ಕಾಂಗ್ರೆಸ್ ಜನರ ದಿಕ್ಕು ತಪ್ಪಿಸಲು ಹುನ್ನಾರ ನಡೆಸುತ್ತಿದೆ ಮತ್ತು ಅಮಿತ್ ಶಾ ಬಗ್ಗೆ ಅಪಪ್ರಚಾರ ಮಾಡುತ್ತಿದೆ ಎಂದು ಸಂಸದ ಪಿ.ಸಿ. ಗದ್ದಿಗೌಡರ್ ಆರೋಪಿಸಿದ್ದಾರೆ. ಕಾಂಗ್ರೆಸ್ ಡಾ. ಅಂಬೇಡ್ಕರ್‌ಗೆ ಒಳ್ಳೆಯದನ್ನು ಬಯಸಿಲ್ಲ ಮತ್ತು ಈಗ ಅವರ ಹೆಸರು ಹೇಳಿಕೊಂಡು ರಾಜಕೀಯ ಮಾಡಲು ಮುಂದಾಗಿದೆ ಎಂದು ಅವರು ಹೇಳಿದರು.

ಜಮಖಂಡಿ (ಡಿ.28): ಜನರ ದಿಕ್ಕು ತಪ್ಪಿಸಲು ಕಾಂಗ್ರೆಸ್‌ ಹುನ್ನಾರ ನಡೆಸಿದ್ದು ಗೃಹ ಸಚಿವ ಅಮಿತ್‌ ಶಾ ಅವರ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ಶಾ ಅವರ ಪೂರ್ಣ ವಿಡಿಯೋ ಕೇಳಿದರೆ ಅವರ ಉದ್ದೇಶ ತಮಗೆ ಗೊತ್ತಾಗುತ್ತದೆ. ಜನರಿಗೆ ತಪ್ಪು ಮಾಹಿತಿ ನೀಡಿ ಕಾಂಗ್ರೆಸ್‌ ಗೊಂದಲ ಸೃಷ್ಟಿಸುತ್ತಿದೆ ಎಂದು ಲೋಕಸಭಾ ಸದಸ್ಯ ಪಿ.ಸಿ.ಗದ್ದಿಗೌಡರ ಆರೋಪಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಬಳಶೆಟ್ಟಿಯವರು ನೂತನವಾಗಿ ನಿರ್ಮಿಸಿದ ಟರ್ಫ್ ಮೈದಾನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಹಿಂದಿನಿಂದಲೂ ಡಾ.ಅಂಬೇಡ್ಕರ್‌ಗೆ ಒಳ್ಳೆಯದನ್ನು ಬಯಸಿಲ್ಲ. ಅವರನ್ನು ಬೆಂಬಲಿಸಿಲ್ಲ ಎಂಬುದು ಇತಿಹಾಸದಿಂದ ತಿಳಿಯುತ್ತದೆ. ಆದರೆ ಈಗ ಮಾತ್ರ ಅವರ ಹೆಸರು ಹೇಳಿಕೊಂಡು ರಾಜಕೀಯ ಮಾಡಲು ಮುಂದಾಗಿದೆ. ಬಿಜೆಪಿ ದೂಷಿಸುವ ಭರದಲ್ಲಿ ತನ್ನ ಕರ್ತವ್ಯ ಮರೆತಿದೆ. ಬಲಿಷ್ಟ ವಿರೋಧ ಪಕ್ಷವಾಗಿ ದೇಶದ ಅಭಿವೃದ್ಧಿ ಕೆಲಸ ಮಾಡ ಬೇಕಿದ್ದ ಕಾಂಗ್ರೆಸ್‌ ಗೊಂದಲ ಸೃಷ್ಟಿಸುತ್ತಿದೆ ಎಂದು ದೂರಿದರು.

ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ವೇಳೆ ರಾಹುಲ್ ಗಾಂಧಿ ಮಾಡಿದ್ದೇನು? ವೈರಲ್ ಆಗಿದೆ ಆಘಾತಕಾರಿ ವಿಡಿಯೋ!

ವಿಧಾನ ಪರಿಷತ್‌ನಲ್ಲಿ ಸಿ.ಟಿ.ರವಿ ಮಾತನಾಡಿದ್ದರ ಬಗ್ಗೆ ಸಭಾಪತಿಗಳು ಈಗಾಗಲೇ ಸ್ಪಷ್ಟ ಸಂದೇಶ ನೀಡಿದ್ದಾರೆ. ಕಾಂಗ್ರೆಸ್‌ಗೆ ಅದು ಬೇಕಿಲ್ಲ. ಸಂವಿಧಾನ ಬಾಹಿರವಾಗಿ ಸದನದೊಳಗೆ ಪೊಲೀಸರನ್ನು ಕರೆಯಿಸಿ ರಾದ್ಧಾಂತ ಮಾಡಲಾಗಿದೆ. ಪೊಲೀಸರನ್ನು ಬಳಸಿಕೊಂಡು ಮನ ಬಂದಂತೆ ಕಾಂಗ್ರೆಸ್‌ ನಡೆದುಕೊಂಡಿರುವುದು ಘೋರ ಅಪರಾಧ ಎಂದು ಗದ್ದಿಗೌಡರ ಅಭಿಪ್ರಾಯಪಟ್ಟರು.