Asianet Suvarna News Asianet Suvarna News

ಕೊರೋನಾ ಸಂಕಷ್ಟ: ರೈತರ ಸಮಸ್ಯೆ ಅರಿಯಲು ಸದವಕಾಶ

ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ‘ಅಗ್ರಿ ವಾರ್‌ ರೂಂ’ ಸ್ಥಾಪಿಸಲು ಕ್ರಮ ಕೈಗೊಂಡೆ. ಲಾಕ್‌ಡೌನ್‌ ಅವಧಿಯೊಳಗೆ ರಾಜ್ಯದ ಯಾವುದೇ ರೈತರು ತೊಂದರೆಗೆ ಗುರಿ ಆಗಬಾರದು ಎನ್ನುವುದು ‘ಅಗ್ರಿ ವಾರ್‌ ರೂಂ’ ಪ್ರಧಾನ ಗುರಿ ಆಗಿತು - ಬಿ ಸಿ ಪಾಟೀಲ್ 

Agriculture Minister BC Patil special concerns about farmers
Author
Bengaluru, First Published May 13, 2020, 6:43 PM IST

ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು

ಮೇಟಿಯಿಂ ರಾಟಿ ನಡೆದುದಲ್ಲದೆ,

ದೇಶದಾಟವೇ ಕೆಡಗು ಸರ್ವಜ್ಞ.

ಇದು ನಮ್ಮ ತಾಲೂಕಿನ ಕವಿ ಸಂತ ಸರ್ವಜ್ಞ ಹೇಳಿದ ನುಡಿಗಟ್ಟು.

ಕೃಷಿಕರ ಕುಟುಂಬದಲ್ಲಿಯೇ ಜನಿಸಿದ ನನಗೆ ಕೃಷಿ ಸಂಬಂಧಿತ ಸಮಸ್ಯೆ ಸಂಕಷ್ಟಗಳ ಅರಿವು ಇದೆ. ಬದುಕಿಗೆ ಪೊಲೀಸ್‌ ಹುದ್ದೆ, ಹವ್ಯಾಸಕ್ಕಾಗಿ ಚಲನಚಿತ್ರ. ಹೀಗೆ ಬದುಕು ಕಂಡುಕೊಳ್ಳಲು ಹೊರಟಿದ್ದ ನನಗೆ ರಾಜಕೀಯ ಪ್ರವೇಶ ಅನಿರೀಕ್ಷಿತ ಆಗಿತ್ತು. ಮೂರು ಬಾರಿ ಶಾಸಕನಾಗಿ ಆಯ್ಕೆಗೊಂಡ ನನಗೆ ಕೃಷಿ ಸಚಿವನಾಗುವ ಅವಕಾಶವೂ ದೊರೆಯಿತು. ಮುಖ್ಯಮಂತ್ರಿ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಕೃಷಿ ಇಲಾಖೆಗೆ ಕಾಯಕಲ್ಪ ಮಾಡುವ ನಿರ್ಧಾರವನ್ನು ಸಚಿವನಾದ ಗಳಿಗೆಯಿಂದಲೇ ತೆಗೆದುಕೊಂಡೆ. ಇಡೀ ಇಲಾಖೆಯನ್ನು ಸಮಗ್ರವಾಗಿ ಅರಿತುಕೊಳ್ಳುವ ಕೆಲಸವನ್ನು ನಾನು ಮೊದಲು ಮಾಡಿದೆ.

ಇಂಗ್ಲಿಷ್‌ ಭಾಷೆಯಲ್ಲಿ ಆ್ಝಛಿssಜ್ಞಿಜ ಜ್ಞಿ dಜಿsಜ್ಠಜಿsಛಿ ಎನ್ನುವ ನಾಣ್ಣುಡಿ ಇದೆ. ಸಂಕಷ್ಟಕರ ಸಮಯದಲ್ಲಿಯೇ ಗುರು-ಹಿರಿಯರ, ದೇವರ ಆಶೀರ್ವಾದ ಲಭ್ಯವಾಗುತ್ತದೆ ಅನ್ನುವುದು ಈ ನಾಣ್ಣುಡಿಯ ಗೂಢಾರ್ಥ. ಕರ್ನಾಟಕದಲ್ಲಿ ಕೊರೋನಾ ಅಪ್ಪಳಿಸಿದ ಗಳಿಗೆ ಕೃಷಿ ಸಂಬಂಧಿತ ಸಮಸ್ಯೆಗಳನ್ನು ಖುದ್ದು ಅರ್ಥ ಮಾಡಿಕೊಳ್ಳುವುದಕ್ಕೆ ದೇವರು ನನಗೊಂದು ಸದಾವಕಾಶವನ್ನು ದೊರಕಿಸಿಕೊಟ್ಟಿದ್ದಾನೆ.

ರೈತರ ಸಂಕಷ್ಟಕ್ಕೆ ಪರಿಹಾರ ಏನು?

ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮಾಚ್‌ರ್‍ 24ರಂದು ದೇಶದಲ್ಲಿ ಲಾಕ್‌ಡೌನ್‌ ಘೋಷಣೆ ಮಾಡಿದ ಗಳಿಗೆಯಿಂದಲೇ ನನ್ನ ತಲೆಯಲ್ಲಿ ಕರ್ನಾಟಕ ರೈತರ ಸಮಸ್ಯೆಗಳನ್ನು ಯಾವ ರೀತಿ ಬಗೆಹರಿಸಬೇಕು, ಕೊರೋನಾ ಮಹಾಮಾರಿಯ ಕಾರಣದಿಂದ ಸಂಕಷ್ಟಕ್ಕೆ ಗುರಿಯಾಗಿರುವ ರೈತರ ಸಮಸ್ಯೆಗಳಿಗೆ ಯಾವ ರೀತಿ ಉತ್ತರ ಕಂಡುಕೊಳ್ಳಬೇಕು ಎಂದು ಚಿಂತಿಸತೊಡಗಿದ್ದೆ.

ಕೊರೋನಾ ಲಾಕ್‌ಡೌನ್‌ ಸಂದರ್ಭದಲ್ಲಿ ಕರ್ನಾಟಕದ ಮೂವತ್ತು ಜಿಲ್ಲೆಗಳ ಪ್ರವಾಸವನ್ನು ಕೈಗೊಂಡರೆ, ಪ್ರತಿಯೊಂದು ಜಿಲ್ಲೆಯ ಸಮಸ್ಯೆ-ಸಂಕಷ್ಟಗಳನ್ನು ಅರ್ಥ ಮಾಡಿಕೊಳ್ಳಬಹುದು ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು ಎಂದು ನನಗೆ ಭಾಸವಾಗಿತ್ತು. ಈ ಹಿನ್ನೆಲೆಯಲ್ಲಿಯೇ ಮೂವತ್ತು ಜಿಲ್ಲೆಗಳ ಪ್ರವಾಸವನ್ನು ಏಪ್ರಿಲ್‌ 6ರಿಂದ ಪ್ರಾರಂಭಿಸಿದೆ. ಹೆಚ್ಚು ಕಡಿಮೆ ಒಂದು ತಿಂಗಳ ಕಾಲ ಈ ದೇಶದ ಬೆನ್ನೆಲುಬು ರೈತರ ಸಮಸ್ಯೆಗಳನ್ನು ಖುದ್ದು ಪರಿಶೀಲನೆ ನಡೆಸಿದೆ.

 ಲಾಕ್‌ಡೌನ್‌ನಿಂದ ಕೂಲಿ ಕಾರ್ಮಿಕರ ವಲಸೆ; ಕೃಷಿಗೆ ಸಿಕ್ತಾರೆ ಜನ...!

ಮೂವತ್ತು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ ಸಂದರ್ಭದಲ್ಲಿ ಒಂದೊಂದು ಜಿಲ್ಲೆಗಳಲ್ಲಿ ಒಂದೊಂದು ರೀತಿಯ ರೈತರ ಸಮಸ್ಯೆಗಳು ನನ್ನ ಅವಗಾಹನೆಗೆ ಬಂತು. ಕೊಪ್ಪಳ ಜಿಲ್ಲೆಯ ಗಂಗಾವತಿ ‘ಕರ್ನಾಟಕದ ಭತ್ತದ ಕಣಜ’ ಎಂದೇ ಖ್ಯಾತಿ ಪಡೆದಿದೆ. ಇದರ ಜೊತೆಗೆ ಯಾದಗಿರಿ ಜಿಲ್ಲೆಯ ಶಹಾಪುರ, ಸುರಪುರ ಕೂಡ ಭತ್ತದ ಬೆಳೆಗೆ ಹೆಸರುವಾಸಿ. ಏಪ್ರಿಲ… ತಿಂಗಳ ಮೊದಲ ವಾರದಲ್ಲಿ ಸುರಿದ ಭಾರೀ ಮಳೆಯಿಂದ ಈ ಪ್ರದೇಶಗಳಲ್ಲಿ ಬೆಳೆದ ಬೆಳೆ ಸಂಪೂರ್ಣ ನಾಶ ಆಗಿತ್ತು. ಇದನ್ನು ಭೇಟಿಯ ಸಂದರ್ಭದಲ್ಲಿ ಕಣ್ಣಾರೆ ಕಂಡೆ.

ಭತ್ತದ ಬೆಳೆ ಹಾನಿ ಎಷ್ಟುಪ್ರಮಾಣದಲ್ಲಿ ಆಗಿದೆ ಎನ್ನುವುದನ್ನು ಸಮೀಕ್ಷೆ ಮಾಡಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸ್ಥಳದಲ್ಲಿಯೇ ನಿರ್ಧಾರ ಕೈಗೊಂಡೆ. ಇನ್ನು ಹೂವು ಬೆಳೆಗಾರರು ತಾವು ಬೆಳೆದ ಹೂವನ್ನು ನಿರ್ದಿಷ್ಟಅವಧಿಯಲ್ಲಿ ಮಾರಾಟ ಮಾಡಲೇಬೇಕು. ಲಾಕ್‌ಡೌನ್‌ ಕಾರಣದಿಂದ ಅವರ ಹೂ ಮಾರಾಟಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿತ್ತು. ಇದನ್ನು ನನ್ನ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಖುದ್ದಾಗಿ ಕಂಡೆ.

ಈ ಸಂಬಂಧ ಮುಖ್ಯಮಂತ್ರಿಗಳ ಗಮನ ಸೆಳೆದೆ. ಸದ್ಯ ಹೂ ಬೆಳೆಗಾರರಿಗೆ ಹೆಕ್ಟೇರ್‌ಗೆ 25 ಸಾವಿರ ರುಪಾಯಿ ಪರಿಹಾರ ದೊರೆತಿದೆ. ಜೊತೆಗೆ ಅನೇಕ ರೈತರು ತಾವು ಬೆಳೆದ ಬೆಳೆಗೆ ಮಾರುಕಟ್ಟೆಸಿಗದೆ, ಬೆಳೆ ನಾಶ ಮಾಡಿಕೊಂಡ ನಿದರ್ಶನಗಳು ನನ್ನ ಗಮನಕ್ಕೆ ಬಂದಿತ್ತು. ತಕ್ಷಣ ಅಂತಹ ರೈತರ ಯಾದಿಯನ್ನು ತಯಾರಿಸಿ ಅವರಿಗೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಂಡೆ.

ಆನ್‌ಲೈನ್‌ ಟ್ರೇಡಿಂಗ್‌ಗೆ ಅವಕಾಶ

ಬಿಜಾಪುರ ಜಿಲ್ಲೆಯಲ್ಲಿ ಒಣದ್ರಾಕ್ಷಿ ಬೆಲೆ ಕುಸಿಯದಂತೆ ತಕ್ಷಣ ಆನ್‌ಲೈನ್‌ ಟ್ರೇಡಿಂಗ್‌ಗೆ ಅವಕಾಶ ಕಲ್ಪಿಸಿಕೊಂಡಲು ಸೂಚಿಸಿದ್ದೆ. ಇದರಿಂದಾಗಿ ದ್ರಾಕ್ಷಿ ಬೆಳೆಗಾರರು ಸಂಕಷ್ಟದಿಂದ ಪಾರಾಗುವುದು ಸಾಧ್ಯವಾಯಿತು. ಕೊರೋನಾ ಅವಧಿಯಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಲು ಅನುಕೂಲ ಆಗುವಂತೆ ಕೇಂದ್ರ ಸರ್ಕಾರದ ಆಯುಷ್‌ ಇಲಾಖೆಯ ಮಾರ್ಗದರ್ಶನದಲ್ಲಿ ಶುಂಠಿ, ಅರಿಷಿಣ, ನಿಂಬೆ, ಯಾಲಕ್ಕಿ, ಲವಂಗ, ಬೆಳ್ಳುಳ್ಳಿ ಹಾಗೂ ಬಿಸಿ ನೀರಿನ ಬಳಕೆಯನ್ನು ಹೆಚ್ಚಿಸಲು ಜನರಲ್ಲಿ ಜಾಗೃತಿ ಮೂಡಿಸುವ ಕ್ರಮವನ್ನು ಇಲಾಖೆಯ ಮೂಲಕ ಮಾಡಲಾಯಿತು. ರಾಜ್ಯದ ಹದಿನಾಲ್ಕು ಜಿಲ್ಲೆಗಳಲ್ಲಿ ರೈತರು ಬೆಳೆಯುವ ಮೆಕ್ಕೆ ಜೋಳಕ್ಕೆ ಬೆಂಬಲ ಬೆಲೆ ನೀಡಿ ಅದನ್ನು ಕೊಂಡುಕೊಳ್ಳಲು ಅಗತ್ಯ ಕ್ರಮ ಕೈಗೊಂಡೆ. ಇದರಿಂದ ಸಾವಿರಾರು ರೈತರಿಗೆ ದೊಡ್ಡ ಪ್ರಮಾಣದಲ್ಲಿ ನೆರವಾಯಿತು.

ರಾಗಿ, ಭತ್ತ,ಜೋಳ, ತೊಗರಿ, ಕಡಲೆ ಮುಂತಾದ ಬೆಳೆಗಳನ್ನು ಸರ್ಕಾರ ಖರೀದಿಸಿದ್ದರೂ ಈ ಸಂಬಂಧ ರೈತರ ಖಾತೆಗೆ ವರ್ಗಾವಣೆ ಆಗಬೇಕಿದ್ದ 1200 ಕೋಟಿ ರು. ಹಣ ವರ್ಗಾವಣೆ ಆಗಿರಲಿಲ್ಲ. ಅದರ ವರ್ಗಾವಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಯಿತು. ಹೀಗೆ ಕಳೆದ ಕರ್ನಾಟಕದ ಮೂವತ್ತು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡ ಅವಧಿಯಲ್ಲಿ ಒಂದೊಂದು ಜಿಲ್ಲೆಗೆ ವಿಶಿಷ್ಟವಾದ ಸಮಸ್ಯೆಗಳು ನನ್ನ ಅರಿವಿಗೆ ಬಂದಿದ್ದವು.

ಅವುಗಳಿಗೆಲ್ಲ ಸೂಕ್ತ ಪರಿಹಾರ ಕಂಡು ಹಿಡಿಯುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ಮುಕ್ತ ಮನಸ್ಸಿನ ಬೆಂಬಲ ಮಾರ್ಗದರ್ಶನವೂ ನನಗೆ ದೊರೆತಿದೆ. ರೈತರ ಮಗನಾಗಿ ಜನಿಸಿದ ನನಗೆ ರೈತರ ಸಮಸ್ಯೆಗಳ ಅರಿವು ಬಾಲ್ಯದ ದಿನಗಳಿಂದಲೇ ಗೊತ್ತಿದೆ. ಅದರ ಪರಿಹಾರಕ್ಕೆ ನಾನು ಕಂಕಣ ಬದ್ಧನಾಗಿದ್ದೇನೆ.

- ಬಿ.ಸಿ.ಪಾಟೀಲ್,  ಕೃಷಿ ಸಚಿವ

Follow Us:
Download App:
  • android
  • ios