ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌)ಯನ್ನು ರಾಯ​ಚೂರು ಜಿಲ್ಲೆ​ಯಲ್ಲಿ ಸ್ಥಾಪಿ​ಸ​ಬೇಕು ಎಂದು ಆಗ್ರ​ಹಿಸಿ ಕಳೆದ ಒಂದು ​ವರ್ಷಕ್ಕೂ ಹೆಚ್ಚಿನ ದಿನ​ಗ​ಳಿಂದ ನಿರಂತರ ಹೋರಾಟ ನಡೆ​ಸು​ತ್ತಿ​ದ್ದು. ಈ ಬಗ್ಗೆ ಗಮ​ನ​ಕ್ಕಿ​ದ್ದರು ಸಹ ನೂತನ ಸರ್ಕಾ​ರದ ವೈದ್ಯ​ಕೀಯ ಶಿಕ್ಷಣ ಸಚಿವ ಡಾ.ಶ​ರ​ಣ​ಪ್ರ​ಕಾಶ ಪಾಟೀಲ್‌ ಕಲ​ಬು​ರಗಿ ಜಿಲ್ಲೆಗೆ ಏಮ್ಸ್‌ ತರುವುದಾಗಿ ನೀಡಿ​ರುವ ಹಿನ್ನೆಲೆ ಗೋಬ್ಯಾಕ್ ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ರಾಯಚೂರು (ಜೂ.9) : ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌)ಯನ್ನು ರಾಯ​ಚೂರು ಜಿಲ್ಲೆ​ಯಲ್ಲಿ ಸ್ಥಾಪಿ​ಸ​ಬೇಕು ಎಂದು ಆಗ್ರ​ಹಿಸಿ ಕಳೆದ ಒಂದು ​ವರ್ಷಕ್ಕೂ ಹೆಚ್ಚಿನ ದಿನ​ಗ​ಳಿಂದ ನಿರಂತರ ಹೋರಾಟ ನಡೆ​ಸು​ತ್ತಿ​ದ್ದು. ಈ ಬಗ್ಗೆ ಗಮ​ನ​ಕ್ಕಿ​ದ್ದರು ಸಹ ನೂತನ ಸರ್ಕಾ​ರದ ವೈದ್ಯ​ಕೀಯ ಶಿಕ್ಷಣ ಸಚಿವ ಡಾ.ಶ​ರ​ಣ​ಪ್ರ​ಕಾಶ ಪಾಟೀಲ್‌ ಕಲ​ಬು​ರಗಿ ಜಿಲ್ಲೆಗೆ ಏಮ್ಸ್‌ ತರುವುದಾಗಿ ನೀಡಿ​ರುವ ಹೇಳಿ​ಕೆ ಖಂಡ​ನೀಯ ವಿಷ​ಯ​ವಾ​ಗಿದೆ. ಮುಂದಿನ ದಿನ​ಗ​ಳಲ್ಲಿ ಸಚಿವ ಡಾ.ಶ​ರ​ಣ​ಪ್ರ​ಕಾಶ ಪಾಟೀಲ್‌ ಜಿಲ್ಲೆಗೆ ಬಂದರೆ ಅವರ ವಿರುದ್ಧ ಗೋಬ್ಯಾಕ್‌ ಚಳ​ವ​ಳಿ​ ಮಾಡ​ಲಾ​ಗು​ವುದು ಎಂದು ರಾಯ​ಚೂರು ಏಮ್ಸ್‌ ಮಂಜೂ​ರಾತಿ ಹೋರಾಟ ಸಮಿತಿ ಸಂಚಾ​ಲಕ ಅಶೋಕ ಕುಮಾರ ಜೈನ್‌ ಎಚ್ಚ​ರಿ​ಸಿ​ದರು.

ಈ ಕುರಿತು ಗುರು​ವಾರ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾಡಿದ ಅವ​ರು, ನಗ​ರ​ದ​ಲ್ಲಿ ಕಳೆದ 392 ದಿನಗಳಿಂದ ಏಮ್ಸ್‌ಗಾಗಿ ನಿರಂತರ ಹೋರಾ​ಟ​ ನಡೆ​ಸ​ಲಾ​ಗು​ತ್ತಿದೆ. ಆದರೆ, ಸಚಿ​ವರು ಕಲಬುರಗಿಗೆ ಏಮ್ಸ್‌ ಬೇಕೆಂದು ಕೇಂದ್ರಕ್ಕೆ ಶಿಫಾ​ರಸ್ಸು ಮಾಡು​ತ್ತೇನೆ ಎಂದು ನುಡಿ​ದಿ​ರುವುದು ಖಂಡ​ನೀ​ಯ. ಕಲ್ಯಾಣ ಕರ್ನಾಟಕವೆಂದರೆ ಕೇವಲ ಕಲಬುರಗಿ ಮಾತ್ರವಲ್ಲ. ಐಐಟಿಯನ್ನು ಧಾರವಾಡಕ್ಕೆ ಕೊಂಡ್ಯೊಯ್ಯಲಾಯಿತು. ಬಿಜೆಪಿ ಆಡ​ಳಿ​ತ​ದಲ್ಲಿ ಏಮ್ಸ್‌ನ್ನು ಧಾರ​ವಾ​ಡಕ್ಕೆ ತೆಗೆ​ದು​ಕೊಂಡು ಹೋಗಲು ಯತ್ನಿ​ಸಿ​ದರು. ಇದೀಗ ರಾಜ್ಯ​ದಲ್ಲಿ ಅಧಿ​ಕಾ​ರಕ್ಕೆ ಬಂದಿ​ರುವ ಕಾಂಗ್ರೆಸ್‌ ಸರ್ಕಾರದಲ್ಲಿಯೂ ಏಮ್ಸ್‌ ವಿಚಾ​ರ​ದಲ್ಲಿ ಅಂಥÜದ್ದೆ ಹುನ್ನಾರವನ್ನು ಕಲಬುರಗಿ ರಾಜಕಾರಣಿಗಳು ಮಾಡುತ್ತಿದ್ದು, ಯಾವುದೇ ಕಾರ​ಣಕ್ಕು ಇದನ್ನು ಸಹಿಸುವುದು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಲ​ಬು​ರ​ಗಿಗೆ ಏಮ್ಸ್‌: ಶ​ರಣ ಪ್ರಕಾಶ ಹೇಳಿ​ಕೆಗೆ ರಾಯಚೂರು ಜಿಲ್ಲೆಯಲ್ಲಿ ತೀವ್ರ ವಿರೋಧ

ಕಾಂಗ್ರೆಸ್‌ ಪ್ರಣಾಳಿಕೆ (Congress manifesto)ಯಲ್ಲಿ ರಾಯಚೂರಿಗೆ ಏಮ್ಸ್‌ (Raichur AIIMS)ಕೊಡಿ​ಸು​ವು​ದಾಗಿ ಭರ​ವಸೆ ನೀಡಿ​ದೆ. ಅದನ್ನು ಕಾಂಗ್ರೆಸ್‌ ಮಂತ್ರಿ​ಗ​ಳು ತಿಳಿದುಕೊಂಡು ಮಾತನಾಡಬೇಕು. ಕೂಡಲೇ ಸಚಿವ ಎನ್‌.ಎಸ್‌.ಬೋಸರಾಜು(Minister NS Bosaraju) ಮುಖ್ಯಮಂತ್ರಿ ಬಳಿ ಏಮ್ಸ್‌ ಹೋರಾಟಗಾರರ ನಿಯೋಗವನ್ನು ಭೇಟಿ ಮಾಡಿಸಿ, ಎಲ್ಲ ಪಕ್ಷಗಳ ಶಾಸಕರು, ಸಂಸದರು ಈ ಬಗ್ಗೆ ಒತ್ತಡ ಹಾಕಬೇಕು ಎಂದು ಒತ್ತಾ​ಯಿ​ಸಿ​ದರು.

ಹೋರಾಟಗಾರ ಎಂ.ಆರ್‌.ಭೇರಿ ಮಾತನಾಡಿ, ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ವಿರುದ್ಧವೆ ಸಚಿವ ಶರಣ ಪ್ರಕಾಶ್‌ ಪಾಟೀಲ್‌(Dr Sharanaprakash patil) ಮಾತನಾಡಿದ್ದು, ಇದು ಪಕ್ಷ ವಿರೋಧಿ ಧೋರಣೆಯಾಗಿದೆ. ಕೂಡಲೇ ಹೈಕಮಾಂಡ್‌ ಅವರನ್ನು ಸಚಿವ ಸ್ಥಾನದಿಂದ ಉಚ್ಛಾಟಿಸಬೇಕು. ಪ್ರಣಾಳಿಕೆಯಲ್ಲಿ ಏಮ್ಸ್‌ ಬಗ್ಗೆ ನೀಡಿರುವ ಭರವಸೆ ಈಡೇರಿಸಬೇಕು. ಇಲ್ಲದಿದ್ದರೆ ಜನರು ಬಿಜೆಪಿಗೆ ಕಲಿಸಿದ ಪಾಠ ಮುಂದಿನ ಚುನಾವಣೆಯಲ್ಲಿ ಕಾಂಗ್ರೆ​ಸ್‌​ಗೂ ಕಲಿಸುತ್ತಾರೆ ಎಂದು ಎಚ್ಚರಿಸಿದರು.

ರಾಯಚೂರು ಜನತೆಯ ಸಹನೆ ಪರೀಕ್ಷಿಸಬೇಡಿ: ಮಂತ್ರಾಲಯ ಶ್ರೀಗಳಿಂದ ಸರ್ಕಾರಕ್ಕೆ ಖಡಕ್ ಸಂದೇಶ ರವಾನೆ

ಪತ್ರಿ​ಕಾ​ಗೋ​ಷ್ಠಿ​ಯಲ್ಲಿ ಸಮಿತಿ ಮುಖಂಡರಾದ ಜಾನ್‌ ವೆಸ್ಲಿ, ಶರಣಪ್ಪ ಬಾಡಿಯಾಳ, ಕಾಮರಾಜ, ಬಸವರಾಜ, ನರಸಪ್ಪ ಇದ್ದರು.