಸಂಸದರಿಂದಲೂ ಅಮಿತ್‌ಶಾ ಭೇಟಿ: ಮಹಾರಾಷ್ಟ್ರದ ಸಂಸದರು ಗೃಹ ಅಚುಇವ ಅಮಿತ್‌ ಶಾ ಅವರನ್ನು ಭೇಟಿಯಾಗಿ ಬಂದ ನಂತರ ಎಚ್ಚೆತ್ತುಕೊಂಡಿರುವ ಕರ್ನಾಟಕ ಸಂಸದರ ನಿಯೋಗವು ಸೋಮವಾರ ಅಮಿತ್‌ ಶಾ ಅವರನ್ನು ಭೇಟಿಯಾಗಿ ಚರ್ಚೆ ಮಾಡಲು ಮುಂದಾಗಿದೆ. ಈಗ ಎರಡೂ ರಾಜ್ಯಗಳ ಗಡಿಗಳಲ್ಲಿ ಆಗುತ್ತಿರುವ ಬೆಳವಣಿಗೆ ಮತ್ತು ಗಡಿ ವಿಚಾರವಾಗಿ ಈವರೆಗೆ ಸಂಭವಿಸಿರುವ ವಸ್ತು ಸ್ಥಿತಿಯನ್ನು ಗೃಹ ಸಚಿವರಿಗೆ ವಿವರಿಸಲಿದ್ದಾರೆ. ಇದಾದ ನಂತರ, ಮುಖ್ಯಮಂತ್ರಿಗಳ ಸಭೆಯ ವೇಳೆ ಉಳಿದ ಮಾಹಿತಿಯನ್ನು ನಾನು ಅಮಿತ್‌ ಶಾ ಅವರ ಮುಂದಿಡುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಗಡಿ ವಿವಾದದಲ್ಲಿ ವ್ಯತ್ಯಾಸ ಆಗೊಲ್ಲ: ಮಹಾರಾಷ್ಟ್ರದ ನಿಯೋಗ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿರುವುದು ಯಾವುದೇ ವ್ಯತ್ಯಾಸ ಆಗುವುದಿಲ್ಲ. ಈ ಹಿಂದೆ ಕೂಡ ಮಹಾರಾಷ್ಟ್ರ ಈ ರೀತಿಯ ಪ್ರಯತ್ನ ಮಾಡಿದೆ‌. ಈ ಪ್ರಕರಣ ಸುಪ್ರೀಂ ಕೊರ್ಟ್ ನಲ್ಲಿದೆ. ಸುಪ್ರೀಂ ಕೋರ್ಟ್ ನಲ್ಲಿ ನಮ್ಮ ನ್ಯಾಯ ಸಮ್ಮತ ಪ್ರಕರಣ ಗಟ್ಟಿಯಾಗಿದೆ. ಗಡಿ ವಿಚಾರದಲ್ಲಿ ನಮ್ಮ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ.‌ ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಸೋಮವಾರ ಕರ್ನಾಟಕದ ಸಂಸದರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಲು ತಿಳಿಸಿದ್ದೇನೆ.  ನಾನೂ ಕೂಡ ರಾಜ್ಯದ ನ್ಯಾಯ ಸಮ್ಮತ ನಿಲುವನ್ನು ತಿಳಿಸುತ್ತೇನೆ ಎಂದು ಮಾಹಿತಿ ನೀಡಿದರು.

Latest Videos
Follow Us:
Download App:
  • android
  • ios