Asianet Suvarna News Asianet Suvarna News

ನಮ್ಮ ಸ್ನೇಹಿತರು 2 ಬಾರಿ ಸಿಎಂ ಆದವರು, ಮಂಡ್ಯ ಜನರಿಗೆ ಹೇಗೆ ಸಿಗ್ತಾರೆ?: ಸಚಿವ ಚಲುವರಾಯಸ್ವಾಮಿ ಟೀಕೆ

ನಮ್ಮ ಸ್ನೇಹಿತರು 2 ಬಾರಿ ಮುಖ್ಯಮಂತ್ರಿ ಆಗಿದ್ದರವರು. ಜನಸಾಮಾನ್ಯರಿಗೆ ಹೇಗೆ ಸಿಗ್ತಾರೆ ಹೇಳಿ.? ಆದರೆ, ಸ್ಟಾರ್ ಚಂದ್ರು ಗೆಲ್ಲಿಸಿದರೆ ಯಾವಾಗಲೂ ಜನರಿಗೆ ಸಿಗುತ್ತಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.

Former CM HD Kumaraswamy how will get to Mandya people of Mandya questioned Chaluvarayaswamy sat
Author
First Published Mar 29, 2024, 8:28 PM IST

ಮಂಡ್ಯ (ಮಾ.29): ನಾನು ಕುಮಾರಸ್ವಾಮಿ ಅವರನ್ನು ಯಾವಾಗಲೂ ಸ್ನೇಹಿತರು ಅಂತಾನೇ ಕರೆಯೋದು. ಆದ್ರೆ ನನ್ನ ಅಜನ್ಮ ಶತ್ರು ಅಂತಾ ಅವರು ಹೇಳ್ತಾರೆ. ನಮ್ಮ ಸ್ನೇಹಿತರು 2 ಬಾರಿ ಮುಖ್ಯಮಂತ್ರಿ ಆಗಿದ್ದರವರು. ಜನಸಾಮಾನ್ಯರಿಗೆ ಹೇಗೆ ಸಿಗ್ತಾರೆ ಹೇಳಿ.? ಆದರೆ, ಸ್ಟಾರ್ ಚಂದ್ರು ಗೆಲ್ಲಿಸಿದರೆ ಯಾವಾಗಲೂ ಜನರಿಗೆ ಸಿಗುತ್ತಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ಮಂಡ್ಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸಿದ್ರೆ ಯಾವಾಗ ಬೇಕಾದ್ರು ಜನ ಭೇಟಿಯಾಗಬಹುದು. ಎಲ್ಲರ ಜೊತೆಯೂ ಸ್ಟಾರ್ ಚಂದ್ರು ಭಾಗಿಯಾಗುತ್ತಾರೆ. ಜಿಲ್ಲೆಯಲ್ಲಿ ನಮ್ಮ ಶಾಸಕರೇ 6 ಮಂದಿ ಇದ್ದಾರೆ. ನಮ್ಮ ಸರ್ಕಾರವೇ ರಾಜ್ಯದಲ್ಲಿ ಅಧಿಕಾರದಲ್ಲಿ ಇದೆ. ಮಂಡ್ಯ ಅಭಿವೃದ್ಧಿ ಇನ್ನಷ್ಟು‌ ಹೆಚ್ಚಾಗುತ್ತದೆ. ಆದರೆ ನಮ್ಮ ಸ್ನೇಹಿತರು ಎರಡು ಭಾರಿ ಸಿಎಂ ಆದರು ಅವರು ಜನರಿಗೆ ಇಷ್ಟು ಸಿಗೋಕೆ ಹೇಗೆ ಸಾಧ್ಯ. ನಾನು ಕುಮಾರಸ್ವಾಮಿ ಅವರನ್ನು ಯಾವಾಗಲೂ ಸ್ನೇಹಿತರು ಅಂತಾನೇ ಕರೆಯೋದು. ಆದ್ರೆ ನನ್ನ ಅಜನ್ಮ ಶತ್ರು ಅಂತಾ ಅವರು ಹೇಳ್ತಾರೆ. ನೋಡೋಣಾ ಇನ್ನೂ ಏನು ಮಾತಾಡುತ್ತಾರೆ ಅಂತಾರೆ. ಇನ್ನೊಬ್ಬರು ತಗಡು ಮಂತ್ರಿ ಅಂತಾರೆ. ತಗಡು ಅಂದ್ರೆ ಏನು ಅಂತಾ. ಕುಮಾರಸ್ವಾಮಿ ಒಳ್ಳೆಯ ಟೀಮ್ ಕಟ್ಟಿಕೊಂಡಿದ್ದಾರೆ. ನೋಡೋಣಾ ಏನು ಮಾತಾಡುತ್ತಾರೆ ಮಾತಾಡಲಿ. ನಾವು ಏನು ಮಾತಡಲ್ಲ ಎಂದು ಹೇಳಿದರು.

ಕುಮಾರಸ್ವಾಮಿ ಹುಟ್ಟಿದ್ದು ಹಾಸನ, ರಾಜಕೀಯ ಮಾಡಿದ್ದು ರಾಮನಗರ; ಮಂಡ್ಯ ನಮ್ಮ ಭೂಮಿ ಅಂದ್ರೆ ಹೇಗೆ? ಚಲುವರಾಯಸ್ವಾಮಿ

ಸ್ಟಾರ್ ಚಂದ್ರ ಏ.1ರಂದು ನಾಮಪತ್ರ ಸಲ್ಲಿಕೆ: ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸ್ಟಾರ್ ಚಂದ್ರು ಏ.1 ರಂದು ನಾಮಪತ್ರ ಸಲ್ಲಿಸುತ್ತಾರೆ. ಮೊದಲಿಗೆ ಬೆಳಗ್ಗೆ 9 ಗಂಟೆಗೆ ಕಾಳಿಕಾಂಭ ದೇವಸ್ಥಾನದಲ್ಲಿ ಪೂಜೆ ಮಾಡಿಸುತ್ತಾರೆ. ಬಳಿಕ ಮೆರವಣಿಗೆ ಮೂಲಕ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ನಾಮಪತ್ರ ಸಲ್ಲಿಕೆ ಮಾಡಲಾಗುತ್ತದೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲ, ಡಿಸಿಎಂ ಡಿ.ಕೆ.ಶಿವಕುಮಾರ್ ನಾಮಪತ್ರ ಸಲ್ಲಿಕೆ ವೇಳೆ ಇರ್ತಾರೆ. ಸಿದ್ದರಾಮಯ್ಯ ಅವರು ಬರುವ ಸಾಧ್ಯತೆ ಇದೆ. ಒಂದು ಲಕ್ಷಕ್ಕೂ ಹೆಚ್ಚು ಜನರು ಮೆರವಣಿಗೆಯಲ್ಲಿ ಭಾಗಿಯಾಗುತ್ತಾರೆ. ಒಂದು ತಿಂಗಳ ಹಿಂದೆಯೇ ಸ್ಟಾರ್ ಚಂದ್ರ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿತ್ತು. ಈಗಾಗಲೇ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ಕ್ಷೇತ್ರದ ಪ್ರಚಾರ ಸಭೆ ಆಗಿದೆ. ಗ್ರಾ.ಪಂ ವ್ಯಾಪ್ತಿಯಲ್ಲಿ ನಮ್ಮ ಪ್ರಚಾರ ಒಂದು‌ ಸುತ್ತು ಆಗಿದೆ ಎಂದು ಮಾಹಿತಿ ನೀಡಿದರು.

ಸಂಸದೆ ಸಮುಲತಾ 5 ವರ್ಷ ಸರಿಯಾಗಿ ಕೆಲಸ ಮಾಡಿದ್ದಾರೆ: ಸುಮಲತಾ ಅವರಿಗೆ ನಾನು ಏನು‌ ಹೇಳಲ್ಲ‌. ಅವರು ಏನು ಬೇಕಾದ್ರು ತೀರ್ಮಾನ ಮಾಡಲಿ ಅದಕ್ಕೆ ನನ್ನ ಆಕ್ಷೇಪ ಇಲ್ಲ. ಅವರು 5 ವರ್ಷ ಸಮರ್ಪಕವಾಗಿ ಎಂಪಿ ಕೆಲಸ ಮಾಡಿದ್ದಾರೆ. ಬಳಿಕ ಬಿಜೆಪಿಗೆ ಅವರು ಬೆಂಬಲ ಅನೀಡಿದ್ದರು. ಎಂಎಲ್‌ಎ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದರು. ಬಿಜೆಪಿ ಟಿಕೆಟ್ ಸಿಗುತ್ತೆ ಎಂಬ ನಿರೀಕ್ಷೆಯಲ್ಲಿದ್ದರು. ಅವರಿಗೆ ಟಿಕೆಟ್ ಸಿಕ್ಕಿಲ್ಲ. ಈಗ ಅವರು ಏನು ಮಾಡ್ತಾರೆ ಗೊತ್ತಿಲ್ಲ. ಅವರ ಬೆಂಬಲಿಗರು ಜೆಡಿಎಸ್‌ಗೆ ಹೇಗೆ ಕೆಲಸ ಮಾಡೋದು ಅಂತಾ ಹೇಳ್ತಾ ಇದ್ದಾರೆ. ನಾಳೆ ಸುಮಲತಾ ಅವರು ಸಭೆ ಕರೆದಿದ್ದಾರೆ. ಸಭೆಯ ಬಳಿಕ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ನೋಡೋಣಾ. ಕುಮಾರಸ್ವಾಮಿ ಅವರು ಸುಮಲತಾ ಅವರನ್ನು ಅಕ್ಕ ಅಂದಿದ್ದಾರೆ. ಈಗ ಕೆಲವೊಂದು ಮಾತುಗಳು ಅವರಿಂದ ಈಗ ಕೇಳಿ ಬರ್ತಾ ಇವೆ. ಇದೊಂದು ವಿಪರ್ಯಾಸ ಅನ್ನಿಸುತ್ತಿದೆ. ಹಲವು ಜನರಿಗೆ ಕುಮಾರಸ್ವಾಮಿ ಫೋನ್ ಮಾಡ್ತಾ ಇದ್ದಾರೆ ನೋಡೋಣ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.

ಬಾಗಲಕೋಟೆ ವೀಣಾ ಕಾಶಪ್ಪನವರ ಬಂಡಾಯ; ಕಾಂಗ್ರೆಸ್‌ ವಿರುದ್ಧ ಸ್ಪರ್ಧೆಗೆ 2 ದಿನದಲ್ಲಿ ತೀರ್ಮಾನ

ರವೀಂದ್ರ ಶ್ರೀಕಂಠಯ್ಯ ಹೇಳಿದ್ರು ಅಂತ ರಾಜಿನಾಮೆ ಕೊಡೋಣ ಬಿಡಿ:  ರಾಜ್ಯದ ಕೃಷಿ ಸಚಿವ ಚಲುವರಾಯಸ್ವಾಮಿ ರಾಜೀನಾಮೆ ಕೊಡಬೇಕು ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹ ಮಾಡಿದ ವಿಚಾರದ ಬಗ್ಗೆ ಮಾತನಾಡಿದ ಅವರು, ರವೀಂದ್ರ ಶ್ರೀಕಂಠಯ್ಯನಷ್ಟು ಬುದ್ದಿವಂತ ನಾನಲ್ಲ. ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬಂದವನು. ಅವರ ಬಳಿ ಟ್ರೇನಿಂಗ್ ಹೋಗಬೇಕು. ಅವರು ಹೇಳಿದಮೇಲೆ ರಾಜೀನಾಮೆ ಕೊಡಬೇಕಲ್ವಾ? ರಾಜೀನಾಮೆ ಕೊಡಣ ಬಿಡಿ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯಗೆ ಟಾಂಗ್ ನೀಡಿದರು.

Follow Us:
Download App:
  • android
  • ios