ಬಿಜೆಪಿ ಕಾಲದ ದಂಧೆ ಸಿ.ಟಿ.ರವಿಗೆ ಈಗ ನೆನಪಾಗ್ತಿರಬೇಕು: ತಂಗಡಗಿ
ಕಾಂಗ್ರೆಸ್ ಸರ್ಕಾರದ ವಿರುದ್ಧ 15 ಪರ್ಸೆಂಟ್ ಕಮಿಷನ್ ಆರೋಪ ಮಾಡಿರುವ ಮಾಜಿ ಶಾಸಕ ಸಿ.ಟಿ.ರವಿ ವಿರುದ್ಧ ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರಟಗಿ (ಹುಬ್ಬಳ್ಳಿ) (ಆ.14): ಕಾಂಗ್ರೆಸ್ ಸರ್ಕಾರದ ವಿರುದ್ಧ 15 ಪರ್ಸೆಂಟ್ ಕಮಿಷನ್ ಆರೋಪ ಮಾಡಿರುವ ಮಾಜಿ ಶಾಸಕ ಸಿ.ಟಿ.ರವಿ ವಿರುದ್ಧ ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಾಲದಲ್ಲಿ ನಡೆದ ವಸೂಲಿಗಳ ಬಗ್ಗೆ ನಾವು ಸಾಕಷ್ಟುಉದಾಹರಣೆ ಕೊಡಬಲ್ಲೆವು. ಸಿ.ಟಿ.ರವಿ ಅವರು ಈ ರೀತಿ ಮಾತನಾಡಿದ್ದಕ್ಕೇ ಜನ ಈಗಾಗಲೇ ಅವರಿಗೆ ಶಿಕ್ಷೆ ಕೊಟ್ಟಿದ್ದಾರೆ. ಬಹುಶಃ ಅವರ ಕಾಲದ ವಸೂಲಿಗಳ ಬಗ್ಗೆ ಅವರಿಗೆ ಈಗ ನೆನಪಾಗಿರಬೇಕು ಎಂದು ತಿರುಗೇಟು ನೀಡಿದ್ದಾರೆ.
ತಾಲೂಕಿನ ಸಿದ್ದಾಪುರದಲ್ಲಿ ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿ ಸಿ.ಟಿ.ರವಿ(CT Ravi) ವಿರುದ್ಧ ಕಿಡಿಕಾರಿದರು. ಕಾಂಗ್ರೆಸ್ ಶಾಸಕರಿಗೆ ಕಮಿಷನ್ ಪಡೆಯುವಂಥ ಪರಿಸ್ಥಿತಿ ಬಂದಿಲ್ಲ. ನಾವು ಯಾವುದೇ ಕಾಮಗಾರಿಗೂ ಹಣ ಬಿಡುಗಡೆ ಮಾಡಿಲ್ಲ. ಹಾಗಾಗಿ ಶೇ.15 ಕಮಿಷನ್ ಮಾತು ಎಲ್ಲಿಂದ ಬಂತು? ಅವರ ಕಾಲದಲ್ಲಾದ ಶೇ.40 ಹಗರಣದ ತನಿಖೆ ಮಾಡುವಂತೆ ಬಿಜೆಪಿಯವರೇ ಸದನದಲ್ಲಿ ಹೇಳಿದ್ದರು. ನಾವು ತನಿಖೆಗೆ ಈಗಾಗಲೇ ತಂಡ ರಚಿಸಿದ್ದೇವೆ. 30 ದಿನಗಳಲ್ಲಿ ಈ ಕುರಿತು ವರದಿ ನೀಡಲು ಐವರು ಐಎಎಸ್ ಅಧಿಕಾರಿಗಳನ್ನು ನೇಮಿಸಿದ್ದೇವೆ ಎಂದರು.
ಕಮಿಷನ್ ಕೇಳಿಲ್ಲ ಎಂದರೆ ಡಿಕೆಶಿ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ: ಸಿಟಿ ರವಿ ಸವಾಲು
ಕಾಮಗಾರಿಗಳಲ್ಲಿ ಬಿಜೆಪಿಯ ಮಾಜಿ ಸಚಿವ ಅಶ್ವತ್‌್ಥ ನಾರಾಯಣ(Ashwath narayana), ಮಾಜಿ ಸಿಎಂ ಬಸವರಾಜ ಬೊಮ್ಮಾಯಿ(Basavaraj bommai), ಸಿ.ಟಿ.ರವಿ ಪಾಲುದಾರರಿರಬೇಕು. ತನಿಖೆ ಮಾಡುವವರೆಗೂ ಸಮಾಧಾನ ಇರಲಿ. ಅವರಿಗೇಕೆ ಇಷ್ಟೊಂದು ಅವಸರ? ಪ್ರಾಮಾಣಿಕ ಗುತ್ತಿಗೆದಾರರಿಗೆ ಹಣ ಬಂದೇ ಬರುತ್ತದೆ. ಐಎಎಸ್ ಅಧಿಕಾರಿಗಳು ವರದಿ ನೀಡಲಿ, ತಪ್ಪಿತಸ್ಥರು ಯಾರೆಂದು ತಿಳಿಯುತ್ತದೆ ಎಂದರು.
ಭ್ರಷ್ಟಾಚಾರ ಕಾಂಗ್ರೆಸ್ಸಿನ ಇನ್ನೊಂದು ಮುಖ ಹೇಳಿಕೆಗೆ ಪರಂ ಆಕ್ರೋಶ
ದಾಬಸ್‌ಪೇಟೆ (ಬೆಂಗಳೂರು ಗ್ರಾಮಾಂತರ): ಭ್ರಷ್ಟಾಚಾರ ಎಂಬುದು ಕಾಂಗ್ರೆಸ್‌ನ ಮತ್ತೊಂದು ಮುಖ ಎಂಬ ಮಾಜಿ ಸಚಿವ ಸಿ.ಟಿ.ರವಿ ಆರೋಪಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತೀವ್ರ ಕಿಡಿಕಾರಿದ್ದಾರೆ. ನಮ್ಮ ವಿರುದ್ಧ ಆರೋಪ ಮಾಡುವ ಮೊದಲು ಬಿಜೆಪಿಯವರು ತಮ್ಮನ್ನು ತಾವು ವಿಶ್ಲೇಷಣೆ ಮಾಡಿಕೊಳ್ಳುವುದು ಒಳಿತು ಎಂದು ತಿರುಗೇಟು ನೀಡಿದರು.
ಬೇಗೂರು ಗ್ರಾಮದಲ್ಲಿ ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಭ್ರಷ್ಟಾಚಾರದ ವಿಚಾರವಾಗಿ ಬಿಜೆಪಿಯವರು ನಮ್ಮ ವಿರುದ್ಧ ಬೊಟ್ಟು ಮಾಡಿ ತೋರಿಸುವುದು ಬೇಡ. ಮೊದಲು ಅವರು ತಮ್ಮನ್ನೇ ವಿಶ್ಲೇಷಣೆ ಮಾಡಿಕೊಳ್ಳುವುದು ಒಳಿತು. ಯಾರು ಏನೇನೋ ಹೇಳುತ್ತಾರೆ ಎಂದು ಅದಕ್ಕೆಲ್ಲ ಉತ್ತರ ಕೊಡಲು ಆಗುತ್ತಾ? ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ನಡೆಸುತ್ತಿದ್ದಾಗ ಜನ ಛೀ, ಥೂ ಅಂತ ಬೈದಿದ್ದು ಯಾವ ಮುಖ ಎಂದು ತಿರುಗೇಟು ನೀಡಿದರು.
ನಮ್ಮ ಸರ್ಕಾರ ಆರೋಗ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದು, ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದವರು ಗ್ರಾಮೀಣ ಪ್ರದೇಶದಲ್ಲಿ ಒಂದು ವರ್ಷ ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಚರ್ಚೆ ನಡೆಸಿದ್ದೇವೆ. ಈ ನಿಯಮ ಕೂಡಲೇ ಅನುಷ್ಠಾನಕೆ ತರಲಿದ್ದೇವೆ ಎಂದರು.