ಕಾನೂನು, ಸುವ್ಯವಸ್ಥೆ ಪೊಲೀಸರ ವಿರುದ್ಧದ ಲಂಚದ ಆರೋಪಕ್ಕೆ ಕಡಿವಾಣ ಹಾಕಲು Bodyworn Camera ಬಳಕೆ
ರಾತ್ರಿ ವೇಳೆ ಪೊಲೀಸರು ಅಮಾಯಕರನ್ನ ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದರು ಎಂಬ ಆರೋಪ ಹಿನ್ನೆಲೆ. ಸುಲಿಗೆ ಮಾಡುವ ಪೊಲೀಸರಿಗೆ ಕಡಿವಾಣ ಹಾಕಲು ಬಾಡಿ ವೋರ್ನ್ ಕ್ಯಾಮೆರಾ ವನ್ನು ಆಗ್ನೇಯ ವಿಭಾಗದ ಲಾ ಅಂಡ್ ಆರ್ಡರ್ ಪೊಲೀಸರು ಮೊದಲ ಬಾರಿಗೆ ತಂದಿದ್ದಾರೆ.
ಬೆಂಗಳೂರು (ಜ.12): ಅಮಾಯಕರನ್ನ ಸುಲಿಗೆ ಮಾಡುವ ಪೊಲೀಸರಿಗೆ ಕಡಿವಾಣ ಹಾಕಲು ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ಹೊಸ ಪ್ರಯತ್ನ ಮಾಡಿದ್ದಾರೆ.
ಲಂಚ ಪ್ರಕರಣ ತಡೆಗಟ್ಟಲು ಟ್ರಾಫಿಕ್ ಪೊಲೀಸರಿಗೆ ಇದ್ದ ಬಾಡಿ ವೋರ್ನ್ ಇತ್ತು. ಆದರೆ ಈಗ ಬಾಡಿ ಕ್ಯಾಮೆರಾ ಲಾ ಅಂಡ್ ಆರ್ಡರ್ ಪೊಲೀಸ್ರಿಗೂ ನೇತಾಕಿಕೊಳ್ಳಲು ಆಗ್ನೇಯ ವಿಭಾಗ ಡಿಸಿಪಿ ಸಿಕೆ ಬಾಬಾರಿಂದ ಮತ್ತೊಂದು ವಿನೂತನ ಪ್ರಯತ್ನ ಮಾಡಿದ್ದಾರೆ.
ರಾತ್ರಿ ವೇಳೆ ಪೊಲೀಸರು(Police) ಅಮಾಯಕರನ್ನ ಅಡ್ಡಗಟ್ಟಿ ಸುಲಿಗೆ(extortion)ಮಾಡುತ್ತಿದ್ದರು. ಸುಲಿಗೆ ಮಾಡುವ ಪೊಲೀಸರಿಗೆ ಕಡಿವಾಣ ಹಾಕಲು ಬಾಡಿ ವೋರ್ನ್ ಕ್ಯಾಮೆರಾ(Body Worn camer)ವನ್ನು ಆಗ್ನೇಯ ವಿಭಾಗದ ಲಾ ಅಂಡ್ ಆರ್ಡರ್(Law and Order) ಪೊಲೀಸರು ಮೊದಲ ಬಾರಿಗೆ ತಂದಿದ್ದಾರೆ.
Bengaluru: ಪೊಲೀಸರು ಲಂಚ ಕೇಳಿದರೆ ತಕ್ಷಣ ಕ್ಯೂಆರ್ ಕೋಡಲ್ಲಿ ದೂರು ನೀಡಿ!
ರಾತ್ರಿ ತಪಾಸಣೆ ವೇಳೆ ಬಾಡಿ ವೋರ್ನ್ ಕ್ಯಾಮೆರಾ ಬಳಕೆಗೆ ಚಾಲನೆ ನೀಡಲಾಗಿದೆ. ಮೊದಲ ಹಂತದಲ್ಲಿ 50 ಬಾಡಿ ವೋರ್ನ್ ಕ್ಯಾಮೆರಾ ಬಳಕೆ ಮಾಡಲಾಗುತ್ತಿದೆ. ಇತ್ತೀಚೆಗೆ ರಾತ್ರಿ ಪಾಳಯದ ಆಡುಗೋಡಿ(Adugodi, ಸಂಪಿಗೆಹಳ್ಳಿ(Sampigehalli) ಪೊಲೀಸರ ಮೇಲೆ ಪದೇಪದೆ ಲಂಚ ಸ್ವೀಕಾರ ಆರೋಪಗಳು ಕೇಳಿ ಬರುತ್ತಿತ್ತು. ಲಂಚ,ಸುಲಿಗೆ ಸೇರಿದಂತೆ ಅನುಚಿತ ವರ್ತನೆ ಆರೋಪಗಳು ಕೇಳಿ ಬಂದಿತ್ತು. ಹೀಗಾಗಿ ಆಗ್ನೇಯ ವಿಭಾಗದ ಡಿಸಿಪಿ ಡಿಸಿಪಿ ಸಿಕೆ ಬಾಬಾ ಬಾಡಿ ವೋರ್ನ್ ಕ್ಯಾಮೆರಾ ಮೊರೆಹೋಗಿದ್ದಾರೆ. ರಾತ್ರಿ ತಪಾಸಣೆ ಮಾಡೋ ಸಿಬ್ಬಂದಿ ಬಾಡಿ ವೋರ್ನ್ ಕ್ಯಾಮೆರಾ ಧರಿಸಿ ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ. ಈ ಮೂಲಕ ಪೊಲೀಸ್ರ ನಡವಳಿಕೆ ಬಗ್ಗೆ ಪ್ರತಿ ನಿತ್ಯದ ವಿಡಿಯೋ ರೆಕಾರ್ಡ್ ನ್ನ ಡಿಸಿಪಿ ಮಾನಿಟರಿಂಗ್ ಮಾಡಲಿದ್ದಾರೆ. ಈ ಮೂಲಕ ಪೊಲೀಸ್ರ ಮೇಲಿನ ಆರೋಪಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ.
ACB Raids: ಲಂಚಕ್ಕೆ ಬೇಡಿಕೆ: ಭೋವಿ ನಿಗಮದ ಅಧಿಕಾರಿಗಳಿಗೆ ಎಸಿಬಿ ಬಿಸಿ