ಬಿಜೆಪಿಯ ಅಸಮಾಧಾನಿತರು ಬರ್ತಾರೆ, ಅವರನ್ನು ಕಾಂಗ್ರೆಸ್ ಅಧ್ಯಕ್ಷರೊಂದಿಗೆ ಭೇಟಿ ಮಾಡಿಸ್ತೀನಿ: ಜಗದೀಶ್ ಶೆಟ್ಟರ್
ಬಿಜೆಪಿಯಲ್ಲಿ ಕೆಲವು ಅತೃಪ್ತರು ನನ್ನನ್ನು ಭೇಟಿ ಮಾಡಿ ಚರ್ಚೆ ಮಾಡ್ತಾರೆ, ನಾನು ಅವರನ್ನು ಕೆಪಿಸಿಸಿ ಅಧ್ಯಕ್ಷರೊಂದಿಗೆ ಭೇಟಿ ಮಾಡಿಸುತ್ತೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ಬೆಂಗಳೂರು (ಅ.17): ಲೋಕಸಭಾ ಚುನಾವಣೆಗೂ ಮುನ್ನವೇ ರಾಜ್ಯ ಬಿಜೆಪಿಯಲ್ಲಿ ಒಂದಷ್ಟು ಜನರಿಗೆ ಅಸಮಾಧಾನವಿದೆ. ಅಂತವರು ನನ್ನ ಜೊತೆ ಬಂದು ಚರ್ಚೆ ಮಾಡುತ್ತಿದ್ದಾರೆ. ಬಿಜೆಪಿಯಿಂದ ಬಂದವರನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಅಧ್ಯಕ್ಷರ ಜೊತೆ ಭೇಟಿ ಮಾಡಿಸುವ ಕೆಲಸ ಮಾಡ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ನಾನು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ. ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗೋದು ಬೇಡ ಅಂತ ನಿರ್ಧಾರ ಮಾಡಿದ್ದೇನೆ. ಇಲ್ಲೇ ಇದ್ದುಕೊಂಡು ಎಷ್ಟು ಸಾಧ್ಯವೋ ಅಷ್ಟು ಪಕ್ಷ ಸಂಘಟನೆ ಮಾಡ್ತಿದ್ದೇನೆ. ಬಿಜೆಪಿ ಪಕ್ಷದಲ್ಲಿ ಒಂದಷ್ಟು ಅಸಮಾಧಾನ ಇದೆ. ಅಂತವರು ನನ್ನ ಜೊತೆ ಬಂದು ಚರ್ಚೆ ಮಾಡ್ತಿದ್ದಾರೆ. ನಾನಾಗಿ ನಾನು ಎಂದೂ ಕೂಡ ಯಾರನ್ನೂ ಬಲವಂತವಾಗಿ ಕರೆತರ್ತಿಲ್ಲ. ಬಂದವರನ್ನ ಸಿಎಂ, ಅಧ್ಯಕ್ಷರ ಜೊತೆ ಭೇಟಿ ಮಾಡಿಸುವ ಕೆಲಸ ಮಾಡ್ತಿದ್ದೇನೆ ಎಂದು ಹೇಳಿದರು.
ಉಲ್ಟಾ ಹೊಡೆದ ಮಹಾಲಿಂಗೇಶ್ವರ ಸ್ವಾಮೀಜಿ: ಮೋದಿ ಆಯ್ಕೆ ಮಾಡಿಲ್ಲಾಂದ್ರೆ ಯಾರೂ ಉಳಿಯೊಲ್ಲವೆಂದು ನಾನು ಹೇಳಿಲ್ಲ
ರಮೇಶ್ ಜಾರಕಿಹೊಳಿ ವಾರಕ್ಕೊಮ್ಮೆ ಭೇಟಿಯಾಗ್ತಾರೆ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇವತ್ತು ಭೇಟಿಯಾಗಿಲ್ಲ. ಹಿಂದೆ ಅನೇಕ ಬಾರಿ ಭೇಟಿಯಾಗಿದ್ದಾರೆ. ಆದರೆ ಇವತ್ತು ಭೇಟಿಯಾಗಿಲ್ಲ. ರಾಜಕೀಯ ಚರ್ಚೆಗಳು ಹಿಂದೆಯೂ ನಡೆದಿಲ್ಲ. ರಮೇಶ್ ಜೊತೆಗೆ ಯಾವತ್ತೂ ರಾಜಕೀಯ ಚರ್ಚೆ ಆಗಿಲ್ಲ. ರಾಜಕಾರಣದ್ದು ಅವರೂ ಮಾತಾಡಿಲ್ಲ ನಾನೂ ಮಾತಾಡಿಲ್ಲ. ರಮೇಶ್ ಜಾರಕಿಹೊಳಿ ನಾನು ಬಹಳ ಆತ್ಮೀಯರು. ಅವರು ನನ್ನನ್ನ ಆಗಾಗ ಭೇಟಿ ಆಗ್ತಾನೆ ಇರ್ತಾರೆ. ವಾರಕ್ಕೊಮ್ಮೆ ಆದ್ರೂ ನನ್ನ ಭೇಟಿಯಾಗದಿದ್ರೆ ಅವರಿಗೆ ಸಮಾಧಾನ ಇಲ್ಲ. ಈ ಸಂದರ್ಭದಲ್ಲಿ ಎಂದೂ ರಾಜಕೀಯ ಚರ್ಚೆ ಮಾಡಿಲ್ಲ ಎಂದು ಹೇಳಿದರು.
ಆರೋಪ ಸಾಬೀತಾಗದೇ ರಾಜಕೀಯ ಮಾಡಬೇಡಿ: ಐಟಿ ದಾಳಿ ವಿಚಾರವಾಗಿ ನಾನು ಹುಬ್ಬಳ್ಳಿಯಲ್ಲಿ ಮಾಧ್ಯಮದ ಮುಂದೆ ಹೇಳಿದ್ದೇನೆ. ಐಟಿ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಐಟಿ ರೇಡ್ ಆದಾಗ ಅದರ ಹಣ ಎಷ್ಟಿದೆ ಅಂತ ಹೇಳ್ತಾರೆ. ಯಾರ ಮನೆಯಲ್ಲಿ ಎಷ್ಟು ಸಿಕ್ಕಿದೆ ಅಂತ ಐಟಿಯವರು ಹೇಳಬೇಕು. ನೇರವಾಗಿ ಕಾಂಗ್ರೆಸ್ ನಾಯಕರ ಮನೆಯಲ್ಲಿ ಸಿಕ್ಕಿದ್ರೆ ಅದನ್ನ ಆರೋಪ ಮಾಡಲಿ. ಆದ್ರೆ ಐಟಿ ಇಲಾಖೆಯೆ ಯಾರದ್ದು ಅಂತ ಹೇಳಿಲ್ಲ. ಇವರು ಹೇಗೆ ಆರೋಪ ಮಾಡ್ತಾರೆ. ಒಂದು ವೇಳೆ ಐಟಿ ಇಲಾಖೆಯೇ ಇವರಿಗೆ ಮಾಹಿತಿ ನೀಡಿದ್ರೆ ಅದು ಸರಿಯಲ್ಲ. ರಿಪೋರ್ಟ್ ಬರುವ ಮೊದಲೇ CBI ತನಿಖೆ ಅಂತಿದ್ದಾರೆ. ಬಿಜೆಪಿಯವರ ಮೇಲೆ ಭ್ರಷ್ಟಾಚಾರ ಆರೋಪ ಬರಲಿಲ್ವಾ.? ಬಿಟ್ ಕಾಯಿನ್, 40% ಎಲ್ಲಾ ಆರೋಪ ಬಿಜೆಪಿ ಮೇಲಿದೆ. ಆರೋಪ ಸಾಭೀತಾಗೋವರೆಗೂ ಕಾಯಿರಿ. ರಾಜಕೀಯ ಹಿನ್ನೆಲೆ ಇಟ್ಟುಕೊಂಡು ಈ ರೀತಿ ಆರೋಪ ಸರಿಯಲ್ಲ ಎಂದು ಕಿಡಿಕಾರಿದರು.
ತಮಿಳು ಗೊತ್ತಿಲ್ಲದೇ ತಮಿಳುನಾಡಿನಲ್ಲಿ ಬದುಕೋಕಾಗಲ್ಲ, ಇಲ್ಲಿ ಕನ್ನಡ ಬರದಿದ್ರೂ ಬದುಕಬಹುದು: ಸಿಎಂ ಸಿದ್ದರಾಮಯ್ಯ
ಕಾಂಗ್ರೆಸ್‌ನಲ್ಲಿದ್ದು ಬಿಜೆಪಿಯೊಳಗಿನ ವಿಚಾರ ಹೇಳುವುದನ್ನು ಸಹಿಸಲಾಗ್ತಿಲ್ಲ: ಶೆಟ್ಟರ್‌ಗೆ ಪಕ್ಷ ಎಲ್ಲವನ್ನೂ ನೀಡಿದೆ ಅಂತ ಅಶೋಕ್ ಹೇಳಿದ್ದಾರೆ. ಆದರೆ, ಈಗ ನಾನು ಕಾಂಗ್ರೆಸ್ ಒಳಗೆ ಇದ್ದುಕೊಂಡು ಬಿಜೆಪಿಯೊಳಗಿನ ಎಲ್ಲವನ್ನೂ ನಾನು ಹೇಳುತ್ತಿದ್ದೇನೆ. ಅದು ಅವರಿಗೆ ಸಹಿಸಲಾಗ್ತಿಲ್ಲ. ಇದರಲ್ಲೇ ಅವರು ಕಾಲ ಕಳೆಯುತ್ತಿದ್ದಾರೆ. ನೀವು ಒಬ್ಬ ವಿಪಕ್ಷ ನಾಯಕನ ಆಯ್ಕೆ ಮಾಡಲು ಆಗಿಲ್ಲ, ರಾಜ್ಯಾಧ್ಯಕ್ಷ ಆಯ್ಕೆ ಮಾಡಲಾಗಿಲ್ಲ. ಇವರು ಹೀಗೆ ಮಾತನಾಡೋದು ಸರಿಯಲ್ಲ. ಮೊದಲು ನಿಮ್ಮ ಪಕ್ಷದ ಸಮಸ್ಯೆ ಬಗೆಹರಿಸಿಕೊಳ್ಳಿ. ಮೈತ್ರಿ ಗಟ್ಟಿಯಾಗಿ ಮಾಡಿಕೊಳ್ಳಿ. ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ ಬಗ್ಗೆ ನಾನು ಏನೂ ಮಾತನಾಡೊಲ್ಲ. ಅದು ಅವರ ಪಕ್ಷದ ಆಂತರಿಕ ವಿಚಾರವಾಗಿದ್ದು, ದೇವೇಗೌಡರು ಹಾಗೂ ಇಬ್ರಾಹಿಂ ಕೂತು ಚರ್ಚೆ ಮಾಡಲಿ. ಅವರ ಪಕ್ಷದೊಳಗಿನ ಸಮಸ್ಯೆ ಬಗೆಹರಿಸಿಕೊಳ್ಳಲಿ ಎಂದು ಹೇಳಿದರು.