Asianet Suvarna News Asianet Suvarna News

Congress Padayatra: ಮೇಕೆದಾಟು ಬಳಿಕ ಕೃಷ್ಣೆ, ಮಹದಾಯಿಗಾಗಿಯೂ ಹೋರಾಟ: ಡಿಕೆಶಿ

*  ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಹೋರಾಟ, ನಾನು ಮುಖ್ಯಮಂತ್ರಿಯಾಗಬೇಕೆಂಬ ಉದ್ದೇಶವಿಲ್ಲ
*  ತಾರ್ಕಿಕ ಅಂತ್ಯ ಮುಟ್ಟಿಸುವವರೆಗೂ ಬಿಡುವುದಿಲ್ಲ: ಕೆಪಿಸಿಸಿ ಅಧ್ಯಕ್ಷ
*  ನಮ್ಮ ಕುಟುಂಬದವರು ಯಾರೂ ರಾಜಕೀಯಕ್ಕೆ ಬರುವುದಿಲ್ಲ 
 

After the Mekedatu Fight for Krishna and Mahadayi Says DK Shivakumar grg
Author
Bengaluru, First Published Jan 3, 2022, 5:45 AM IST

ಬೆಂಗಳೂರು(ಡಿ.03): ಡಬಲ್‌ ಇಂಜಿನ್‌ ಸರ್ಕಾರ(Double Engine Government) ಮನಸ್ಸು ಮಾಡಿದರೆ ಮೇಕೆದಾಟು ಯೋಜನೆಗೆ ಅರ್ಧ ಗಂಟೆಯಲ್ಲಿ ಅನುಮೋದನೆ ನೀಡಬಹುದು. ಆದರೆ, ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರಗಳಿಗೆ ನಮ್ಮ ನೆಲ ಹಾಗೂ ಜಲದ ಮೇಲೆ ಬದ್ಧತೆ ಇಲ್ಲ. ಹೀಗಾಗಿ ಮೇಕೆದಾಟು ಪಾದಯಾತ್ರೆ(Mekedatu Padayatra) ಹಮ್ಮಿಕೊಳ್ಳುತ್ತಿದ್ದೇವೆ. ತಾರ್ಕಿಕ ಅಂತ್ಯಕ್ಕೆ ಮುಟ್ಟಿಸುವವರೆಗೂ ಹೋರಾಟ ಕೈ ಬಿಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌(DK Shivakumar) ಸ್ಪಷ್ಟಪಡಿಸಿದ್ದಾರೆ.

ಜ.9ರಿಂದ 19 ರವರೆಗೆ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆ ಕುರಿತು ಏಷ್ಯಾನೆಟ್‌ ಸುವರ್ಣ ನ್ಯೂಸ್‌(Asianet Suvarna News)- ಕನ್ನಡಪ್ರಭ(Kannada Prabha) ಜತೆಗಿನ ‘ಪವರ್‌ಫುಲ್‌ ಯಾತ್ರೆ’ ಸಂದರ್ಶನದಲ್ಲಿ ಮಾಹಿತಿ ನೀಡಿದ ಅವರು, ಕೇವಲ ಮೇಕೆದಾಟು ಯೋಜನೆ(Mekedatu Project) ಮಾತ್ರವಲ್ಲ. ಕೃಷ್ಣೆ(Krishna River) ಹಾಗೂ ಮಹದಾಯಿಗಾಗಿಯೂ(Mahadayi) ಹೋರಾಟ ಮಾಡುತ್ತೇವೆ. ಈ ವರ್ಷವನ್ನು ಸಂಘಟನೆ ಹಾಗೂ ಹೋರಾಟದ ವರ್ಷ ಎಂದು ಈಗಾಗಲೇ ಘೋಷಿಸಿದ್ದೇವೆ. ಬಿಜೆಪಿಯವರು(BJP) ರಾಜಕೀಯ ಇಚ್ಛಾಶಕ್ತಿ ಬಿಟ್ಟು ಜನರ ಹಿತಕ್ಕಾಗಿ ಕೆಲಸ ಮಾಡುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

Congress Padayatra: ಮೇಕೆದಾಟು ಜಾರಿ ಶತಸಿದ್ಧ: ಅಶ್ವತ್ಥನಾರಾಯಣ

ಅರ್ಧ ಗಂಟೆ ಕೆಲಸ:

ಮೇಕೆದಾಟು ಯೋಜನೆಗೆ ನಮ್ಮ ಸರ್ಕಾರದ ಅವಧಿಯಲ್ಲೇ ಡಿಪಿಆರ್‌(DPR) ಸಿದ್ಧಪಡಿಸಲಾಗಿದೆ. ಸುಪ್ರೀಂಕೋರ್ಟ್‌, ಕುಡಿಯುವ ನೀರಿನ ಯೋಜನೆಗೆ ಎನ್‌ಒಸಿ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ಇದೀಗ ಪರಿಸರ ಅನುಮೋದನೆ ಮಾತ್ರ ಬೇಕು. ಕೇಂದ್ರ, ರಾಜ್ಯ ಎರಡೂ ಕಡೆ ಇರುವ ಬಿಜೆಪಿ ಡಬಲ್‌ ಇಂಜಿನ್‌ ಸರ್ಕಾರ ನಿರ್ಧರಿಸಿದರೆ ಅರ್ಧ ಗಂಟೆಯಲ್ಲಿ ಯೋಜನೆಗೆ ಅನುಮೋದನೆ ದೊರೆಯಲಿದೆ ಎಂದರು. ಅವರು ಮನಸ್ಸು ಮಾಡದ ಹಿನ್ನೆಲೆಯಲ್ಲಿ ಪಾದಯಾತ್ರೆ ಅನಿವಾರ್ಯವಾಗಿದೆ. ಇದು ಕಾಂಗ್ರೆಸ್‌ನ(Congress) ಕಾರ್ಯಕ್ರಮವಲ್ಲ. ಪಕ್ಷ ಭೇದ ಮರೆತು ಎಲ್ಲರೂ ಸೇರಿ ನಾಡಿನ ನೆಲ, ಜಲಕ್ಕಾಗಿ ಪಾದಯಾತ್ರೆಯಲ್ಲಿ ಭಾಗವಹಿಸಬಹುದು ಎಂದು ಕರೆ ನೀಡಿದರು.

2023ಕ್ಕೆ ಕಾಂಗ್ರೆಸ್‌ಗೆ ಬಹುಮತ:

ನಾನು ಮುಖ್ಯಮಂತ್ರಿ ಆಗಬೇಕು ಎಂಬುದು ಪಾದಯಾತ್ರೆ ಉದ್ದೇಶವಲ್ಲ. ನಮ್ಮ ಹೋರಾಟ 2023ಕ್ಕೆ ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು. ವಿಧಾನಸೌಧದಲ್ಲಿ ನಮ್ಮ ಕಾರ್ಯಕರ್ತರು ಕಾಂಗ್ರೆಸ್‌ ಬಾವುಟ ಹಾರುವುದನ್ನು ನೋಡಬೇಕು. 2023ಕ್ಕೆ ನಾವು ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹದಾಯಿ ತೀರ್ಪು ರಾಜ್ಯದ ಪರ ಬಂದಾಗಿದೆ. ಆದರೆ, ಬಿಜೆಪಿಯವರು ಗೋವಾ(Goa) ಓಲೈಕೆಗಾಗಿ ಯೋಜನೆ ಪ್ರಾರಂಭಿಸಿಲ್ಲ. ಗೋವಾದಲ್ಲಿನ ಒಂದು ಸಂಸದ ಸ್ಥಾನಕ್ಕಾಗಿ 25 ಜನ ಸಂಸದರನ್ನು ನೀಡಿದ ರಾಜ್ಯಕ್ಕೆ ದ್ರೋಹ ಮಾಡುತ್ತಿದ್ದಾರೆ. ಈ ಎಲ್ಲದರ ಬಗ್ಗೆಯೂ ಹೋರಾಟ ಶುರುವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಖರ್ಗೆ ಏಕೆ ಸಿಎಂ ಆಗಬಾರದು?

ಹೈಕಮಾಂಡ್‌ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿದರೆ ಎಂಬ ಪ್ರಶ್ನೆಗೆ ‘ಅವರು ಏಕೆ ಮುಖ್ಯಮಂತ್ರಿ ಆಗಬಾರದು. ಯಾರನ್ನಾರನ್ನೋ ಮುಖ್ಯಮಂತ್ರಿಯಾಗಿರುವುದನ್ನು ಜೀರ್ಣಿಸಿಕೊಂಡಿದ್ದೇವೆ. ಪಕ್ಷಕ್ಕಾಗಿ ದುಡಿದ ಹಿರಿಯರು ಅವರು. ಏಕೆ ಆಗಬಾರದು? ಧರಂಸಿಂಗ್‌ ಸರ್ಕಾರದಲ್ಲಿ ನನ್ನನ್ನು ಹೊರಗಿಟ್ಟು ಸರ್ಕಾರ ಮಾಡಿದರು. ಸಮ್ಮಿಶ್ರ ಸರ್ಕಾರದಲ್ಲೂ ಬೇರೆ ಪಕ್ಷದವರು ಮುಖ್ಯಮಂತ್ರಿ ಆದರು. ಆಗೆಲ್ಲಾ ಜೀರ್ಣಿಸಿಕೊಂಡಿದ್ದೇವೆ. ನಮ್ಮ ಹಿರಿಯರು ಏಕೆ ಆಗಬಾರದು’ ಎಂದು ಶಿವಕುಮಾರ್‌ ಪ್ರಶ್ನಿಸಿದರು.

Mekedatu Padayatra: 'ಅವನ್ಯಾರೋ ಅಣ್ಣಾಮಲೈ ಮಾತು ಕೇಳಿ ಅನುಮತಿ ಕೊಡ್ತಿಲ್ಲ'

ಸಂಕಲ್ಪ ನೆರವೇರಿದರೆ ಮಾತ್ರ ಗಡ್ಡ ತೆಗೆವೆ

ತಿಹಾರ್‌ ಜೈಲು ನನಗೆ ಗಡ್ಡ ನೀಡಿದೆ. ಬಹಳ ನೋವು, ದುಃಖದ ಜತೆಗೆ ಬಂದ ಗಡ್ಡವಿದು. ನಾನು ಮನಸ್ಸಿನಲ್ಲಿ ಮಾಡಿರುವ ಸಂಕಲ್ಪ ನೆರವೇರುವವರೆಗೂ ಈ ಗಡ್ಡ ನನ್ನ ಜತೆಗೆ ಇರಲಿದೆ. ಬಳಿಕ ತೆಗೆಯುತ್ತೇನೆ. ಆ ಸಂಕಲ್ಪ ಏನು ಎಂಬುದನ್ನು ನನ್ನ ಪತ್ನಿ, ಮಗಳಿಗೂ ಸಹ ಬಿಟ್ಟುಕೊಟ್ಟಿಲ್ಲ ಎಂದು ಶಿವಕುಮಾರ್‌ ಹೇಳಿದರು.

ರಾಜಕೀಯಕ್ಕೆ ಕುಟುಂಬದಿಂದ ಯಾರೂ ಬರಲ್ಲ

ಚಿಕ್ಕಮಗಳೂರಿನಲ್ಲಿ ಸಿ.ಟಿ. ರವಿ(CT Ravi) ವಿರುದ್ಧ ತಮ್ಮ ಅಳಿಯ ಅಮತ್ರ್ಯ ಸ್ಪರ್ಧಿಸುತ್ತಾರೆ ಎಂಬ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ‘ನಮ್ಮ ಕುಟುಂಬದವರು ಯಾರೂ ರಾಜಕೀಯಕ್ಕೆ(Politics) ಬರುವುದಿಲ್ಲ. ಇದನ್ನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ನನ್ನ ತಮ್ಮ ಸುರೇಶ್‌(DK Suresh) ಅವರನ್ನೂ ರಾಜಕೀಯಕ್ಕೆ ತರುವ ಉದ್ದೇಶವಿರಲಿಲ್ಲ. ವಿಧಿ ಇಲ್ಲದೆ ಚಾಲೆಂಜ್‌ ಆಗಿ ತೆಗೆದುಕೊಂಡು ರಾಜಕೀಯಕ್ಕೆ ತರಬೇಕಾಯಿತು. ಇಲ್ಲದಿದ್ದರೆ ನನ್ನ ತಮ್ಮನನ್ನೂ ರಾಜಕೀಯಕ್ಕೆ ತರುತ್ತಿರಲಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
 

Follow Us:
Download App:
  • android
  • ios