ಬೆಂಗಳೂರು-ಪುಣೆ ಹೆದ್ದಾರಿ ಪರಿಶೀಲಿಸಿದ ಎಡಿಜಿಪಿ ಅಲೋಕ್ ಕುಮಾರ್

ಹೈವೇ ರಸ್ತೆಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಬೆಂಗಳೂರು-ಪುಣೆ ನ್ಯಾಶನಲ್ ಹೈವೆ ರಸ್ತೆಯನ್ನು ಸಂಚಾರ ಮತ್ತು ಸುರಕ್ಷತಾ ಪ್ರಾಧಿಕಾರ ಎಡಿಜಿಪಿ ಅಲೋಕ್ ಕುಮಾರ್ ಇಂದು ಪರಿಶೀಲನೆ ನಡೆಸಿದ್ದಾರೆ.

adgp alok kumar inspected the bengaluru pune highway gvd

ಬೆಂಗಳೂರು (ಆ.02): ಹೈವೇ ರಸ್ತೆಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಬೆಂಗಳೂರು-ಪುಣೆ ನ್ಯಾಶನಲ್ ಹೈವೆ ರಸ್ತೆಯನ್ನು ಸಂಚಾರ ಮತ್ತು ಸುರಕ್ಷತಾ ಪ್ರಾಧಿಕಾರ ಎಡಿಜಿಪಿ ಅಲೋಕ್ ಕುಮಾರ್ ಇಂದು ಪರಿಶೀಲನೆ ನಡೆಸಿದ್ದಾರೆ. ಇತ್ತೀಚೆಗೆ ರಾಜ್ಯದ ಹೈವೇ ರಸ್ತೆಗಳಲ್ಲಿ ಹೆಚ್ಚಾಗಿರುವ ಅಪಘಾತಗಳ ಸಂಖ್ಯೆ ಹಾಗೂ ಮೈಸೂರು ದಶಪಥ ಹೆದ್ದಾರಿಯಲ್ಲಿ ಸಾಕಷ್ಟು ಅಪಘಾತ ವಿಚಾರ ರಾಷ್ಟ್ರ ಮಟ್ಟದಲ್ಲಿ ಸುದ್ಧಿಯಾಗಿತ್ತು. 

ಇತ್ತೀಚೆಗೆ ಮೈಸೂರು ದಶಪಥ ರಸ್ತೆ ಪರಿಶೀಲನೆ ಮಾಡಿ ಅಲೋಕ್ ಕುಮಾರ್ ಕ್ರಮ ಕೈಗೊಂಡಿದ್ದರು. ಇದೀಗ ಬೇರೆ ಬೇರೆ ಹೈವೇ ರಸ್ತೆಗಳ ಪರಿಶೀಲನೆ ನಡೆಸುತ್ತಿದ್ದು, ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯನ್ನು ಎಡಿಜಿಪಿ ಅಲೋಕ್ ಕುಮಾರ್ ಪರಿಶೀಲನೆ ಮಾಡುತ್ತಿದ್ದಾರೆ. ಅಲೋಕ್ ಕುಮಾರ್‌ಗೆ ಐಜಿಪಿ ರವಿಕಾಂತೇಗೌಡ, ಎಸ್ ಪಿ ಮಲ್ಲಿಕಾರ್ಜುನ್ ಬಾಲದಂಡಿ ಮಾಹಿತಿ ನೀಡುತ್ತಿದ್ದು, ಫ್ಲೈ ಓವರ್‌ಗಳ, ಹೈವೇ ಪರಿಶೀಲನೆ ನಡೆಸಿ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ಪಡೆಯುತ್ತಿದ್ದಾರೆ.

ಗ್ರಾಹಕರ ಕೈಗೆ ಎಟುಕದ ಟೊಮೆಟೋ: ಹುಣಸೆ ಹಣ್ಣು ಕೂಡಾ ದುಬಾರಿ

ಬೆಂ-ಮೈಸೂರು ಎಕ್ಸ್‌ಪ್ರೆಸ್‌ವೇ ಸುರಕ್ಷತಾ ಕ್ರಮಕ್ಕೆ ಪ್ರಾಧಿಕಾರ ನಿರ್ಲಕ್ಷ್ಯ: ಬೆಂಗ​ಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಅಪ​ಘಾ​ತ​ಗಳ ನಿಯಂತ್ರ​ಣ​ಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿ​ಕಾರ ಸಮ​ರ್ಪ​ಕ​ವಾಗಿ ಅಗತ್ಯ ರಸ್ತೆ ಸುರಕ್ಷತಾ ಕ್ರಮ​ಗ​ಳನ್ನು ಕೈಗೊಂಡಿಲ್ಲ ಎಂದು ಸಂಚಾರ ಮತ್ತು ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ದರು. ಹೆದ್ದಾರಿ ಪರಿಶೀಲನೆ ಬಳಿಕ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿ​ಕಾರ ಹೇಳಿಕೊಳ್ಳುವಂತಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತ​ಪ​ಡಿ​ಸಿ​ದ ಅವರು, ಹೆದ್ದಾ​ರಿಯಲ್ಲಿನ ಅಪಘಾತ ಪ್ರದೇಶ, ಎಂಟ್ರಿ-ಎಕ್ಸಿಟ್‌ ಸ್ಥಳಗಳಲ್ಲಿ ಸೂಚನಾ ಫಲಕವನ್ನು ಇನ್ನೂ ಹಾಕಿಲ್ಲ. ಹೆದ್ದಾರಿ ಗಸ್ತುವಾಹನ, ತುರ್ತು ವಾಹನಗಳ ವ್ಯವಸ್ಥೆಯನ್ನು ಸರಿಯಾಗಿ ಮಾಡಿಲ್ಲ ಎಂಬುದು ಸೇರಿದಂತೆ ಹಲವು ನ್ಯೂನತೆಗಳನ್ನು ವಿವರಿಸಿದರು. ಅಲ್ಲದೆ, ಮುಂದಿನ ಭೇಟಿಯ ವೇಳೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳುವಂತೆ ಪ್ರಾಧಿ​ಕಾ​ರದ ಅಧಿ​ಕಾ​ರಿ​ಗ​ಳಿಗೆ ಕಟ್ಟು​ನಿ​ಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿ​ದ​ರು.

ಎನ್‌ಎಚ್‌ಎಐ ವಿರುದ್ಧ ಅಸ​ಮಾ​ಧಾನ: ಬೆಂಗ​ಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಅಪ​ಘಾ​ತ​ಗಳ ನಿಯಂತ್ರ​ಣ​ಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿ​ಕಾರ ಸಮ​ರ್ಪ​ಕ​ವಾಗಿ ಅಗತ್ಯ ರಸ್ತೆ ಸುರಕ್ಷತಾ ಕ್ರಮ​ಗ​ಳನ್ನು ಕೈಗೊಂಡಿಲ್ಲ ಎಂದು ಸಂಚಾರ ಮತ್ತು ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ದರು. ಹೆದ್ದಾರಿ ಪರಿಶೀಲನೆ ಬಳಿಕ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿ​ಕಾರ ಹೇಳಿಕೊಳ್ಳುವಂತಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತ​ಪ​ಡಿ​ಸಿ​ದ ಅವರು, ಹೆದ್ದಾ​ರಿ ಯಲ್ಲಿನ ಅಪಘಾತ ಪ್ರದೇಶ, ಎಂಟ್ರಿ-ಎಕ್ಸಿಟ್‌ ಸ್ಥಳಗಳಲ್ಲಿ ಸೂಚನಾ ಫಲಕವನ್ನು ಇನ್ನೂ ಹಾಕಿಲ್ಲ. 

ಕಾಂಗ್ರೆಸ್‌ ಗ್ಯಾರಂಟಿಗಳ ವಿರುದ್ಧ ಮತ್ತೆ ಪ್ರಧಾನಿ ಮೋದಿ ವಾಗ್ದಾಳಿ

ಹೆದ್ದಾರಿ ಗಸ್ತುವಾಹನ, ತುರ್ತು ವಾಹನಗಳ ವ್ಯವಸ್ಥೆಯನ್ನು ಸರಿಯಾಗಿ ಮಾಡಿಲ್ಲ ಎಂಬುದು ಸೇರಿದಂತೆ ಹಲವು ನ್ಯೂನತೆಗಳನ್ನು ವಿವರಿಸಿದರು. ಅಲ್ಲದೆ, ಮುಂದಿನ ಭೇಟಿಯ ವೇಳೆಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳುವಂತೆ ಪ್ರಾಧಿ​ಕಾ​ರದ ಅಧಿ​ಕಾ​ರಿ​ಗ​ಳಿಗೆ ಕಟ್ಟು​ನಿ​ಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿ​ದ​ರು. ಎಕ್ಸ್‌ಪ್ರೆಸ್‌ ವೇನಲ್ಲಿ ಅಪ​ಘಾ​ತ​ಗಳಿಂದ ಸಾವು-ನೋವಿನ ಪ್ರಮಾಣ ಹೆಚ್ಚಾದ ಹಿನ್ನೆ​ಲೆ​ಯಲ್ಲಿ ಜೂನ್‌ ತಿಂಗ​ಳಲ್ಲಿ ಹೆದ್ದಾ​ರಿಯನ್ನು ಪರಿ​ಶೀ​ಲನೆ ಮಾಡಿದ್ದ ಅಲೋಕ್‌ಕುಮಾರ್‌, ಸುರ ಕ್ಷತೆಗೆ ವಿವಿಧ ಕ್ರಮಗಳನ್ನು ಕೈಗೊಳ್ಳುವಂತೆ ​ರಾ​ಷ್ಟ್ರೀಯ ಹೆದ್ದಾರಿ ಪ್ರಾಧಿ​ಕಾ​ರದ ಅಧಿ​ಕಾ​ರಿ​ಗ​ಳಿಗೆ ಸೂಚನೆ ನೀಡಿದ್ದರು. ಆ ಸುರ​ಕ್ಷತಾ ಕ್ರಮ​ಗಳು ಎಷ್ಟರಮಟ್ಟಿಗೆ ಅನುಷ್ಠಾ​ನ​ಗೊಂಡಿವೆ ಎಂಬು​ದನ್ನು ಮಂಗ​ಳ​ವಾರ ಖುದ್ದು ವೀಕ್ಷಿ​ಸಿದರು.

Latest Videos
Follow Us:
Download App:
  • android
  • ios