ಮಂಗಳಮುಖಿಗೆ ಉದ್ಯೋಗ ನಿರಾಕರಣೆ: ವಿಮಾನಯಾನ, ಏರ್ ಇಂಡಿಯಾಗೆ ಸುಪ್ರೀಂ ನೋಟಿಸ್
2014ರಲ್ಲಿಯೇ ಸುಪ್ರೀಂ ಕೋರ್ಟ್ ಮಂಗಳಮುಖಿಯರನ್ನು ತೃತೀಯ ಲಿಂಗಿಯರೆಂದು ಪರಿಗಣಿಸಬೇಕೆಂದು ಮಹತ್ವದ ತೀರ್ಪು ನೀಡಿದೆ. ಆದಾಗ್ಯೂ ಈ ಸಮುದಾಯದ ನೌಕರರನ್ನು ಹಲವು ಮುಂಚೂಣಿಯಲ್ಲಿರುವ ಸಂಸ್ಥೆಗಳು ಸಂಭವನೀಯ ಉದ್ಯೋಗಿಗಳೆಂದು ಪರಿಗಣಿಸುತ್ತಿಲ್ಲ.
ನವದೆಹಲಿ(ನ.07): ಮಂಗಳಮುಖಿ ವ್ಯಕ್ತಿಯೊಬ್ಬರಿಗೆ ಲಿಂಗ ಆಧಾರದ ಮೇಲೆ ಉದ್ಯೋಗ ನಿರಾಕರಿಸಿದ ಹಿನ್ನಲೆಯಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಹಾಗೂ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
2014ರಲ್ಲಿಯೇ ಸುಪ್ರೀಂ ಕೋರ್ಟ್ ಮಂಗಳಮುಖಿಯರನ್ನು ತೃತೀಯ ಲಿಂಗಿಯರೆಂದು ಪರಿಗಣಿಸಬೇಕೆಂದು ಮಹತ್ವದ ತೀರ್ಪು ನೀಡಿದೆ. ಆದಾಗ್ಯೂ ಈ ಸಮುದಾಯದ ನೌಕರರನ್ನು ಹಲವು ಮುಂಚೂಣಿಯಲ್ಲಿರುವ ಸಂಸ್ಥೆಗಳು ಸಂಭವನೀಯ ಉದ್ಯೋಗಿಗಳೆಂದು ಪರಿಗಣಿಸುತ್ತಿಲ್ಲ. ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿಯ ಉದ್ಯೋಗಕ್ಕಾಗಿ ಇಂಜಿನಿಯರಿಂಗ್ ಪದವಿಧರ ಶಾನ್ವಿ ಪೊನ್ನುಸ್ವಾಮಿ ಅವರಿಗೆ ಲಿಂಗ ವಿಭಾಗದಲ್ಲಿ ಮಹಿಳೆ ಎಂದು ನಮೂದಿಸದ ಕಾರಣ ಉದ್ಯೋಗವನ್ನು ನಿರಾಕರಿಸಿತ್ತು.
ಏರ್ ಇಂಡಿಯಾ'ದಲ್ಲಿ 400 ಕ್ಯಾಬಿನ್ ಸಿಬ್ಬಂದಿ ಹುದ್ದೆಗಳು ಖಾಲಿಯಿದ್ದವು. ಮಹಿಳಾ ವಿಭಾಗಕ್ಕೆ ಅರ್ಜಿ ಸಲ್ಲಿಸಿ ತಮ್ಮ ಅರ್ಜಿದಾರರು ಸಂಸ್ಥೆ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದರೂ ಮಂಗಳಮುಖಿ ಆದ ಕಾರಣ ಅವರಿಗೆ ಉದ್ಯೋಗವನ್ನು ನಿರಾಕರಿಸಲಾಗಿದೆ'. ಜೊತೆಗೆ ಗುಂಪು ಸಂದರ್ಶನಕ್ಕೂ ಹಾಜರಾಗಿದ್ದಾರೆ. ಆದರೆ ಅಂತಿಮ ಆಯ್ಕೆ ಪಟ್ಟಿಯಲ್ಲಿ ಹೆಸರಿರಲಿಲ್ಲ. ಅರ್ಜಿಯ ಲಿಂಗ ವಿಭಾಗದಲ್ಲಿ ಮಂಗಳಮುಖಿ ವಿಭಾಗವನ್ನು ಸೃಷ್ಟಿ ಮಾಡಿಲ್ಲ' ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠಕ್ಕೆ ಅರ್ಜಿದಾರರ ಪರ ವಕೀಲರು' ಮಾಹಿತಿ ನೀಡಿದರು.