ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಡಿಆರ್‌ಇ ಅಧಿಕಾರಿಗಳಿಂದ ಮಾಹಿತಿ ಪಡೆದು ದೆಹಲಿ ಸಿಬಿಐ ತಂಡ ತನಿಖೆ ಆರಂಭಿಸಿದೆ. ರನ್ಯಾ ರಾವ್ ಅವರನ್ನು ದುಬೈನಿಂದ ಬಂದಿಳಿದಾಗ 12 ಕೋಟಿ ರೂ. ಮೌಲ್ಯದ ಚಿನ್ನದೊಂದಿಗೆ ಬಂಧಿಸಲಾಗಿತ್ತು. ಆಕೆಯ ನಿವಾಸದಲ್ಲಿ ಇಡಿ ದಾಳಿ ನಡೆಸಿ 2.30 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಅಂತರಾಷ್ಟ್ರೀಯ ಮಟ್ಟದ ವ್ಯಕ್ತಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರನ್ಯಾ ರಾವ್ ವಿರುದ್ಧ ಈಗ ಸಿಬಿಐ ಎಫ್ಐಆರ್ ದಾಖಲು ಮಾಡಿದೆ. ಅಂತರಾಷ್ಟ್ರೀಯ ಗೋಲ್ಡ್ ಸ್ಮಗ್ಲಿಂಗ್ ಗ್ಯಾಂಗ್ ಸಂಬಂಧ ತನಿಖೆ ಆರಂಭವಾಗಿದ್ದು ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟೆಲೆಜೆನ್ಸಿ (ಡಿಆರ್‌ಇ) ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ದೆಹಲಿ ಸಿಬಿಐ ತಂಡ ಪ್ರಕರಣ ದಾಖಲು ಮಾಡಿಕೊಂಡಿದೆ.

ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಿಕೊಂಡು ಬೆಂಗಳೂರು, ದೆಹಲಿ ಹಾಗೂ ಮುಂಬೈನಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಿ ತನಿಖೆ ಚುರುಕುಗೊಳಿಸಿದೆ.

ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ನಟಿ ರನ್ಯಾ ರಾವ್ ಬಿಗ್ ಟ್ವಿಸ್ಟ್! 27 ಸಲ ದುಬೈ ಯಾತ್ರೆ| ಮೊಬೈಲ್‌ನಲ್ಲಿ ಸಿಕ್ಕಿದ್ದೇನು?

ರನ್ಯಾ ರಾವ್ ಪ್ರಕರಣ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದ ಗೋಲ್ಡ್ ಸ್ಮಗ್ಲಿಂಗ್ ಸಂಬಂಧ ಕೂಡ ತನಿಖೆ‌ ಆರಂಭವಾಗಿದೆ. ಅಂತರಾಷ್ಟ್ರೀಯ ಏರ್ಪೋರ್ಟ್ ಗಳಲ್ಲಿ ಕೂಡ ತಂಡ ಮಾಹಿತಿ ಸಂಗ್ರಹಿಸುತ್ತಿದೆ.

ಮಾರ್ಚ್ 3ರಂದು ರಾತ್ರಿ 7ರ ಸುಮಾರಿಗೆ ತಮ್ಮ ಪತಿ ಜಿತಿನ್ ಹುಕ್ಕೇರಿ ಜತೆ ದುಬೈನಿಂದ ಬೆಂಗಳೂರಿಗೆ ಬಂದಿಳಿದ ಚಲನಚಿತ್ರ ನಟಿ ರನ್ಯಾ ರಾವ್‌ ಳನ್ನು ಡಿಆರ್‌ಇ ಅಧಿಕಾರಿಗಳು ಬಂಧಿಸಿದ್ದರು. ತಪಾಸಣೆಗೆ ಒಳಪಡಿಸಿದಾಗ ರನ್ಯಾ ಧರಿಸಿದ್ದ ಲೆದರ್‌ ಜಾಕೆಟ್‌ ಮತ್ತು ತನ್ನ ಹೊಟ್ಟೆ, ಕಾಲು ಹಾಗೂ ಸೊಂಟ ಸೇರಿ ದೇಹದ ವಿವಿಧ ಭಾಗಗಳಲ್ಲಿ ಬ್ಯಾಂಡೇಜ್ ಬಟ್ಟೆಯಿಂದ ಸುತ್ತಿಕೊಂಡಿದ್ದ ₹12 ಕೋಟಿ ಮೌಲ್ಯದ 14.8 ಕೇಜಿ ತೂಕದ ಚಿನ್ನದ ಬಿಸ್ಕೆಟ್‌ ಹಾಗೂ ಗಟ್ಟಿಗಳು ಪತ್ತೆಯಾಗಿದ್ದವು.

ಚಿನ್ನ ಕಳ್ಳಸಾಗಣೆ: ನಟಿ ರನ್ಯಾ ರಾವ್ ದುಬೈ ನಂಟು ಬಯಲು, 40 ಬಾರಿ ವಿದೇಶ ಪ್ರವಾಸ!

ನಟಿ ರನ್ಯಾ ರಾಜ್ಯ ಪೊಲೀಸ್ ಗೃಹ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಡಿಜಿಪಿ ರಾಮಚಂದ್ರರಾವ್ ಅವರ ಮಲಮಗಳು ವಿದೇಶದಲ್ಲಿ ರಿಯಲ್‌ ಎಸ್ಟೇಟ್‌ ಬಿಸಿನೆಸ್‌ ಕೂಡ ಮಾಡುತ್ತಾಳೆ. ಇದೀಗ ಚಿನ್ನ ಸಾಗಿಸುವಾಗ ಸುಂಕ ತಪ್ಪಿಸುವ ದುರುದ್ದೇಶದಿಂದಲೇ ಕಳ್ಳ ಮಾರ್ಗದಲ್ಲಿ ರನ್ಯಾ ವ್ಯವಹಾರ ನಡೆಸಿದ್ದು, ಚಿನ್ನ ಕಳ್ಳ ಸಾಗಣೆಯಿಂದ ₹4.83 ಕೋಟಿ ಸುಂಕ ನಷ್ಟವಾಗಿದೆ ಎಂದು ಡಿಆರ್‌ಐ ಅಧಿಕಾರಿಗಳು ಹೇಳಿದ್ದಾರೆ. 

ರನ್ಯಾ ಅಮೆರಿಕ, ಬ್ರಿಟನ್‌, ಯುಎಇ ದೇಶಗಳಿಗೆ ಹಲವು ಬಾರಿ ಭೇಟಿ ನೀಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದ್ದು, ದೊಡ್ಡವರ ಕೈವಾಡ ಇದರಲ್ಲಿ ಇರಬಹುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ರನ್ಯಾ ನಿವಾಸದಲ್ಲೂ ಇಡಿ ದಾಳಿ ಮಾಡಿ 2.30 ಕೋಟಿ ಅಕ್ರಮ ನಗದು ವಶಪಡಿಸಿಕೊಂಡಿತ್ತು.