*  ನೇಮಕಾತಿ ವಿಭಾಗದ ಹಿರಿಯ ಅಧಿಕಾರಿ ವರ್ಗಾವಣೆ*  ಆಂತರಿಕ ಭದ್ರತೆಗೆ ವರ್ಗ*  ನೇಮಕಾತಿ ವಿಭಾಗಕ್ಕೆ ಹಿತೇಂದ್ರ 

ಬೆಂಗಳೂರು(ಏ.28): ಪ್ರಸ್ತುತ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವ 545 ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಅಕ್ರಮದಲ್ಲಿ ಪೊಲೀಸ್‌(Police) ಇಲಾಖೆಯ ನೇಮಕಾತಿ ವಿಭಾಗದ ಪಾತ್ರದ ಬಗ್ಗೆ ಶಂಕೆ ವ್ಯಕ್ತವಾದ ಬೆನ್ನಲ್ಲೇ ಆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ADGP) ಅಮೃತ್‌ ಪಾಲ್‌(Amrit Paul) ಅವರನ್ನು ರಾಜ್ಯ ಸರ್ಕಾರ ಬುಧವಾರ ವರ್ಗಾವಣೆಗೊಳಿಸಿದೆ. ಇದರೊಂದಿಗೆ ಸಾರ್ವಜನಿಕ ವಲಯದಲ್ಲಿ ಪೊಲೀಸ್‌ ಇಲಾಖೆಗೆ ಭಾರಿ ಅಪಮಾನಕ್ಕೆ ತಂದೊಡ್ಡಿರುವ ನೇಮಕಾತಿ(Recruitment) ಭಾನಗಡಿಗೆ ಸರ್ಕಾರದ ಮಟ್ಟದಲ್ಲಿ ಮಹತ್ವದ ವಿಕೆಟ್‌ ಪತನವಾಗಿದೆ.

ಅಕ್ರಮ ಬೆಳಕಿಗೆ ಬಂದ ದಿನದಿಂದಲೂ ನೇಮಕಾತಿ ವಿಭಾಗದ ಎಡಿಜಿಪಿ ವರ್ಗಾವಣೆಗೆ(Transfer) ವಿರೋಧ ಪಕ್ಷ ಕಾಂಗ್ರೆಸ್‌(Congress) ಬಲವಾಗಿ ಆಗ್ರಹಿಸಿತ್ತು. ಈ ಟೀಕೆಗಳ ಹಿನ್ನೆಲೆಯಲ್ಲಿ ಎಚ್ಚೆತ್ತ ರಾಜ್ಯ ಸರ್ಕಾರವು ನೇಮಕಾತಿ ವಿಭಾಗದ ಎಡಿಜಿಪಿ ಹುದ್ದೆಯಿಂದ ಅಮೃತ್‌ ಪಾಲ್‌ ಅವರನ್ನು ಆಂತರಿಕ ಭದ್ರತಾ ವಿಭಾಗಕ್ಕೆ ಎತ್ತಂಗಡಿ ಮಾಡಿದೆ. ಅವರಿಂದ ತೆರವಾದ ನೇಮಕಾತಿ ವಿಭಾಗದ ಹೊಣೆಗಾರಿಕೆಯನ್ನು ಎಡಿಜಿಪಿ ಆರ್‌.ಹಿತೇಂದ್ರ ಅವರ ಹೆಗಲಿಗೆ ಸರ್ಕಾರ ಹಾಕಿದೆ.

ಪಿಎ​ಸ್‌ಐ ಪರೀಕ್ಷೆ ಅಕ್ರಮ: ಮತ್ತೊಬ್ಬ ಅಭ್ಯರ್ಥಿ ಬಂಧನ

ದಿವ್ಯಾ ವಿರುದ್ಧ ಅರೆಸ್ಟ್ ವಾರೆಂಟ್: ಸರೆಂಡರ್ ಆಗದಿದ್ರೆ ಆಸ್ತಿ ಜಪ್ತಿ..!

ಕಲಬುರಗಿ: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ(PSI Recruitment Scam) ಆರೋಪ ಎದುರಿಸುತ್ತಿರುವ ದಿವ್ಯಾ ಹಾಗರಗಿ(Divya Hagaragi) & ಟೀಂಗೆ ಅರೆಸ್ಟ ವಾರೆಂಟ್ ಜಾರಿ ಮಾಡಲಾಗಿದೆ. ವಾರದೊಳಗೆ ಶರಣಾಗದಿದ್ರೆ ಆಸ್ತಿ ಜಪ್ತಿಯ ಎಚ್ಚರಿಕೆ ನೀಡಲಾಗಿದ್ದು, ಇದು ತಲೆ ಮರೆಸಿಕೊಂಡಿರುವ ದಿವ್ಯಾ ಹಾಗರಗಿಗೆ ತೀವ್ರ ನಡುಕ ಸೃಷ್ಟಿಸುವಂತದ ಆದೇಶವಾಗಿದೆ. 

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ವಿಚಾರಣೆ ತೀವ್ರಗೊಳಿಸಿರುವ ಸಿಐಡಿ, ನಾಪತ್ತೆಯಾಗಿರುವವರ ಪತ್ತೆಗೆ ಬಿಗಿ ಕ್ರಮಕ್ಕೆ ಮುಂದಾಗಿದೆ. ಈ ಪ್ರಕರಣದ ಪ್ರಮುಖ ಆರೋಪ ಎದುರಿಸುತ್ತಿರುವ ಕಲಬುರಗಿಯ(Kalaburagi) ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ ಮತ್ತು ಶಾಲೆಯ ಕೆಲಸ ನೌಕರರು ಕಳೆದ 16 ದಿನಗಳಿಂದ ನಾಪತ್ತೆಯಾಗಿದ್ದಾರೆ. ಅವರ ಬಂಧನಕ್ಕೆ ಸಿಐಡಿ(CID) ಎಲ್ಲಾ ಪ್ರಯತ್ನ ನಡೆಸಿದ್ರೂ ಪತ್ತೆಯಾಗಿಲ್ಲ. ಇವರ ಬಂಧನಕ್ಕಾಗಿಯೇ ಸಿಐಡಿ ಆರು ತಂಡ ರಚಿಸಿ ಹಗಲಿರುಳು ಶೋಧ ನಡೆಸುತ್ತಿದ್ರೂ ದಿವ್ಯಾ ಹಾಗರಗಿ ಆಂಡ್ ಟೀಂ ಸುಳಿವು ಸಿಕ್ಕಿಲ್ಲ.