ಕೆಎಸ್ ಈಶ್ವರಪ್ಪ ಬಳಿಕ ಮತ್ತೊಬ್ಬ ಬಿಜೆಪಿ ಸಚಿವ ಚುನಾವಣಾ ರಾಜಕೀಯದಿಂದ ದೂರ!
ಚುನಾವಣೆ ರಾಜಕೀಯದಿಂದ ಮಾಜಿ ಸಚಿವ ಕೆಎಸ್ ಈಶ್ವರಪ್ಪ ದೂರ ಉಳಿದ ಬಳಿಕ ಇದೀಗ ಮತ್ತೊಬ್ಬ ಸಚಿವ ಚುನಾವಣಾ ರಾಜಕೀಯದಿಂದ ದೂರ ಉಳಿಯುವ ಬಗ್ಗೆ ಮಾತನಾಡಿದ್ದಾರೆ.
ವಿಜಯನಗರ (ಅ.2): ಚುನಾವಣೆ ರಾಜಕೀಯದಿಂದ ಮಾಜಿ ಸಚಿವ ಕೆಎಸ್ ಈಶ್ವರಪ್ಪ ದೂರ ಉಳಿದ ಬಳಿಕ ಇದೀಗ ಮತ್ತೊಬ್ಬ ಸಚಿವ ಚುನಾವಣಾ ರಾಜಕೀಯದಿಂದ ದೂರ ಉಳಿಯುವ ಬಗ್ಗೆ ಮಾತನಾಡಿದ್ದಾರೆ.
ಮಾಜಿ ಸಚಿವ ಆನಂದ ಸಿಂಗ್ ರಾಜಕೀಯದಿಂದ ದೂರವಾಗೋ ಮಾತನಾಡಿದ್ದಾರೆ. ಒಂದು ಉಪಚುನಾವಣೆ ಸೇರಿದಂತೆ ಹೊಸಪೇಟೆ ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದಿರೋ ಆನಂದ ಸಿಂಗ್.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಗ ಸಿದ್ಧಾರ್ಥ ಸಿಂಗ್ ಅವರನ್ನು ಕಣಕ್ಕೆ ಇಳಿಸಿದ್ದರು. ಲೋಕಸಭೆ ಚುನಾವಣೆಗೆ ಹೋಗೋ ಉದ್ದೇಶದಿಂದಲೇ ಮಗನನ್ನು ಕಣಕ್ಕಿಳಿಸಿದ್ದಾರೆ ಎನ್ನಲಾಗಿತ್ತು. ಆದ್ರೆ ಕಾಂಗ್ರೆಸ್ ಗ್ಯಾರಂಟಿ ಅಲೆಯಲ್ಲಿ ಸಿದ್ದಾರ್ಥ ಸೋಲನುಭವಿಸಿದರು. ಮಗನ ಜೊತೆಗೆ ಬಿಜೆಪಿಯ ದೊಡ್ಡ ಸೋಲು ಚುನಾವಣೆ ರಾಜಕೀಯದಿಂದ ಹಿಂದೆ ಸರಿಯುವಂತೆ ಮಾಡಿದೆ ಎನ್ನಲಾಗಿದೆ.
ಅಪ್ಪ-ಮಗನ ವರ್ಗಾವಣೆ ದಂಧೆ ಸುಳ್ಳಾದರೆ ಕುರುಡುಮಲೆ ಗಣೇಶನ ಮುಂದೆ ಬಂದು ಪ್ರಮಾಣ ಮಾಡಲಿ; ಸಿಎಂಗೆ ಈಶ್ವರಪ್ಪ ಸವಾಲು!
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಲೋಕಸಭೆಯಿಂದ ಸ್ಪರ್ಧೆ ಮಾಡೋ ಬಗ್ಗೆ ಪ್ರಶ್ನಿಸಿದಾಗ, ನಾನು ಚುನಾವಣೆಗೆ ಸ್ಪರ್ಧಿಸಲ್ಲ ಆದರೆ ಪಕ್ಷದಲ್ಲಿರುತ್ತೇನೆ. ಚುನಾವಣೆ ವೇಳೆ ಪಕ್ಷ ಕೊಟ್ಟ ಕೆಲಸ ಮಾಡುತ್ತೇನೆ. ಅಗತ್ಯ ಇದ್ದವರ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ. ಪಕ್ಷ ಯಾರನ್ನೇ ಕಣಕ್ಕಿಳಿಸಿದ್ರು ಗೆಲ್ಲಿಸಿಕೊಂಡು ಬರುತ್ತೇನೆ. ಆದರೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ಇದನ್ನು ಮೂರು ವರ್ಷಗಳ ಹಿಂದೆಯೇ ಹೇಳಿದ್ದೆ ಅದರಂತೆ ನಡೆದುಕೊಂಡಿದ್ದೇನೆ ಎಂದಿದ್ದಾರೆ.
ನನಗೆ ಕ್ಷೇತ್ರ ಇಲ್ಲ ಎಂದು ಲೇವಡಿ ಮಾಡ್ತಿದ್ದ ಈಶ್ವರಪ್ಪನಿಗೆ ಟಿಕೆಟ್ ಸಿಗ್ಲಿಲ್ಲ, ಸಿದ್ಧರಾಮಯ್ಯ ವ್ಯಂಗ್ಯ!
ಬಳ್ಳಾರಿ ವಿಜಯನಗರ ಭಾಗದಲ್ಲಿ ಬಿಜೆಪಿಗೆ ಶ್ರೀರಾಮುಲು ಜನಾರ್ದನ ರೆಡ್ಡಿಯಷ್ಟೇ ಬಲವನ್ನು ತುಂಬಿದ್ದ ಆನಂದ ಸಿಂಗ್ ವಿಧಾನಸಭಾ ಚುನಾವಣೆ ಸೋಲಿನ ಬಳಿಕ ರಾಜಕೀಯದಿಂದ ಆಸಕ್ತಿ ಕಳೆದುಕೊಂಡಂತಾಗಿದ್ದಾರೆ. ಮಾಧ್ಯಮದಿಂದ ದೂರವೇ ಉಳಿದರಿವ ಅವರು. ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಇದೀಗ ದಿಢೀರಾಗಿ ಪ್ರತ್ಯಕ್ಷರಾಗಿ ಚುನಾವಣೆಯಿಂದ ದೂರು ಉಳಿಯುವ ಬಗ್ಗೆ ಹೇಳಿಕೆ ನೀಡಿದ್ದಾರೆ.