Asianet Suvarna News Asianet Suvarna News

ಅಕ್ಕಮಹಾದೇವಿ ವಿವಿ: ಅನುದಾನ ಇಲ್ಲದಿದ್ರೂ 6ಕೋಟಿ ರೂ. ಖರ್ಚು ಮಾಡಿ ವಸ್ತುಸಂಗ್ರಹಾಲಯ ನಿರ್ಮಾಣ!

ಕರ್ನಾಟಕ ರಾಜ್ಯದಲ್ಲಿರುವ ಏಕೈಕ ಮಹಿಳಾ ವಿವಿಯಲ್ಲಿ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ನಿರ್ಮಾಣವಾಗಿ ನಿಂತಿರುವ  ವಸ್ತುಸಂಗ್ರಹಾಲಯ ಇದೀಗ ಹಲವು ಅನುಮಾನಕ್ಕೆ ಕಾರಣವಾಗಿದೆ. ಯಾಕಂದ್ರೆ ವಸ್ತು ಸಂಗ್ರಹಾಲಯ ನಿರ್ಮಿಸಲು ಪ್ರತ್ಯೇಕ ಹಣ ಬಾರದಿದ್ರೂ ಸಹ 6ಕೋಟಿ ವೆಚ್ಚದಲ್ಲಿ ಭವನ ನಿರ್ಮಿಸಲಾಗಿದ್ದು, ಇದೀಗ ಅರ್ಧಂಬರ್ಧ ಕೆಲಸ ಆಗಿ ನಿಂತಿದೆ.

Akkamahadevi Womens University Construction of museum without grant at vijayapur rav
Author
First Published Aug 20, 2023, 1:29 PM IST

- ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಆ.20) : ಕರ್ನಾಟಕ ರಾಜ್ಯದಲ್ಲಿರುವ ಏಕೈಕ ಮಹಿಳಾ ವಿವಿಯಲ್ಲಿ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ನಿರ್ಮಾಣವಾಗಿ ನಿಂತಿರುವ  ವಸ್ತುಸಂಗ್ರಹಾಲಯ ಇದೀಗ ಹಲವು ಅನುಮಾನಕ್ಕೆ ಕಾರಣವಾಗಿದೆ. ಯಾಕಂದ್ರೆ ವಸ್ತು ಸಂಗ್ರಹಾಲಯ ನಿರ್ಮಿಸಲು ಪ್ರತ್ಯೇಕ ಹಣ ಬಾರದಿದ್ರೂ ಸಹ 6ಕೋಟಿ ವೆಚ್ಚದಲ್ಲಿ ಭವನ ನಿರ್ಮಿಸಲಾಗಿದ್ದು, ಇದೀಗ ಅರ್ಧಂಬರ್ಧ ಕೆಲಸ ಆಗಿ ನಿಂತಿದೆ. ಇದರಿಂದಾಗಿ ಕೋಟಿಗಟ್ಟಲೇ ಹಣವೂ ವಿನಿಯೋಗ ಆಗಿದ್ದು, ಅದರ ಉಪಯೋಗವೂ ಇಲ್ಲದಂತಾಗಿದೆ. ಅಷ್ಟಕ್ಕೂ ವಿವಿಯ ಹಲವು ಅಭಿವೃದ್ಧಿ, ಅತ್ಯವಶ್ಯಕ ಕೆಲಸಗಳಿಗೆ ಹಣದ ಕೊರತೆ ಇರುವಾಗ ವಸ್ತುಸಂಗ್ರಹಾಲಯಕ್ಕೆ ಯಾಕೆ 6 ಕೋಟಿ ಖರ್ಚು ಮಾಡಿದ್ದಾರೆ ಎನ್ನುವ ಅನುಮಾನಗಳು ಜನರನ್ನ ಕಾಡುತ್ತಿದೆ. ಜೊತೆಗೆ ಇಷ್ಟೊಂದು ಕೋಟಿ ಖರ್ಚು ಮಾಡಿ ನಿರ್ಮಿಸಿರುವ ವಸ್ತುಸಂಗ್ರಹಾಲಯ ನಿರುಪಯುಕ್ತವಾಗಿ ನಿಂತಿರೋದು ಯಾಕೆ ಎನ್ನುವ ಡೌಟು ಸಹ ಕಾಡ್ತಿದೆ.. 

ವಸ್ತು ಸಂಗ್ರಹಾಲಯದ ಸುತ್ತ ಅನುಮಾನದ ಹುತ್ತ:

ವಿಜಯಪುರ ನಗರದ ತೊರವಿ ಬಳಿ ಇರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ನಿರ್ಮಾಣವಾಗಿ ನಿರುಪಯುಕ್ತವಾಗಿ ನಿಂತಿರುವ ವಸ್ತುಸಂಗ್ರಹಾಲಯ ಹಲವು ಅನುಮಾನಗಳಿಗೆ ಕಾರಣವಾಗಿದೆ. ಯಾಕಂದ್ರೆ ಕಳೆದ ಮೂರು ವರ್ಷಗಳ ಹಿಂದೆ ಇಲ್ಲಿ ಅಕ್ಕಮಹಾದೇವಿ ಮಹಿಳಾ ವಸ್ತು ಸಂಗ್ರಹಾಲಯ ನಿರ್ಮಿಸಲಾಗಿದೆ. ವಸ್ತು ಸಂಗ್ರಹಾಲಯಕ್ಕೆ ಅನುದಾನವೇ ಬಿಡುಗಡೆ ಆಗದಿದ್ರೂ 6ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಮಹಿಳಾ ವಿವಿಯಿಂದ 2019ರಲ್ಲಿ ವಸ್ತು ಸಂಗ್ರಹಾಲಯ ನಿರ್ಮಾಣದ ಕುರಿತು ಕೇಂದ್ರ ಸಾಂಸ್ಕ್ರತಿಕ ಸಚಿವಾಲಯಕ್ಕೆ 10 ಕೋಟಿ ವೆಚ್ಚದ ಪ್ರಸ್ತಾವನೆ ಕಳುಹಿಸಲಾಗಿದೆ. ಆದ್ರೆ ಅಲ್ಲಿಂದ ಹಣ ಬರುವ ಮೊದಲೇ ಇಲ್ಲಿ 6ಕೋಟಿ ವೆಚ್ಚದಲ್ಲಿ ಬೃಹತ್ ವಸ್ತು ಸಂಗ್ರಹಾಲಯ ನಿರ್ಮಿಸಲಾಗಿದೆ. ಅನುದಾನ ಬಿಡುಗಡೆಯಾಗದೆ ಅದ್ ಹೇಗೆ ವಸ್ತು ಸಂಗ್ರಹಾಲಯ ನಿರ್ಮಾಣವಾಯ್ತು ಅನ್ನೋದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

 

ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಕೊರತೆಗಳದ್ದೆ ಸಾಮ್ರಾಜ್ಯ!

ವಿದ್ಯಾರ್ಥಿಗಳ ಶುಲ್ಕ, ಪರೀಕ್ಷಾ ಶುಲ್ಕ ಬಳಕೆ:

ಇದಕ್ಕೆಲ್ಲ ವಿವಿಯ ವಿದ್ಯಾರ್ಥಿಗಳ ಶುಲ್ಕ, ಪರೀಕ್ಷಾ ಶುಲ್ಕ, ಇತರೇ ಅನುದಾನ ಬಳಸಲಾಗಿದೆ. ಅನುದಾನವೇ ಬಾರದೆ ಅದ್ಹೇಗೆ ಮ್ಯೂಸಿಯಂ ನಿರ್ಮಾಣ ಮಾಡಲಾಗಿದೆ ಎಂದ್ರೆ ಅದಕ್ಕೆ ಈಗಿನ ಉಪ ಕುಲಪತಿಗಳು ಹೇಳುವುದೇ ಬೇರೆ. ಈ ಹಿಂದಿನ ವೈಸ್ ಚಾನ್ಸಲರ್ ಇದ್ದಾಗ ಸಿಂಡಿಕೇಟ್ ಅನುಮತಿ ಪಡೆದು ಮ್ಯೂಸಿಯಂ 6ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದ್ರೆ ಹಣಕಾಸಿನ ಸಮಸ್ಯೆಯಿಂದಾಗಿ ಒಳಭಾಗದಲ್ಲಿನ ಕೆಲಸಗಳು ನಿಂತಿವೆ. ಇನ್ನೂ 4ಕೋಟಿ ಅನುದಾನ ಸಿಕ್ಕರೆ ಎಲ್ಲ ಪೂರ್ಣಗೊಂಡು ಉತ್ತಮ ವಸ್ತುಸಂಗ್ರಹಾಲಯ ಆಗಲಿದೆ ಎನ್ನುತ್ತಾರೆ ಪ್ರೊ. ತುಳಸಿಮಾಲಾ

ಇನ್ನೂ 4 ಕೋಟಿ ರೂಪಾಯಿಗೆ ಬೇಡಿಕೆ, ಸರ್ಕಾರಕ್ಕೆ ಪತ್ರ:

ಬಾಕಿ ಉಳಿದಿರುವ 4ಕೋಟಿ ಅನುದಾನಕ್ಕಾಗಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅನುದಾನ ಬರಬೇಕಿದೆ ಎಂದು ಉಪ ಕುಲಪತಿಗಳು ತಿಳಿಸಿದ್ದಾರೆ. ಕಟ್ಟಡ ನಿರ್ಮಾಣ ಆಗಿದ್ದು, 4ಲಕ್ಷ ಖರ್ಚುಮಾಡಿ ರಾಜ್ಯದ 31 ಜಿಲ್ಲೆಗಳಿಂದಲೂ ಸೇರಿ 4250 ವಸ್ತುಗಳನ್ನು ತಂದು ಸಂಗ್ರಹಿಸಿ ಇಡಲಾಗಿದೆ. ಆದ್ರೆ ಅವುಗಳಿಗೆ ಬೇಕಾದ ವ್ಯವಸ್ಥೆ ಮಾಡಿ ಅಚ್ಚುಕಟ್ಟಾಗಿ ಹೊಂದಿಸಿ ಮ್ಯೂಸಿಯಂ ಆರಮಭಿಸಲು ಹಣಕಾಸಿನ ಕೊರತೆ ಎದುರಾಗಿದೆ.

ವಸ್ತು ಸಂಗ್ರಹಾಲಯದಲ್ಲಿ ಈ ವರೆಗೆ ಏನೇನು ಸಂಗ್ರಹವಾಗಿದೆ‌:
ವಸ್ತುಗಳ ಸಂಗ್ರಹಕ್ಕು ಈಗಾಗಲೇ 4 ಲಕ್ಷ ವೆಚ್ಚವಾಗಿದೆ. ಹಿಂದಿನ ಕಾಲದ ಪಳೆಯುಳಿಕೆಗಳು, ಬೆಲೆಬಾಳುವ ವಸ್ತುಗಳು, ಹಿಂದಿನ ಬಳಕೆಯ ಸಾಮಾನುಗಳನ್ನು ಸಂಘ್ರಹಿಸಿ ಮುಂದಿನ ಪೀಳಿಗೆಗೆ ವೀಕ್ಷಣೆ ಮಾಡಲು ಮ್ಯೂಸಿಯಂ ನಿರ್ಮಿಸಿರುವುದು ತಪ್ಪಲ್ಲ. ಆದ್ರೆ ಅರ್ಧಂಬರ್ಧ ಮಾಡಿ ಬಿಟ್ಟಿರುವುದು ಎಲ್ಲರಿಗೂ ಸಮಸ್ಯೆಯಾಗಿದೆ. ವಿನಾಕಾರಣ ಕಟ್ಟಡ ಭೂತಬಂಗಲೆಯಾಗಿ ನಿರ್ಮಾಣಗೊಳ್ತಿದೆ.

 

ಪ್ರತಿಷ್ಠಿತ ಅಕ್ಕಮಹಾದೇವಿ ಮಹಿಳಾ ವಿ.ವಿಯಲ್ಲಿ ನೌಕರಿ ಕೊಡಿಸುವುದಾಗಿ ವಂಚನೆ!

ವಸ್ತು ಸಂಗ್ರಹಾಲಯ ಪೂರ್ಣಗೊಳಿಸಲು ಆಗ್ರಹ

ಆದಷ್ಟು ಬೇಗನೆ ವಸ್ತು ಸಂಗ್ರಹಾಲಯ ಪೂರ್ಣಗೊಳಿಸಿ ವಿದ್ಯಾರ್ಥಿಗಳು, ಆಸಕ್ತರ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು ಎಂದು ವಿವಿ ವಿದ್ಯಾರ್ಥಿಗಳು ಸಹಿತ ಆಸಕ್ತರು ಆಗ್ರಹಿಸುತ್ತಿದ್ದಾರೆ. ತಕ್ಷಣವೇ ಸರ್ಕಾರ ಇದರತ್ತ ಗಮನಹರಿಸಬೇಕು. ಮಹಿಳಾ ವಿವಿಯಲ್ಲಿ ತಲೆಯೆತ್ತಿರುವ ಅಕ್ಕಮಹಾದೇವಿ ವಸ್ತು ಸಂಗ್ರಹಾಲಯವನ್ನು ಪೂರ್ಣಗೊಳಿಸಿ ಪ್ರದರ್ಶನಕ್ಕೆ ಅನುಕೂಲ ಮಾಡಬೇಕಿದೆ.

 

Follow Us:
Download App:
  • android
  • ios