ಟಿಕೆಟ್‌ ಘೋಷಣೆ ಮಾಡುವ ಮುನ್ನವೇ ರಾಜಕೀಯ ನಿವೃತ್ತಿ ಪಡೆದುಕೊಂಡ ಕೆಎಸ್‌ ಈಶ್ವರಪ್ಪ ಬಗ್ಗೆ ಸಿದ್ಧರಾಮಯ್ಯ ವ್ಯಂಗ್ಯವಾಡಿದ್ದಾರೆ, ನನಗೆ ಕ್ಷೇತ್ರ ಇಲ್ಲ ಎಂದು ಟೀಕೆ ಮಾಡ್ತಿದ್ದ ಈಶ್ವರಪ್ಪ ಅವರಿಗೆ ಈಗ ಟಿಕೆಟ್‌ ಸಿಗ್ಲಿಲ್ಲ ಎಂದು ಹೇಳಿದ್ದಾರೆ. 

ಕಾರವಾರ (ಏ.15): ಸಿದ್ಧರಾಮಯ್ಯಗೆ ನಿಲ್ಲೋಕೆ ಕ್ಷೇತ್ರ ಇಲ್ಲ ಎಂದು ನಿಂತಲ್ಲಿ, ಕುಂತಲ್ಲಿ ಹೇಳಿಕೊಂಡು ಬರ್ತಿದ್ದ ಈಶ್ವರಪ್ಪನಿಗೆ ಬಿಜೆಪಿ ಟಿಕೆಟ್‌ ನೀಡಲಿಲ್ಲ ಎಂದು ಈಶ್ವರಪ್ಪ ವಿರುದ್ಧ ಮಾಜಿ ಸಿಎಂ ಹಾಗೂ ಕಾಂಗ್ರೆಸ್‌ ನಾಯಕ ಸಿದ್ಧರಾಮಯ್ಯ ಲೇವಡಿ ಮಾಡಿದ್ದಾರೆ. ಉತ್ತರಕನ್ನಡದ ಹಳಿಯಾಳಕ್ಕೆ ಆರ್‌ವಿ ದೇಶಪಾಂಡೆ ಪರವಾಗಿ ಪ್ರಚಾರ ಮಾಡಲು ಆಗಮಿಸಿದ್ದ ಸಿದ್ಧರಾಮಯ್ಯ, ಪ್ರಚಾರ ಸಭೆಯ ವೇಳೆ, ಈಶ್ವರಪ್ಪ ಕುರಿತು ಲೇವಡಿ ಮಾಡಿದ್ದಾರೆ. ನನಗೆ ಕ್ಷೇತ್ರ ಇಲ್ಲ ಎಂದು ಈಶ್ಚರಪ್ಪ ಟೀಕಿಸಿದ್ದರು. ಈಗ ಈಶ್ವರಪ್ಪನಿಗೆ ಟಿಕೇಟೇ ಇಲ್ಲದಂತಾಗಿದೆ. ನನಗೆ ರಾಜ್ಯದ ಎಲ್ಲಾ ಕ್ಣೇತ್ರದಲ್ಲೂ ಸ್ಪರ್ಧೆ ಮಾಡುವಂತೆ ಕರೆಯುತ್ತಾರೆ. ಒರ್ವ ಹಿರಿಯ ಮಾಜಿ ಡಿಸಿಎಂ‌ ಆಗಿದ್ದ ಈಶ್ವರಪ್ಪನಿಗೆ ಪಕ್ಷ ಹೀಗೆ ಮಾಡಬಾರದಿತ್ತು. ಈಶ್ವರಪ್ಪ ಮಾತ್ರ ಅಲ್ಲ ಸವದಿ, ಶೆಟ್ಟರ್ ಜತೆ ನಡೆದುಕೊಂಡ ರೀತಿ ಕೂಡ ಸರಿಯಲ್ಲ. ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರುವ ಬಗ್ಗೆ ಇನ್ನೂ ಮಾತನಾಡಿಲ್ಲ. ಪಕ್ಷಕ್ಕೆ ಬಂದರೆ ನಾವು ಸ್ವಾಗತ ಮಾಡುತ್ತೇವೆ. ಇನ್ನು ಹಲವು ಬಿಜೆಪಿ ಶಾಸಕರು ಕಾಂಗ್ರೆಸ್ ಬರುವ ಬಗ್ಗೆ ಮಾತುಕತೆ ನಡೆದಿದೆ ಎಂದು ಹೇಳಿದರು. ನನ್ನನ್ನು ಕಟ್ಟಿಹಾಕಲು ಬಿಜೆಪಿ ನಾಯಕರು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ವರುಣಾದಲ್ಲಿ ವಿ.ಸೋಮಣ್ಣ ಅವರನ್ನು ಕಣಕ್ಕಿಳಿಸಿರುವುದರ ಬಗ್ಗೆ ಮಾತನಾಡಿದರು.

ಶಿಗ್ಗಾಂವಿಯಲ್ಲಿ ವಿನಯ್ ಕುಲಕರ್ಣಿ ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ನಿಲ್ಲುವುದಿಲ್ಲ. ಅಲ್ಲಿ ಅಲ್ಪಸಂಖ್ಯಾತರೊಬ್ಬರು ಸ್ಪರ್ಧೆ ಮಾಡುತ್ತಾರೆ ಎಂದು ಸಿದ್ಧರಾಮಯ್ಯ ಹೇಳಿದರು. ಇಂದು ಅಥವಾ ನಾಳೆ ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ ಮಾಡಲಿದ್ದೇವೆ. ಈಗಾಗಲೇ ಎಲ್ಲವೂ ಫೈನಲ್‌ ಆಗಿದೆ ಎನ್ನುವ ಮಾಹಿತಿಯನ್ನು ಅವರು ನೀಡಿದರು.

ಈಶ್ವರಪ್ಪ ಹತ್ಯೆಗೆ ಲಷ್ಕರ್‌ ಜೊತೆ ಪಿಎಫ್‌ಐ ಸಂಚು: ಬೆಳಗಾವಿ ಜೈಲಿನಿಂದಲೇ ಶಾಕೀರ್‌ ಸುಪಾರಿ

ಮುಸ್ಲಿಂ ಮೀಸಲಾತಿ ರದ್ದು ಮಾಡಿರುವ ಕ್ರಮ ಒಳ್ಳೆಯದಲ್ಲ. 1995ರಿಂದ ಅವರಿಗೆ ಮೀಸಲಾತಿ ಇತ್ತು. ಬೇರೆಯವರಿಗೆ ಮೀಸಲಾತಿ ಹೆಚ್ಚಿಸಿದ್ದು ತಪ್ಪಿಲ್ಲ. ಆದರೆ, ಮುಸ್ಲಿಂ ಅವರಿಗೆ ಯಾಕೆ ತೆಗೆಯಬೇಕಿತ್ತು..? ಸುಪ್ರೀಂ ಕೋರ್ಟ್ ಯಾವ ತೀರ್ಪು ಕೊಡಲಿದೆ ಈ ಬಗ್ಗೆ ಕಾದು ನೋಡೋಣ ಎಂದು ರಾಜ್ಯ ಸರ್ಕಾರದ ನಿರ್ಧಾರ ಬಗ್ಗೆ ಅವರು ಮಾತನಾಡಿದರು.

Jagadish Shettar: ಪಕ್ಷೇತರವಾಗಿ ಸ್ಪರ್ಧಿಸುವ ಸುಳಿವು ನೀಡಿ ಭಾವುಕರಾದ ಶೆಟ್ಟರ್‌!

ಹಳಿಯಾಳಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದ ಸಿದ್ಧರಾಮಯ್ಯ, ಹಳಿಯಾಳ ಸಿವಿಲ್ ಎಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ನಿರ್ಮಾಣವಾಗಿದ್ದ ಹೆಲಿಪ್ಯಾಡ್‌ನಲ್ಲಿ ಇಳಿದರು. ಈ ವೇಳೆ ಸಿದ್ಧರಾಮಯ್ಯರಿಗೆ ಹಳಿಯಾಳ ಶಾಸಕ ಆರ್.ವಿ.ದೇಶ್‌ಪಾಂಡೆ ಹಾಗೂ ಕಾಂಗ್ರೆಸ್ ಮುಖಂಡರು, ಹಾರ, ಹೂಗುಚ್ಛ ನೀಡಿ ಸ್ವಾಗತ ಕೋರಿದದರು. ಹಳಿಯಾಳದಲ್ಲಿ ಆರ್‌ ವಿ ದೇಶಪಾಂಡೆ ಹಾಗೂ ವಿ.ಎಸ್.ಪಾಟೀಲ್ ಪರ ಸಿದ್ಧರಾಮಯ್ಯ ಪ್ರಚಾರ ಮಾಡಲಿದ್ದಾರೆ.