Asianet Suvarna News Asianet Suvarna News

ಹೊಸ ಕಾಮಗಾರಿಯೇ ಆರಂಭವಾಗಿಲ್ಲ, ಕಮೀಷನ್‌ ಹೇಗೆ ಕೇಳೋದು?: ಸಂತೋಷ್ ಲಾಡ್ ವ್ಯಂಗ್ಯ

ಗುತ್ತಿಗೆದಾರರಿಂದ ಕಾಂಗ್ರೆಸ್‌ ಸರ್ಕಾರ ಕಮಿಷನ್‌ ಪಡೆದುಕೊಳ್ಳುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು. ಕಾಂಗ್ರೆಸ್‌ ಸರ್ಕಾರ ಬಂದಾಗಿನಿಂದ ಯಾವುದೇ ಹೊಸ ಟೆಂಡರ್‌ ಕರೆದಿಲ್ಲ. ಹೊಸ ಕಾಮಗಾರಿ ಆರಂಭಿಸಿಯೇ ಇಲ್ಲ. ಹೀಗಾಗಿ, ಗುತ್ತಿಗೆದಾರರಿಂದ ಕಮೀಷನ್‌ ಹೇಗೆ ಕೇಳುವುದು? ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ವ್ಯಂಗ್ಯವಾಡಿದರು.

Allegation of commission by contractor is false says minister santosh lad rav
Author
First Published Aug 13, 2023, 3:43 PM IST

ಧಾರವಾಡ (ಆ.13) :  ಗುತ್ತಿಗೆದಾರರಿಂದ ಕಾಂಗ್ರೆಸ್‌ ಸರ್ಕಾರ ಕಮಿಷನ್‌ ಪಡೆದುಕೊಳ್ಳುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು. ಕಾಂಗ್ರೆಸ್‌ ಸರ್ಕಾರ ಬಂದಾಗಿನಿಂದ ಯಾವುದೇ ಹೊಸ ಟೆಂಡರ್‌ ಕರೆದಿಲ್ಲ. ಹೊಸ ಕಾಮಗಾರಿ ಆರಂಭಿಸಿಯೇ ಇಲ್ಲ. ಹೀಗಾಗಿ, ಗುತ್ತಿಗೆದಾರರಿಂದ ಕಮೀಷನ್‌ ಹೇಗೆ ಕೇಳುವುದು? ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ವ್ಯಂಗ್ಯವಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಹೊಸ ಕಾಮಗಾರಿ ಆರಂಭಿಸಿದ್ದರೆ ಕಮೀಷನ್‌ ಅಥವಾ ಭ್ರಷ್ಟಾಚಾರದ ಪ್ರಶ್ನೆ ಉದ್ಭವವಾಗಬಹುದಿತ್ತು. ಈಗ ಆ ಪ್ರಶ್ನೆ ಎದುರಾಗೋದಿಲ್ಲ. ಆದರೆ, ಬಿಜೆಪಿ ಮುಂಚಿತವಾಗಿ ಟೆಂಡರ್‌ ಕರೆದು ದುಡ್ಡಿಲ್ಲದೇ ಬಿಟ್ಟು ಹೋಗಿದೆ. ಯಾರು ಎಷ್ಟುಕೆಲಸ ಮಾಡಿದ್ದಾರೆ ಎನ್ನುವುದನ್ನು ನೋಡಬೇಕಿದೆ. ಆಯಾ ಇಲಾಖಾವಾರು ಕೆಲಸ ನೋಡಿ ಬಿಲ್‌ ಬಿಡುಗಡೆ ಮಾಡಲಾಗುತ್ತದೆ. ಈ ರೀತಿ ಸುಮ್ಮನೆ ಆಪಾದನೆ ಮಾಡೋದು ಸರಿಯಲ್ಲ. ಹಳೆಯ ಬಿಲ್‌ ಅನ್ನು ನಾವು ಕೊಟ್ಟೇ ಕೊಡುತ್ತೇವೆ. ಈಗಾಗಲೇ ಅನೇಕ ಜಿಲ್ಲೆಯಲ್ಲಿ ಬಾಕಿ ಬಿಲ್‌ ಬಿಡುಗಡೆಯಾಗುತ್ತಿವೆ ಎಂದರು.

ಧಾರವಾಡ ಗೌಳಿವಾಡಾ ಜನವಸತಿ ಕಂದಾಯ ಗ್ರಾಮಗಳಾಗಿ ಪರಿವರ್ತನೆ: ಸಚಿವ ಸಂತೋಷ್ ಲಾಡ್

ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಬರುವ ಬಾಕಿ ಅನುದಾನಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದರಲ್ಲಿ ಯಾವುದೇ ರಾಜಕೀಯ ಇಲ್ಲ. 2018ರಿಂದ ಇಲ್ಲಿಯವರೆಗೂ ವಿವಿಗೆ ಅನುದಾನ ಬಂದಿಲ್ಲ. ಹೀಗಾಗಿ .230 ಕೋಟಿ ಅನುದಾನ ಬರಬೇಕಿದೆ. ಇದಕ್ಕೆ ಸಂಬಂಧಿಸಿದ ಸಚಿವರು ಮತ್ತು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇನೆ. ಮುಂದೆ ಹಣಕಾಸು ಇಲಾಖೆ ಅನುಮತಿ ಪಡೆದು ಅನುದಾನ ನೀಡಲಾಗುವುದು ಎಂದರು.

ಲೋಕಸಭಾ ಚುನಾವಣೆ ರಣತಂತ್ರ; ನಾಳೆ ಸಚಿವ ಸಂತೋಷ್ ಲಾಡ್ ದೆಹಲಿಗೆ

Follow Us:
Download App:
  • android
  • ios