ಚಿತ್ರದುರ್ಗ: ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ನೋಡ ಬನ್ನಿ ಪ್ರಾಣಿಗಳ ಚಿನ್ನಾಟ!

ಚಿತ್ರದುರ್ಗ ಅಂದ್ರೆ ಥಟ್ ಅಂತ ನೆನಪಾಗೋದು ಏಳು ಸುತ್ತಿನ ಕೋಟೆ‌. ಆದ್ರೆ ಕೋಟೆನಾಡಲ್ಲಿರುವ ಕಿರು ಮೃಗಾಲಯದಲ್ಲಿ ಕರಡಿಗಳ ಚಿನ್ನಾಟ ಹಾಗೂ ಹುಲಿಗಳ‌ ಗಂಭೀರ ನಡಿಗೆ ಪ್ರವಾಸಿಗರ ಜನಮನ ಸೆಳೆಯುತ್ತಿವೆ. ಹೀಗಾಗಿ ಬಯಲುಸೀಮೆಯ ಝೂಗೆ ಪ್ರವಾಸಿಗರ ದಂಡೇ ಹರಿದು ಬರ್ತಿದೆ. ಈ ಕುರಿತು ವರದಿ ಇಲ್ಲಿದೆ ನೋಡಿ‌. 

Adumalleshwar small zoo in chitradurga wild life rav

ಚಿತ್ರದುರ್ಗ (ಸೆ.22) : ಚಿತ್ರದುರ್ಗ ಅಂದ್ರೆ ಥಟ್ ಅಂತ ನೆನಪಾಗೋದು ಏಳು ಸುತ್ತಿನ ಕೋಟೆ‌. ಆದ್ರೆ ಕೋಟೆನಾಡಲ್ಲಿರುವ ಕಿರು ಮೃಗಾಲಯದಲ್ಲಿ ಕರಡಿಗಳ ಚಿನ್ನಾಟ ಹಾಗೂ ಹುಲಿಗಳ‌ ಗಂಭೀರ ನಡಿಗೆ ಪ್ರವಾಸಿಗರ ಜನಮನ ಸೆಳೆಯುತ್ತಿವೆ. ಹೀಗಾಗಿ ಬಯಲುಸೀಮೆಯ ಝೂಗೆ ಪ್ರವಾಸಿಗರ ದಂಡೇ ಹರಿದು ಬರ್ತಿದೆ. ಈ ಕುರಿತು ವರದಿ ಇಲ್ಲಿದೆ ನೋಡಿ‌. 

ಕಳೆದ ನಾಲ್ಕು ವರ್ಷಗಳ ಹಿಂದೆ, ಮೃಗಾಲಯ ಅಭಿವೃದ್ಧಿಗಾಗಿ ಜಿಲ್ಲೆಯ DMF ನಿಧಿಯಿಂದ 3 ಕೋಟಿ ರೂಪಾಯಿ ಅನುಧಾನವನ್ನು ಮಂಜೂರು ಮಾಡಲಾಗಿತ್ತು. ಆ‌ ಹಣದಿಂದ ಮೃಗಾಲಯಕ್ಕೆ ಮೈಸೂರು ಹಾಗು ಬನ್ನೇರುಘಟ್ಟ ಮೃಗಾಲಯದಿಂದ ಎರಡು ಹುಲಿಗಳನ್ನು ತರಲಾಗಿದೆ. ಆ ಹುಲಿಗಳ ಗಂಭೀರ ನಡಿಗೆ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಅಲ್ಲದೇ  ಮೃಗಾಲಯದಲ್ಲೇ‌ ಜನ್ಮ ಪಡೆದು ಜನಾಕರ್ಷಣೀಯವಾಗಿ, ತಾಯಿ ಕರಡಿಯೊಂದಿಗೆ ತುಂಟಾಟವಾಡುವ ಕರಡಿ ಮರಿಗಳ ಚಿನ್ನಾಟ ಝೂ ಗೆ ಬರುವ ಜನರ ಜನಮನ ಸೆಳೆಯುತ್ತಿದೆ. ಹೀಗಾಗಿ ದಿನದಿಂದ ದಿನಕ್ಕೆ ಆಡುಮಲ್ಲೇಶ್ವರ ಝೂಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. 

 

ಇದರಿಂದಾಗಿ ಸರ್ಕಾರಕ್ಕೆ ಆದಾಯ ಕೂಡ ದ್ವಿಗುಣವಾಗಿದೆ‌. ಹೀಗಾಗಿ  ಇನ್ನಷ್ಟು ಅಪರೂಪದ ಆಕರ್ಷಕ ಪ್ರಾಣಿಗಳನ್ನು ಝೂಗೆ ತರಲು ಮೃಗಾಲಯ ಅಧಿಕಾರಿಗಳು ಸಿದ್ಧತೆ ನಡೆಸಿದ್ದು, ಪ್ರಾಣಿಗಳ ವಾಸಕ್ಕೆ ಅಗತ್ಯ ಗೃಹ ನಿರ್ಮಾಣ ಭರದಿಂದ ಸಾಗಿದೆ.

'ಕಾವೇರಿ'ದ ಪ್ರತಿಭಟನೆ: ಅಂಚೆ ಕಚೇರಿಗೆ ಮುತ್ತಿಗೆ ಹಾಕಿ ಒಳನುಗ್ಗಲು ಯತ್ನಿಸಿದ ಕರವೇ ಕಾರ್ಯಕರ್ತರು!

ಇನ್ನೂ ಈ ಮೃಗಾಲಯ ಚಿತ್ರದುರ್ಗ ನಗರದಿಂದ  7 ಕಿಲೋಮೀಟರ್ ಅಂತರದಲ್ಲಿದೆ. ಹಚ್ಚ ಹಸುರಿನ ಸೊಬಗಿನ  ವಾತಾವರಣದ ಮಧ್ಯೆ ಕಲ್ಲು ಬಂಡೆಗಳ ನಡುವೆ ಹಾದು ಹೋಗಿರುವ ಅಂಕುಡೊಂಕಾದ ರಸ್ತೆಯಲ್ಲಿರುವ ಆಡುಮಲ್ಲೇಶ್ವರ ಝೂ(Adumalleshwar zoo)ನಲ್ಲಿ ಪ್ರಾಣಿಗಳ ವಾಸಕ್ಕಾಗಿ ಮನೆಗಳನ್ನು ವಿಸ್ತಾರವಾಗಿ ನಿರ್ಮಿಸಿರೋದು ಜನಾಕರ್ಷಣೆಯ ಕೇಂದ್ರವಾಗಿದೆ. ಹೀಗಾಗಿ ಪ್ರಾಣಿ ಪಕ್ಷಿಗಳ ಕಲರವ  ವೀಕ್ಷಿಸುತ್ತಾ ಝೂಗೆ ಬರುವ ಪ್ರವಾಸಿಗರು ಫುಲ್ ಎಂಜಾಯ್ ಮಾಡ್ತಿದ್ದಾರೆ. 

Adumalleshwar small zoo in chitradurga wild life rav

ಹುಲಿಗೆ ಆಹಾರವಾದ 7 ವರ್ಷದ ಬಾಲಕ: ಅಪ್ಪ-ಅಮ್ಮನೆದುರೇ ಮಗನನ್ನು ಕೊಂದು ತಿಂದ ವ್ಯಾಘ್ರ

ಒಟ್ಟಾರೆ ಹುಲಿ ಹಾಗು ಕರಡಿಗಳ ಆಗಮನದಿಂದಾಗಿ ಬಯಲು ಸೀಮೆಯ ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ ಮೆರಗು ಬಂದಿದೆ. ಹೀಗಾಗಿ ವಿವಿದೆಡೆಗಳಿಂದ ಮೃಗಾಲಯ ವೀಕ್ಷಣೆಗೆ ಜನ ಸಾಗರವೇ ಹರಿದು ಬರ್ತಿದೆ. ನೀವು ಕೂಡ ಒಮ್ಮೆ ಭೇಟಿ ಕೊಟ್ಟು ಪ್ರಾಣಿಗಳ ಸುಂದರ ಕ್ಷಣಗಳನ್ನು ಕಂಣ್ತುಂಬಿಕೊಳ್ಳಿ.  

ಕ್ಯಾಮರಾಮ್ಯಾನ್ ಶ್ರೀನಿವಾಸ್ ಜೊತೆ ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿತ್ರದುರ್ಗ

Adumalleshwar small zoo in chitradurga wild life rav

Latest Videos
Follow Us:
Download App:
  • android
  • ios