Raichur AIIMS: 400ನೇ ದಿನಕ್ಕೆ ಕಾಲಿಟ್ಟಏಮ್ಸ್‌ ಹೋರಾ​ಟ!

ಜಿಲ್ಲೆಗೆ ಭಾರತ ವೈದ್ಯ​ಕೀಯ ವಿಜ್ಞಾ​ನ​ಗಳ ಸಂಸ್ಥೆ (ಏ​ಮ್ಸ್‌​) ಮಂಜೂರು ಮಾಡು​ವು​ದ​ಕ್ಕಾಗಿ ರಾಜ್ಯ ಸರ್ಕಾ​ರ​ದಿಂದ ಕೇಂದ್ರ ಸರ್ಕಾ​ರಕ್ಕೆ ಪತ್ರ ಬರೆ​ಯ​ಲಾ​ಗು​ವುದು ಎಂದು ಸಣ್ಣ ನೀರಾ​ವರಿ ಹಾಗೂ ವಿಜ್ಞಾನ ಮತ್ತು ತಂತ್ರ​ಜ್ಞಾನ ಸಚಿವ ಎನ್‌.​ಎ​ಸ್‌.​ಬೋ​ಸ​ರಾಜು ಭರ​ವಸೆ ನೀಡಿ​ದರು.

AIIMS demand for Raichur Struggle enters 400th day NS Boseraju minister rav

ರಾಯಚೂರು (ಜೂ.17) ಜಿಲ್ಲೆಗೆ ಭಾರತ ವೈದ್ಯ​ಕೀಯ ವಿಜ್ಞಾ​ನ​ಗಳ ಸಂಸ್ಥೆ (ಏ​ಮ್ಸ್‌​) ಮಂಜೂರು ಮಾಡು​ವು​ದ​ಕ್ಕಾಗಿ ರಾಜ್ಯ ಸರ್ಕಾ​ರ​ದಿಂದ ಕೇಂದ್ರ ಸರ್ಕಾ​ರಕ್ಕೆ ಪತ್ರ ಬರೆ​ಯ​ಲಾ​ಗು​ವುದು ಎಂದು ಸಣ್ಣ ನೀರಾ​ವರಿ ಹಾಗೂ ವಿಜ್ಞಾನ ಮತ್ತು ತಂತ್ರ​ಜ್ಞಾನ ಸಚಿವ ಎನ್‌.​ಎ​ಸ್‌.​ಬೋ​ಸ​ರಾಜು ಭರ​ವಸೆ ನೀಡಿ​ದರು.

ರಾಯ​ಚೂರು ಏಮ್ಸ್‌ ಮಂಜೂ​ರಾತಿ ಹೊರಾಟ ಸಮಿತಿ ನೇತೃ​ತ್ವ​ದಲ್ಲಿ ನಿರಂತ​ರ​ವಾಗಿ ನಡೆ​ಸು​ತ್ತಿ​ರುವ ಅನಿ​ರ್ದಿ​ಷ್ಟಾ​ವಧಿ ಧರಣಿ ಸತ್ಯಾ​ಗ್ರ​ಹವು ಶುಕ್ರ​ವಾರ 400ನೇ ದಿನ ಪೂರೈ​ಸಿದ ಹಿನ್ನೆ​ಲೆ ಸ್ಥಳೀಯ ಡಾ. ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಸಾವಿರಾರು ವಿದ್ಯಾರ್ಥಿಗಳು, ಯುವಜನರು, ಸಂಘ ಸಂಸ್ಥೆಗಳ ಸದಸ್ಯರು ಮಾನವ ಸರಪಳಿ ನಿರ್ಮಿಸಿ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಬೃಹತ್‌ ಸಮಾವೇಶದ ಸ್ಥಳಕ್ಕೆ ಆಗ​ಮಿ​ಸಿದ ಸಚಿ​ವ ಬೋಸ​ರಾಜು ಪ್ರತಿ​ಭ​ಟನೆ ಉದ್ದೇ​ಶಿಸಿ ಮಾತ​ನಾ​ಡಿ​ದ​ರು.

ಕಲ​ಬು​ರ​ಗಿಗೆ ಏಮ್ಸ್‌: ಶ​ರಣ ಪ್ರಕಾಶ ಹೇಳಿ​ಕೆಗೆ ರಾಯಚೂರು ಜಿಲ್ಲೆಯಲ್ಲಿ ತೀವ್ರ ವಿರೋಧ

ಈಗಾಗಲೇ ಏಮ್ಸ್‌ ವಿಚಾರದ ಕುರಿತು ಮುಖ್ಯಮಂತ್ರಿಗೆ ಮನವಿ ನೀಡಲಾಗಿದೆ. ಇದಕ್ಕೆ ಸ್ಪಂದಿಸಿರುವ ಅವರು, ರಾಯಚೂರಿಗೆ ಏಮ್ಸ್‌ ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಭರವಸೆ ನೀಡಿದ್ದಾರೆ. ನಮ್ಮ ಸರ್ಕಾರದ ಮುಖ್ಯ ಉದ್ದೇಶವೆ ರಾಯಚೂರಿಗೆ ಏಮ್ಸ್‌ ಮಂಜೂರು ಮಾಡಿಸುವುದು ಆಗಿದೆ. ಏಮ್ಸ್‌ ಸ್ಥಾಪಿಸುವ ಮೂಲಕ ಸ್ಥಳೀಯ ಆರೋಗ್ಯ ಕಾಪಾಡುವುದೇ ನಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದರು.

ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಡಾ.ಬಸವರಾಜ ಕಳಸ ಮಾತನಾಡಿ, ಹಿಂದಿನ ಡಬಲ್‌ ಎಂಜಿನ್‌ ಸರ್ಕಾರ ರಾಯಚೂರಿಗೆ ಏಮ್ಸ್‌ ಮಂಜೂರು ಮಾಡುವುದಾಗಿ ಹೇಳಿ ಕೊನೆಗೆ ಏಮ್ಸ್‌ ಮಾದರಿ ಆಸ್ಪತ್ರೆ ನೀಡುತ್ತೇವೆ ಎಂದಿತ್ತು. ಆದರೆ, ಕೊನೆಯಲ್ಲಿ ಮಹಾ ದ್ರೋಹ ಎಸಗಿದೆ. ಆದ್ದರಿಂದ ಪ್ರಸ್ತುತ ಕಾಂಗ್ರೆಸ್‌ ಸರ್ಕಾರ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಆದಷ್ಟುಶೀಘ್ರದಲ್ಲಿಯೇ ರಾಯಚೂರಿಗೆ ಏಮ್ಸ್‌ ಮಂಜೂರು ಮಾಡಿಸಲು ಒತ್ತು ನೀಡಬೇಕು ಎಂದರು.

ರಾಯಚೂರು: ಕಲಬುರಗಿಗೆ ಏಮ್ಸ್ ಎಂದ ಸಚಿವ ಶರ​ಣ​ಪ್ರ​ಕಾಶ ವಿರುದ್ಧ ಗೋ ಬ್ಯಾಕ್‌ ಚಳ​ವ​ಳಿ ಎಚ್ಚ​ರಿ​ಕೆ

ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರು ಸಮಾವೇಶದ ಸಾನ್ನಿಧ್ಯ ವಹಿಸಿದ್ದರು.

ಈ ವೇಳೆ ಹೋರಾಟ ಸಮಿತಿಯ ಅಶೋಕ್‌ ಜೈನ್‌, ಮಾರಪ್ಪ ಎಸ್‌., ಜಾನ್‌ ವೆಸ್ಲಿ, ಎನ್‌.ಮಹಾವೀರ್‌, ನರಸಪ್ಪ ಬಾಡಿಯಾಲ, ಬಸವರಾಜ ಮಿಮಿಕ್ರಿ, ಕಾಮರಾಜ್‌ ಪಾಟೀಲ್‌, ವೀರಭದ್ರಪ್ಪ ಅಂಬರಪೇಟೆ, ಚಾಂದ್‌ ಪಾಷಾ, ಹನುಮಪುರ, ವಿನಯ್‌ ಚಿತ್ರಗಾರ, ಪರಶುರಾಮ, ಥಾಮಸ್‌ ಬೆಂಜಮಿನ್‌, ಎಸ್‌.ಎಸ್‌.ಬಿರಾದಾರ್‌, ಸುಲೋಚನಾ, ಚಂದ್ರಶೇಖರ್‌ ಭಂಡಾರಿ, ಪಂಪನಗೌಡ ಮಾಚನೂರು ವೆಂಕಟರೆಡ್ಡಿ ದಿನ್ನಿ, ಜಶವಂತರಾವ್‌ ಕಲ್ಯಾಣ ಕಾರ, ವೆಂಕಯ್ಯ ಶೆಟ್ಟಿಹೊಸಪೇಟೆ, ಇಮ್ರಾನ್‌ ಬಡೇಸಾಬ್‌ ಸಾದಿಕ್‌ ಖಾನ್‌, ಜಿಲಾನಿ, ಆಂಜನೇಯ ಕುರುಬದೊಡ್ಡಿ, ಕಾಂಗ್ರೆಸ್‌ ಮುಖಂಡರಾದ ಶಾಂತಪ್ಪ, ಬಸವರಾಜ್‌ ಅತ್ತನೂರು, ಜಯವಂತರಾವ್‌ ಪತಂಗೆ ರುದ್ರಪ್ಪ ಅಂಗಡಿ, ತಾಯಣ್ಣ ಗೌಡ, ಜಿ.ಶಿವಮೂರ್ತಿ ಸೇರಿ ಅನೇಕರಿದ್ದರು.

Latest Videos
Follow Us:
Download App:
  • android
  • ios