Asianet Suvarna News Asianet Suvarna News

ಅನಧಿಕೃತ ಮನೆಗಳ ಸಕ್ರಮ : ಮಾ.31ರವರೆಗೆ ವಿಸ್ತರಣೆ

  • 2015ರ ಜ.1ಕ್ಕಿಂತ ಮೊದಲು ಅನಧಿ​ಕೃತವಾಗಿ ನಿರ್ಮಿಸಿರುವ ಮನೆಗಳ ಸಕ್ರಮ
  • ಸಕ್ರಮಗೊಳಿಸುವ ಅವಕಾಶವನ್ನು 2022ರ ಮಾ.31ರವರೆಗೆ ವಿಸ್ತರಣೆ
  •  ಕಂದಾಯ ಸಚಿವ ಆರ್‌. ಅಶೋಕ್‌ ಮಾಹಿತಿ
Akrama Sakrama  Date Extended Till March 2022  Says R Ashok snr
Author
Bengaluru, First Published Jun 8, 2021, 7:29 AM IST

ಬೆಂಗಳೂರು (ಜೂ.08): ಗ್ರಾಮಾಂತರ ಮತ್ತು ನಗರ ಪ್ರದೇಶಗಳ ಸರ್ಕಾರಿ ಜಮೀನುಗಳಲ್ಲಿ 2015ರ ಜ.1ಕ್ಕಿಂತ ಮೊದಲು ಅನಧಿ​ಕೃತವಾಗಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸುವ ಅವಕಾಶವನ್ನು 2022ರ ಮಾ.31ರವರೆಗೆ ವಿಸ್ತರಿಸಲಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 94 ಸಿ ಮತ್ತು 94 ಸಿಸಿ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಮೊದಲು ಅರ್ಜಿಗಳನ್ನ ಸ್ವೀಕರಿಸಲು 2019ರ ಮಾ.31ರವರೆಗೆ ಕಾಲಾವಕಾಶ ನಿಗದಿಪಡಿಲಾಗಿತ್ತು. 

ಅಕ್ರಮ ಸಾಗುವಳಿ ಸಕ್ರಮಕ್ಕೆ ಮತ್ತೆ ಅರ್ಜಿ ಆಹ್ವಾನ ...

ಸದ್ಯಕ್ಕೆ 2022ರ ಮಾ.31ರ ಕಾಲಾವಕಾಶ ನೀಡಲಾಗಿದೆ. ಅರ್ಜಿಗಳನ್ನು ಸ್ವೀಕರಿಸಿ, ದಾಖಲೆಗಳ ಪರಿಶೀಲನೆ ನಡೆಸಿದ ನಂತರ ಫಲಾನುಭವಿಗಳಿಗೆ 2023ರ ಮಾ.31ರ ಹಕ್ಕುಪತ್ರಗಳನ್ನು ವಿತರಿಸಲಾಗುತ್ತದೆ ಎಂದು ಹೇಳಿದರು.

Follow Us:
Download App:
  • android
  • ios