Breaking ಡಿಕೆಶಿ ಕೆಂಗಣ್ಣಿಗೆ ಗುರಿಯಾಗಿದ್ದ ಪ್ರವೀಣ್‌ ಸೂದ್‌ ಈಗ ಸಿಬಿಐ ನಿರ್ದೇಶಕರು: 2 ವರ್ಷಗಳ ಕಾಲ ನೇಮಕ

ಕೇಂದ್ರ ಸರ್ಕಾರ ಪ್ರವೀಣ್‌ ಸೂದ್‌ ಅವರನ್ನು ಸಿಬಿಐ ಮಹಾನಿದೇಶಕರನ್ನಾಗಿ 2 ವರ್ಷಗಳ ಕಾಲ ನೇಮಕ ಮಾಡಿದೆ.

karnataka police chief praveen sood to be next cbi director for 2 years ash

ನವದೆಹಲಿ (ಮೇ  14, 2023): ಕರ್ನಾಟಕ ರಾಜ್ಯಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್‌ಗೆ ಸಿಬಿಐ ನಿರ್ದೇಶಕರ ಪಟ್ಟ ಒಲಿದುಬಂದಿದೆ. ಸಿಬಿಐ ಮಹಾನಿದೇಶಕರನ್ನಾಗಿ 2 ವರ್ಷಗಳ ಕಾಲ ನೇಮಕ ಮಾಡಿದೆ. ಈ ಸಂಬಂಧ ಅಧಿಕೃತ ಆದೇಶವೂ ಹೊರಬಿದ್ದಿದೆ. 

ಪ್ರವೀಣ್ ಸೂದ್ ರಾಜ್ಯ DG-IGP ಆಗಿದ್ದು, ಮೇ 25 ರಂದು ಅವರು 2 ವರ್ಷಗಳ ಕಾಲ ಅಧಿಕಾರ ಸ್ವೀಕರಿಸಲಿದ್ದಾರೆ. ಪ್ರಸ್ತುತ ಸಿಬಿಐ ನಿರ್ದೇಶಕ ಮೇ 25 ರಂದು ಅಧಿಕಾರ ಸ್ವೀಕರಿಸಲಿದ್ದು, ಸುಬೋಧ್‌ ಕುಮಾರ್ ಜೈಸ್ವಾಲ್ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆ ಸಿಬಿಐ ನಿರ್ದೇಶಕರಾಗಿ ನೇಮಕವಾಗುತ್ತಿದ್ದು, ಈ ಸಂಬಂಧ ಕೇಂದ್ರ ಸರ್ಕಾರ ಅಧಿಕೃತ ಆದೇಶ ನೀಡಿದೆ. 

ಇದನ್ನು ಓದಿ: ಮುಂದಿನ ಸಿಬಿಐ ನಿರ್ದೇಶಕರಾಗಿ ಕ್ರಿಕೆಟಿಗ ಮಯಾಂಕ್‌ ಅಗರ್‌ವಾಲ್‌ ಮಾವ ಪ್ರವೀಣ್‌ ಸೂದ್‌ ಆಯ್ಕೆ!

ಕರ್ನಾಟಕ ಕೇಡರ್ ನಿಂದ ಸಿಬಿಐ ನಿರ್ದೇಶಕರಾಗುತ್ತಿರುವವರ ಪೈಕಿ ಪ್ರವೀಣ್‌ ಸೂದ್‌ 3ನೇ ಅಧಿಕಾರಿ ಎಂದು ತಿಳಿದುಬಂದಿದೆ. ರಾಜೀವ್ ಗಾಂಧಿ ಹಂತಕರ ಪ್ರಕರಣ ತನಿಖೆ ನಡೆಸಿದ್ದ ಕಾರ್ತೀಕೇಯನ್, ಜೋಗಿಂದರ್ ಸಿಂಗ್ ಈ‌ ಹಿಂದೆ ಸಿಬಿಐ ನಿರ್ದೇಶಕರಾಗಿದ್ದರು. ದೇವೇಗೌಡರು ಪ್ರಧಾನಿಯಾಗಿದ್ದಾಗ ಜೋಗಿಂದರ್ ಸಿಂಗ್ ಸಿಬಿಐ ನಿರ್ದೇಶಕರಾಗಿದ್ದರು. ಇನ್ನು,ಸಿಬಿಐ ಮುಂದಿನ ನಿರ್ದೇಶಕರನ್ನು ಆಯ್ಕೆ ಮಾಡಲು ಕೇಂದ್ರ ಸರ್ಕಾರ ನೇಮಕ ಮಾಡಿದ್ದ ಸಮಿತಿ ಮೂವರ ಹೆಸರನ್ನು ಶಾರ್ಟ್‌ಲಿಸ್ಟ್‌ ಮಾಡಿ ಶಿಫಾರಸು ಮಾಡಿತ್ತು. ಈ ಪೈಕಿ, ಕರ್ನಾಟಕದ ರಣಜಿ ಆಡುವ ಹಾಗೂ ಆರ್‌ಸಿಬಿ ತಂಡದಲ್ಲೂ ಆಡಿದ್ದ ಮಯಾಂಕ್‌ ಅಗರ್‌ವಾಲ್‌ ಅವರ ಮಾವ ಹಾಗೂ ರಾಜ್ಯದ ಡಿಜಿಪಿ ಪ್ರವೀಣ್‌ ಸೂದ್‌ ಅವರ ಹೆಸರನ್ನು ಸಹ ಶಿಫಾರಸು ಮಾಡಲಾಗಿತ್ತು.

ಪ್ರಧಾನ ಮಂತ್ರಿ, ಸಿಜೆಐ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿಯು ಎರಡು ವರ್ಷಗಳ ಅವಧಿಗೆ ಸಿಬಿಐ ನಿರ್ದೇಶಕರನ್ನು ಆಯ್ಕೆ ಮಾಡುತ್ತದೆ. ಈ ಅಧಿಕಾರಾವಧಿಯನ್ನು ಐದು ವರ್ಷಗಳವರೆಗೆ ವಿಸ್ತರಿಸಬಹುದು.

ಇದನ್ನೂ ಓದಿ: ಕಳುವಾದ ಮೊಬೈಲ್‌ ಪತ್ತೆಗೆ ಹೊಸ ತಂತ್ರಜ್ಞಾನ: ಹೊಸ ಸಿಮ್‌ ಹಾಕಿದರೂ ತಕ್ಷಣ ಮಾಹಿತಿ ಲಭ್ಯ!

ಪ್ರವೀಣ್‌ ಸೂದ್‌ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ರಕ್ಷಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮಾರ್ಚ್‌ ತಿಂಗಳಲ್ಲಿ ಆರೋಪಿಸಿದ್ದರು. ಅಲ್ಲದೆ, ಕಾಂಗ್ರೆಸ್ ನಾಯಕರ ವಿರುದ್ಧ ಇವರು ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಬಂಧಿಸುವಂತೆ ಡಿಕೆಶಿ ಕೋರಿದ್ದರು. ಈಗ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದು, ಡಿ.ಕೆ. ಶಿವಕುಮಾರ್‌ ಮುಂದಿನ ಸಿಎಂ ಎಂದೇ ಹೇಳಲಾಗುತ್ತಿದೆ. ಈ ನಡುವೆ, ಸಿಬಿಐ ಮುಖ್ಯಸ್ಥರನ್ನಾಗಿ ಪ್ರವೀಣ್‌ ಸೂದ್‌ ಅವರ ನೇಮಕವಾಗಿದೆ.

ಸೇವಾ ಹಿರಿತನ ಹೊಂದಿರುವ ಅಲೋಕ್ ಮೋಹನ್ ಅವರು ರಾಜ್ಯ ಡಿಜಿ/ಐಜಿಪಿ ಹುದ್ದೆಯ ಅಧಿಕಾರ ಒಲಿಯಲಿದೆ ಎಂದು  ತಿಳಿದುಬಂದಿದೆ. ನೂತನ‌ ಸರ್ಕಾರ ಇನ್ನೊಂದೆಡೆ ಸಿಬಿಐಗೆ ಡಿಜಿಪಿ ಪ್ರವೀಣ್ ಸೂದ್ ನೇಮಕವಾಗಿರುವ ಹಿನ್ನೆಲೆ ರಾಜ್ಯ ಡಿಜಿ/ಐಜಿಪಿ ಹುದ್ದೆ ಡಾ. ಅಲೋಕ್‌ ಮೋಹನ್‌ ಅವರಿಗೆ ಒಲಿಯಲಿದೆ. ಸದ್ಯ ಅಲೋಕ್ ಮೋಹನ್ ಅಗ್ನಿಶಾಮಕ, ತುರ್ತು ಸೇವೆ ಹಾಗೂ ಗೃಹರಕ್ಷಕ ದಳದ  ಡಿಜಿಪಿ ಆಗಿದ್ದಾರೆ. 

ಬಿಹಾರ ಮೂಲದ ಅಲೋಕ್‌ ಮೋಹನ್ 1987ರಲ್ಲಿ ಐಪಿಎಸ್‌ಗೆ ಆಯ್ಕೆ ಆಗಿದ್ರು. ಸದ್ಯ ರಾಜ್ಯ ಐಪಿಎಸ್ ಅಧಿಕಾರಿಗಳಲ್ಲಿಜಾರಿ ಬಂದ ಬಳಿಕ ಆದೇಶ ಜಾರಿಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 
 

Latest Videos
Follow Us:
Download App:
  • android
  • ios