Asianet Suvarna News Asianet Suvarna News

ಕಾಂಗ್ರೆಸ್‌ ಕೈಬಿಟ್ಟ ಪಠ್ಯಕ್ಕೆ ವಿಜಯಪುರ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಪಾಠವನ್ನು ಸೇರಿಸಿ

ರಾಜ್ಯ ಸರ್ಕಾರದಿಂದ ಪಠ್ಯಪುಸ್ತಕ ಪರಿಷ್ಕರಣೆ ಮಾಡಲಾಗುತ್ತಿದ್ದು, ಬಿಜೆಪಿ ಸೇರ್ಪಡೆ ಮಾಡಿದ್ದ ಪಠ್ಯವನ್ನು ಕೈಬಿಟ್ಟಲ್ಲಿ ಆ ಜಾಗಕ್ಕೆ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಪಾಠ ಅಳವಡಿಸುವಂತೆ ಮನವಿ ಮಾಡಲಾಗಿದೆ.

Add Vijayapura Jnanayogi Siddeshwar Swamiji Text in Karnataka School Textbook sat
Author
First Published Jun 18, 2023, 6:06 PM IST

ವರದಿ- ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌
ವಿಜಯಪುರ (ಜೂ.18): ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೆ ಪಠ್ಯ ಸಂಘರ್ಷ ಶುರುವಾಗಿದೆ. ಬಿಜೆಪಿ ಆಡಳಿತದಲ್ಲಿದ್ದ ಸಮಯದಲ್ಲಿ ಅಳವಡಿಕೆಯಾದ ಪಠ್ಯಗಳನ್ನ ಈಗಾಗಲೇ ಸರ್ಕಾರ ಕೈಬಿಟ್ಟಿದೆ. ಕೆಲ ಪಠ್ಯಗಳನ್ನ ಸೇರ್ಪಡೆ ಸಹ ಮಾಡ್ತಿದೆ. ಕಾಂಗ್ರೆಸ್‌ ಸರ್ಕಾರದ ಈ ನಡೆಗೆ ಬಿಜೆಪಿ ನಾಯಕರು ಅಸಮಧಾನ ಹೊರಹಾಕ್ತಿದ್ದಾರೆ. ಆದ್ರೆ ಇದೆಲ್ಲದರ ನಡುವೆ ವಿಜಯಪುರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಜೀವನ ಚರಿತ್ರೆಯನ್ನ ಶಾಲಾ ಮಕ್ಕಳಿಗೆ ಪಠ್ಯವಾಗಿಸಬೇಕು ಎನ್ನುವ ಆಗ್ರಹ ಶುರುವಾಗಿದೆ.

ಜ್ಞಾನಯೋಗಿಯ ಜೀವನ  ಪಠ್ಯವಾಗಲಿ..! ವಿಜಯಪುರದ ಜ್ಞಾನಯೋಗಾಶ್ರಮ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಜೀವನ ಶಾಲಾ ಮಕ್ಕಳಿಗೆ ಪಠ್ಯವಾಗಬೇಕು ಎನ್ನುವ ಆಗ್ರಹ ಕೇಳಿ ಬರ್ತಿದೆ. ಸಿದ್ದೇಶ್ವರ ಶ್ರೀಗಳ ಲಕ್ಷಾಂತರ ಭಕ್ತರು ಸಿದ್ದೇಶ್ವರ ಶ್ರೀಗಳ ಜೀವನ ಚರಿತ್ರೆ ಪಠ್ಯವಾಗಲಿ ಎಂದು ಆಗ್ರಹಿಸುತ್ತಿದ್ದಾರೆ. ಸಿದ್ದೇಶ್ವರ ಶ್ರೀಗಳು ನಿಧನಕ್ಕು ಮುನ್ನ ಮಾಡಿಟ್ಟ ವಿಲ್‌, ಅವರ ಇಡೀ ಅಧ್ಯಯನದ ಬದುಕು, ಅವರ ಹಿತಪ್ರವಚನಗಳನ್ನ ಶಾಲಾ ಮಕ್ಕಳು ಓದಬೇಕು. ಹೀಗಾಗಿ ಸಿದ್ದೇಶ್ವರ ಶ್ರೀಗಳ ಬದುಕನ್ನ ಪಠ್ಯ ರೂಪದಲ್ಲಿ ಶಾಲಾಮಕ್ಕಳಿಗೆ ಉಣಬಡಿಸಬೇಕು ಎನ್ನುವ ಮಾತುಗಳು ಕೇಳಿ ಬರ್ತಿವೆ.

Karnataka Textbook Revision: ಪಠ್ಯ ಪುಸ್ತಕ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಆದೇಶ, ಕನ್ನಡದ 9 ಪಾಠಕ್ಕೆ ಕೊಕ್!

ಶ್ರೀಗಳ ಬದುಕನ್ನ ಶಾಲಾ ಮಕ್ಕಳಿಗೆ ಪರಿಚಯಿಸಿ: ಸಿದ್ದೇಶ್ವರ ಶ್ರೀಗಳ ಬಗ್ಗೆ ಈಗಾಗಲೇ ಎಲ್ಲರಿಗೂ ಗೊತ್ತೆ ಇದೆ. ಸರಳತೆಯ ಸಾಕಾರ ಮೂರ್ತಿ, ಸರಳತೆ ಹೇಗಿರುತ್ತೆ ಎನ್ನುವುದನ್ನ ನೋಡಬೇಕು ಎನ್ನುವವರು ಸಿದ್ದೇಶ್ವರ ಬದುಕನ್ನ ಒಂದುಸಾರಿ ಅವಲೋಕಿಸಿದರೆ ಸಾಕು. ಸಿದ್ದೇಶ್ವರ ಶ್ರೀಗಳು ಎಂದೂ ಸಹ ಆಡಂಬರ ಬಯಸಲಿಲ್ಲ. ಹೈಪೈ ವಾಹನಗಳನ್ನ ಇಟ್ಟುಕೊಳ್ಳಲಿಲ್ಲ. ಭಕ್ತರು ತರುವ ಸಾಧಾರಣ ಕಾರುಗಳಲ್ಲೆ ಪ್ರಯಾಣ ಬೆಳೆಸಿ ಪ್ರವಚನ ನೀಡಿ ಬರುತ್ತಿದ್ದರು. ತಮ್ಮ ಉಡುಗೆಯನ್ನು ಅಷ್ಟೆ ಸಿಂಪಲ್‌ ಆಗಿ ಇಟ್ಟುಕೊಂಡಿದ್ದರು. ಬಿಳಿಯ ಪಂಚೆ, ಅದರ ಮೇಲೆ ಬಿಳಿಯ ಸಾಧಾರಣ ನೀಲುವಂಗಿ ಧರಿಸುತ್ತಿದ್ದರು. ಯಾವತ್ತು ಹೊಸ ಬಟ್ಟೆ, ಸಾಮಾನ್ಯರು ಧರಿಸುವ ಬಟ್ಟೆಗಳನ್ನ ಧರಿಸಲೇ ಇಲ್ಲ. 

ಕಾವಿ ತೊಡದೇ ಸ್ವಾಮೀಜಿ ಎನಿಸಿಕೊಂಡ ಜ್ಞಾನಿ:  ಕಾವಿಯನ್ನು ಮುಟ್ಟಲು ಇಲ್ಲ. ಕಾಲಲ್ಲಿ ಹವಾಯಿ  ಚಪ್ಪಲಿ ಧರಿಸುತ್ತಿದ್ದರು. ಜ್ಞಾನಯೋಗಾಶ್ರಮದಲ್ಲಿ ಕಟ್ಟಡಗಳಿದ್ದರು, ಯಾವತ್ತು ದೊಡ್ಡ ಕಟ್ಟಡದಗಳಲ್ಲಿ ವಾಸ್ತವ್ಯ ಉಳಿಯಲಿಲ್ಲ. ಅವರಿಗಾಗಿಯೆ ದೊಡ್ಡ ಬಿಲ್ಡಿಂಗ್‌ ನಿರ್ಮಾಣವಾದರು ಒಂದು ದಿನವು ಶ್ರೀಗಳು ಅಲ್ಲಿ ಉಳಿದುಕೊಳ್ಳಲಿಲ್ಲ. ಚಿಕ್ಕ ಕೋಣೆಯೊಂದರಲ್ಲೆ ವಾಸವಾಗಿದ್ದರು ಅನ್ನೋದು ಅವರ ಬದುಕಿನ ಸರಳತೆಯನ್ನ ತೋರಿಸುತ್ತೆ.. ಇಂಥಹ ಸರಳತೆಯ ಸಾಕಾರು ಮೂರ್ತಿಯ ಪಠ್ಯವನ್ನ ಮಕ್ಕಳಿಗೆ ಬೋಧಿಸಬೇಕು ಎನ್ನುವುದು ಲಕ್ಷಾಂತರ ಭಕ್ತರ ಆಶಯವಾಗಿದೆ.

ನಮ್ಮ ವಿರುದ್ಧ ಮಾತಾಡೋದು, ಕಿಚ್ಚ ಸುದೀಪ್‌ ಭವಿಷ್ಯಕ್ಕೆ ಕುತ್ತು: ಸಚಿವ ಕೆ.ಎನ್. ರಾಜಣ್ಣ

ಪಠ್ಯ ಅಳವಡಿಕೆಗೆ ಬಸವಲಿಂಗ ಶ್ರೀಗಳ ಆಗ್ರಹ: ಇನ್ನು ಸಿದ್ದೇಶ್ವರ ಶ್ರೀಗಳ ಆದರ್ಶಮಯ ಬದುಕನ್ನ ಶಾಲಾ ಮಕ್ಕಳಿಗೆ ಪಾಠವಾಗಿ ಬೋಧಿಸಬೇಕು ಅಂತಾ ಜ್ಞಾನಯೋಗಾಶ್ರಮದ ಬಸವಲಿಂಗ ಶ್ರೀಗಳು ಆಗ್ರಹಿಸಿದ್ದಾರೆ. ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು. ಶಾಲಾ ಮಕ್ಕಳು ನಿಜಕ್ಕು ಸಿದ್ದೇಶ್ವರ ಶ್ರೀಗಳ ಬದುಕನ್ನ ಅರಿತುಕೊಳ್ಳಬೇಕು. ಸಿದ್ದೇಶ್ವರ ಶ್ರೀಗಳನ್ನ ಬದುಕನ್ನ ಮಕ್ಕಳು ಓದಿದರೆ ಅವರ ಶೈಕ್ಷಣಿಕ ಬದುಕಿನಲ್ಲು ಅಸಾಮಾನ್ಯ ಬದಲಾವಣೆ ಬರಲಿದೆ ಎಂದಿದ್ದಾರೆ. ಸರ್ಕಾರ ಈ ಬಗ್ಗೆ ಬೇಗ ನಿರ್ಧಾರ ಕೈಗೊಳ್ಳಬೇಕು ಅಂತಾ ಆಗ್ರಹಿಸಿದ್ದಾರೆ.

Follow Us:
Download App:
  • android
  • ios