Asianet Suvarna News Asianet Suvarna News

ಮಕ್ಕಳು, ಮೊಮ್ಮಕ್ಕಳಿಗೆ ಟಿಕೆಟ್ ಕೊಟ್ಟ ಕಾಂಗ್ರೆಸ್, ಲೋಕಸಭೆ ಚುನಾವಣೆ ಬಳಿಕ ಇಬ್ಬಾಗವಾಗಲಿದೆ: ಬಸವರಾಜ ಬೊಮ್ಮಾಯಿ

ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳಿಲ್ಲದೇ ಸಚಿವರ ಮಕ್ಕಳು ಹಾಗೂ ಕುಟುಂಬಸ್ಥರಿಗೆ ಟಿಕೆಟ್ ಕೊಟ್ಟಿದ್ದಾರೆ. ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಇಬ್ಬಾಗವಾಗಲಿದೆ ಮಾಜಿ ಸಿಎಂ ಬೊಮ್ಮಾಯಿ ಹೇಳಿದರು.

After Lok Sabha elections congress will split two said former Chief minister Basavaraj Bommai sat
Author
First Published Mar 30, 2024, 3:28 PM IST

ಹಾವೇರಿ (ಮಾ.30): ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳಿಲ್ಲದೇ ಸಚಿವರ ಮಕ್ಕಳು ಹಾಗೂ ಕುಟುಂಬಸ್ಥರಿಗೆ ಟಿಕೆಟ್ ಕೊಟ್ಟಿದ್ದಾರೆ. ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಇಬ್ಬಾಗವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ -ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ‌.

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿ ಪ್ರಮಾಣ ವಚನ ಸ್ವೀಕರಿಸಿ ಮೂರು ತಿಂಗಳಲ್ಲಿ ಕಾಂಗ್ರೆಸ್ ಇಬ್ಬಾಗ ಆಗಲಿದೆ. ಅದರ ಪರಿಣಾಮ ಕರ್ನಾಟಕದ ಮೇಲೂ ಆಗಲಿದೆ. ಕಾಂಗ್ರೆಸ್ ನಲ್ಲಿ ಮಂತ್ರಿಗಳ ಕುಟುಂಬಸ್ಥರಿಗೆ ನೀಡಲಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಕುಟುಂಬ ರಾಜಕಾರಣ ಮೊದಲಿನಿಂದಲೂ ಬಂದಿದೆ. ಅದರಲ್ಲೇನು ಆಶ್ವರ್ಯ ಇಲ್ಲ. ಆದರೆ, ಈ ಬಾರಿ ಇಷ್ಟು ಪ್ರಮಾಣದಲ್ಲಿ ಕುಟುಂಬ ರಾಜಕೀಯ ನಡೆಯಲು ಕಾರಣ ಬೇರೆನೇ ಇದೆ. ಕಾಂಗ್ರೆಸ್‌ನ ಎಲ್ಲಾ ಮಂತ್ರಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿತ್ತು ಎಂದು ಮಾಹತಿ ನೀಡಿದರು. 

ದೇಶಕ್ಕಿಂತ ಮೋದಿ ಮಾಂತ್ರಿಕ ಶಕ್ತಿ ದೊಡ್ಡದು, ಅನ್ನೋ ಭ್ರಮೆಯಲ್ಲಿ ಬಿಜೆಪಿ ತೇಲ್ತಾ ಇದೆ; ಮಾಜಿ ಶಾಸಕಿ ತೇಜಸ್ವಿನಿ ಗೌಡ

ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯದ ಸುಮಾರು 12 ಜನ ಮಂತ್ರಿಗಳಿಗೆ ಲೋಕಸಭೆ ಚುನಾವಣೆಗೆ ನಿಲ್ಲುವಂತೆ ಸೂಚನೆ ನೀಡಲಾಗಿತ್ತು. ಆದರೆ, ಅವರಿಗೆ ಗೆದ್ದು ಬರುವ ವಿಶ್ವಾಸ ಇರಲಿಲ್ಲ. ನೀವು ನಿಲ್ಲದಿದ್ದರೆ ಗೆಲ್ಲುವ ಅಭ್ಯರ್ಥಿಯನ್ನು ನೀವೇ ಕೊಡಿ ಅಂದಾಗ ಅನಿವಾರ್ಯವಾಗಿ ಅವರ ಮಕ್ಕಳು, ಅಣ್ಣ ತಮ್ಮಂದಿರು ಹಾಗೂ ಮೊಮ್ಮಕ್ಕಳಿಗೆ ಟಿಕೆಟ್ ಕೊಡಿಸಿದ್ದಾರೆ‌. ಇದರಿಂದ ಕಾಂಗ್ರೆಸ್ ಗೆ  ರಾಜಕೀಯ ಲಾಭ ಆಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಗೆ ಮತ ಹಾಕಲು ಜನ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.

ನಾಳೆ ತೀರ್ಮಾನ: ಲೋಕಸಭೆ ಚುನಾವಣಾ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಬಗ್ಗೆ ನಾಳೆ ತೀರ್ಮಾನ ಮಾಡುತ್ತೇವೆ. ಒಳ್ಳೆ ಸಮಯ ನೋಡಿ ನಾಮಪತ್ರ ಸಲ್ಲಿಕೆ  ಮಾಡುತ್ತೇವೆ. ಎರಡು ಸಲ ನಾಮಪತ್ರ ಸಲ್ಲಿಕೆ ಮಾಡಲಿದ್ದೇನೆ. ಒಂದು ಸಲ ವಯಕ್ತಿಕವಾಗಿ ಹಾಗೂ ಮೇಲೆ ಸಾರ್ವಜನಿಕವಾಗಿ ಒಮ್ಮೆ ನಾಮಪತ್ರ ಸಲ್ಲಿಸುತ್ತೇನೆ ಎಂದು ಹೇಳಿದರು. ನಾನೂ ಸ್ಟಾರ್ ಪ್ರಚಾರಕನಾಗಿದ್ದೇನೆ. ಕೆಲವು ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇನೆ. ಎರಡನೇ ಹಂತದಲ್ಲೂ ಪ್ರಚಾರ ಮಾಡುತ್ತೇನೆ ಎಂದರು. 

ನಮ್ಮ ಸ್ನೇಹಿತರು 2 ಬಾರಿ ಸಿಎಂ ಆದವರು, ಮಂಡ್ಯ ಜನರಿಗೆ ಹೇಗೆ ಸಿಗ್ತಾರೆ?: ಸಚಿವ ಚಲುವರಾಯಸ್ವಾಮಿ ಟೀಕೆ

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದು ಚುನಾವಣೆ ಗಿಮಿಕ್ ಎಂಬ ಕಾಂಗ್ರೆಸ್ ಶಾಸಕರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶ್ರೀರಂಗಪಟ್ಟಣದ ಶಾಸಕರೇನು ಡಾಕ್ಟರ್ ಅಲ್ಲ. ಆರೋಗ್ಯದ ವಿಚಾರಗಳನ್ನು ರಾಜಕಾರಣಕ್ಕೆ ಎಳೆದು ತರುವುದು ಸಮಂಜಸ ಅಲ್ಲ. ಅವರು ಚೆನೈಗೆ  ಹೋಗಿದ್ದು, ಚಿಕಿತ್ಸೆ ಪಡೆದಿದ್ದಕ್ಕೆ ಎಲ್ಲಾ ಸಾಕ್ಷಿಗಳಿವೆ. ರಾಜಕಾರಣದಲ್ಲಿ ರಾಜಕೀಯ ನೆಲೆಗಟ್ಟಿನಲ್ಲಿ ಹೋರಾಟ ಮಾಡಬೇಕು. ಶ್ರೀರಂಗಪಟ್ಟಣದ ಶಾಸಕರು ಕುಮಾರಸ್ವಾಮಿ ಜೊತೆ ನಿಕಟ ಸಂಬಂಧ ಹೊಂದಿದ್ದವರು. ಆದರೆ, ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ವಯಕ್ತಿಕ ವಿಚಾರ ತರಬಾರದು. ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಮಂಡ್ಯ ಸಂಸದೆ ಸುಮಲತಾ ಅವರು ನಿನ್ನೆ ನಮ್ಮ ಪಕ್ಷದ ಅದ್ಯಕ್ಷರನ್ನು ಭೇಟಿಯಾಗಿದ್ದಾರೆ. ಎಲ್ಲವೂ ಸರಿಯಾಗುತ್ತದೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.

Follow Us:
Download App:
  • android
  • ios