ಪ್ರವೀಣ್‌ ಸೂದ್‌ ಸಿಬಿಐ ನಿರ್ದೇಶಕರಾಗಿ ನೇಮಕ ಹಿನ್ನೆಲೆ; ಡಿಜಿಪಿಯಾಗಿ ಅಲೋಕ್‌ ಪದಗ್ರಹಣ

ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಡಿಜಿಪಿ ಡಾ.ಅಲೋಕ್‌ ಮೋಹನ್‌ ಸೋಮವಾರ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಾಗಿ ಹೆಚ್ಚುವರಿ ಅಧಿಕಾರ ಸ್ವೀಕರಿಸಿದರು, ಇನ್ನೊಂದಡೆ ರಾಜ್ಯದ ನೂತನ ಅಡ್ವೊಕೇಟ್‌ ಜನರಲ್‌ (ಎಜಿ) ಹುದ್ದೆಗೆ ಹಿರಿಯ ವಕೀಲ ಕೆ. ಶಶಿಕಿರಣ್‌ ಶೆಟ್ಟಿಅವರನ್ನು ನೇಮಿಸಿ ರಾಜ್ಯ ಸರ್ಕಾರ ಸೋಮವಾರ ಆದೇಶಿಸಿದೆ.

Alok Mohan appointed as Additional DGP bengaluru city poice rav

ಬೆಂಗಳೂರು (ಮೇ.23) : ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಡಿಜಿಪಿ ಡಾ.ಅಲೋಕ್‌ ಮೋಹನ್‌ ಸೋಮವಾರ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಾಗಿ ಹೆಚ್ಚುವರಿ ಅಧಿಕಾರ ಸ್ವೀಕರಿಸಿದರು.

ನೃಪತುಂಗ ರಸ್ತೆಯ ರಾಜ್ಯ ಪೊಲೀಸ್‌ ಪ್ರಧಾನ ಕಚೇರಿ(State Police Headquarters bengaluru)ಯಲ್ಲಿ ನಿರ್ಗಮಿತ ಡಿಜಿಪಿ ಪ್ರವೀಣ್‌ ಸೂದ್‌(Praveen sood) ಅವರು ಬ್ಯಾಟನ್‌ ನೀಡುವ ಮುಖಾಂತರ ಅಧಿಕಾರ ಹಸ್ತಾಂತರಿಸಿದರು.

ಡಿಕೆಶಿ ಕೆಂಗಣ್ಣಿಗೆ ಗುರಿಯಾಗಿದ್ದ ಪ್ರವೀಣ್‌ ಸೂದ್‌ ಈಗ ಸಿಬಿಐ ನಿರ್ದೇಶಕರು: 2 ವರ್ಷಗಳ ಕಾಲ ನೇಮಕ

ಕೇಂದ್ರ ಸರ್ಕಾರವು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ನೇಮಿಸಿರುವುದರಿಂದ ರಾಜ್ಯ ಸರ್ಕಾರ ಪ್ರವೀಣ್‌ ಸೂದ್‌ ಅವರನ್ನು ರಾಜ್ಯ ಪೊಲೀಸ್‌ ಸೇವೆಯಿಂದ ಬಿಡುಗಡೆಗೊಳಿಸಿತು. ಇವರಿಂದ ತೆರವಾಗುವ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಹುದ್ದೆಯನ್ನು ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌(DGP alok mohan) ಅವರಿಗೆ ಹೆಚ್ಚುವರಿಯಾಗಿ ನೀಡಿ ಆದೇಶಿಸಿತ್ತು. ಅದರಂತೆ ಅಧಿಕಾರ ಹಸ್ತಾಂತರ ನಡೆಯಿತು.

ರಾಜ್ಯ ಪೊಲೀಸ್‌ ಪಡೆಯ ಮುಖ್ಯಸ್ಥರಾಗಿ ಅಲೋಕ್‌ ಮೋಹನ್‌ ಹೆಚ್ಚುವರಿ ಹೊಣೆ ಹೊತ್ತಿದ್ದಾರೆ. ಬಿಹಾರ ಮೂಲದ ಅಲೋಕ್‌ ಮೋಹನ್‌ 1987ನೇ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಪಿಎಸ್‌ ಅಧಿಕಾರಿ. ಕಾರಾಗೃಹ ಇಲಾಖೆ ಡಿಜಿಪಿ, ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಆಯುಕ್ತ, ಎಸಿಬಿ ಎಡಿಜಿಪಿ ಸೇರಿ ಹಲವು ಹುದ್ದೆಗಳಲ್ಲಿ 36 ವರ್ಷಗಳ ಸೇವಾ ಅನುಭ ಹೊಂದಿದ್ದಾರೆ. ರಾಜ್ಯ ಐಪಿಎಸ್‌ ಅಧಿಕಾರಿಗಳ ಸೇವಾ ಜೇಷ್ಠತೆ ಆಧಾರದಲ್ಲಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಹುದ್ದೆಗೆ ರೇಸ್‌ನಲ್ಲಿದ್ದರು. ಅಲೋಕ್‌ ಮೋಹನ್‌ ಅವರು 2025ರ ಏಪ್ರಿಲ್‌ಗೆ ಸೇವೆಯಿಂದ ನಿವೃತ್ತರಾಗಲಿದ್ದಾರೆ.

ನೂತನ ಅಡ್ವೊಕೇಟ್ ಜನರಲ್ ಆಗಿ ಶಶಿಕಿರಣ್‌ ಶೆಟ್ಟಿ ನೇಮಕ:

ಬೆಂಗಳೂರು ರಾಜ್ಯದ ನೂತನ ಅಡ್ವೊಕೇಟ್‌ ಜನರಲ್‌ (ಎಜಿ) ಹುದ್ದೆಗೆ ಹಿರಿಯ ವಕೀಲ ಕೆ. ಶಶಿಕಿರಣ್‌ ಶೆಟ್ಟಿಅವರನ್ನು ನೇಮಿಸಿ ರಾಜ್ಯ ಸರ್ಕಾರ ಸೋಮವಾರ ಆದೇಶಿಸಿದೆ.

ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ಹಿರಿಯ ವಕೀಲ ಕೆ. ಶಶಿಕಿರಣ್‌ ಶೆಟ್ಟಿಅವರನ್ನು ಎಜಿ ಆಗಿ ನೇಮಕ ಮಾಡಿದ್ದಾರೆ. ಈ ನೇಮಕಾತಿ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ರಾಜ್ಯ ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಭಾವತಿ ಎಂ. ಹಿರೇಮಠ ಅವರು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಶಶಿಕಲಾಗೆ ವಿಶೇಷ ಸೌಲಭ್ಯ ಕೇಸ್‌: ನಿವೃತ್ತ ಡಿಜಿಪಿ ಸತ್ಯನಾರಾಯಣ ಪಾರು

ಶಶಿಕಿರಣ್‌ ಶೆಟ್ಟಿ(shahikiran shetty)ಅವರು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತ ಪಿ.ವಿಶ್ವನಾಥ್‌ ಶೆಟ್ಟಿಅವರ ಪುತ್ರರಾಗಿದ್ದಾರೆ.

2018ರಲ್ಲಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಹಿರಿಯ ವಕೀಲ ಉದಯ್‌ ಹೊಳ್ಳ ಅಡ್ವೋಕೇಟ್‌ ಜನರಲ್‌(Advocate General) ಆಗಿದ್ದರು. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಬಿ.ಎಸ್‌. ಯಡಿಯೂರಪ್ಪ(BS Yadiyurappa)ಅವರ ಅವಧಿಯಲ್ಲಿ ಹಿರಿಯ ವಕೀಲ ಪ್ರಭುಲಿಂಗ ಕೆ. ನಾವದಗಿ ಅವರನ್ನು ಅಡ್ವೋಕೇಟ್‌ ಜನರಲ್‌ ಆಗಿ ನೇಮಿಸಲಾಗಿತ್ತು. ಬಸವರಾಜ ಬೊಮ್ಮಾಯಿ ಸರ್ಕಾರದಲ್ಲೂ ಅವರೇ ಎಜಿ ಹುದ್ದೆಯಲ್ಲಿ ಮುಂದುವರಿದಿದ್ದರು. ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಪ್ರಭುಲಿಂಗ ನಾವದಗಿ ರಾಜೀನಾಮೆ ನೀಡಿದ್ದರು. ಅವರಿಂದ ತೆರವಾದ ಸ್ಥಾನಕ್ಕೆ ಹಿರಿಯ ವಕೀಲ ಶಶಿಕಿರಣ್‌ ಶೆಟ್ಟಿಅವರನ್ನು ನೇಮಿಸಲಾಗಿದೆ.

Latest Videos
Follow Us:
Download App:
  • android
  • ios