ಕೆಜಿಎಫ್‌ನಂಥ ದೊಡ್ಡ ಬಜೆಟ್ ಚಲನಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡುವುದಾಗಿ ಆಸೆ ತೋರಿಸಿ ನಟಿ ರನ್ಯಾ ರಾವ್ ಅವರನ್ನು ಚಿನ್ನ ಕಳ್ಳ ಸಾಗಣೆ ಕೃತ್ಯಕ್ಕೆ ಬಳಸಿಕೊಂಡಿರುವ ಬಗ್ಗೆ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಸಂಶಯ ವ್ಯಕ್ತಪಡಿಸಿದೆ ಎನ್ನಲಾಗಿದೆ.
ಬೆಂಗಳೂರು (ಮಾ.12): ಕೆಜಿಎಫ್‌ನಂಥ ದೊಡ್ಡ ಬಜೆಟ್ ಚಲನಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡುವುದಾಗಿ ಆಸೆ ತೋರಿಸಿ ನಟಿ ರನ್ಯಾ ರಾವ್ ಅವರನ್ನು ಚಿನ್ನ ಕಳ್ಳ ಸಾಗಣೆ ಕೃತ್ಯಕ್ಕೆ ಬಳಸಿಕೊಂಡಿರುವ ಬಗ್ಗೆ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಸಂಶಯ ವ್ಯಕ್ತಪಡಿಸಿದೆ ಎನ್ನಲಾಗಿದೆ. 'ಮಾಣಿಕ್ಯ', 'ಪಟಾಕಿ' ಚಿತ್ರಗಳಲ್ಲಿ ಮಿಂಚಿ ತೆರೆ ಮರೆಗೆ ಸರಿದಿದ್ದ ರನ್ಯಾ ಮತ್ತೆ ಬೆಳ್ಳಿ ಪರದೆಗೆ ನಿರ್ಮಾಪಕಿ ಕಮ್ ನಟಿಯಾಗಿ ಪ್ರವೇಶಿಸುವ ಕನಸು ಕಂಡಿದ್ದರು. ಈ ಕನಸಿಗೆ ನೀರೆರೆಯುವ ನೆಪದಲ್ಲಿ ಈ ಜಾಲಕ್ಕೆ ಬೀಳಿಸಿದ್ದರು. ಇದರಲ್ಲಿ ಹೋಟೆಲ್ ಉದ್ಯಮಿ ಪುತ್ರ ತರುಣ್ ರಾಜು ಪ್ರಮುಖ ಪಾತ್ರವಹಿಸಿದ್ದ ಎನ್ನಲಾಗಿದೆ.ಶಿರಾ ಬಳಿ ಕೆಐಎಡಿಬಿ ಜಮೀನು ಪಡೆದು ಕಂಪನಿ ಸ್ಥಾಪನೆಗೆ ಮುಂದಾಗಿದ್ದ ರನ್ಯಾ, ಸಿನಿಮಾ ಹುಚ್ಚಿನಿಂದಾಗಿ ಯೋಜನೆ ಕೈಬಿಟ್ಟಿದ್ದರು. ಚಿತ್ರರಂ ಗದಲ್ಲಿ ಮುನ್ನಲೆಗೆ ಬರಬೇಕು ಎಂದು ಯತ್ನಿಸಿದ್ದರು ಎನ್ನಲಾಗಿದೆ.
ತಂದೆಯಿಂದಲೇ ಪರೋಕ್ಷ ಬಂಡವಾಳ?: ಪಿಯುಸಿಗೆ ಓದು ನಿಲ್ಲಿಸಿದ್ದ ರನ್ಯಾ, ಪೋಷಕರ ಬಳಿ ನಟಿಯಾಗುವ ಇಚ್ಛೆ ವ್ಯಕ್ತಪಡಿಸಿದ್ದಳು. ಆಗ ಮಲ ತಂದೆ ಡಿಜಿಪಿ ರಾಮ ಚಂದ್ರರಾವ್ ಪ್ರಭಾವ ಬಳಸಿ ಆಕೆಗೆ ಸಿನಿಮಾದಲ್ಲಿ ಅವಕಾಶ ಕೊಡಿಸಿದ್ದರು. ಕನ್ನಡದಲಿ ನಟಿಸಿದ್ದ 2 ಚಿತ್ರಗಳಿಗೆ ಪರೋಕ್ಷವಾಗಿ ತಂದೆ ಬಂಡವಾಳ ಹೂಡಿದ ಅನುಮಾ ನವಿದೆ. ಖ್ಯಾತಿ ಸಿಗದ್ದಕ್ಕೆ ಬೇಸರಗೊಂಡಿದ್ದ ರನ್ಯಾಗೆ ಬೆಂ ಗಳೂರಿನ 'ವಿಐಪಿ ಮಕ್ಕಳ ಸ್ನೇಹ ಕೂಟ'ದ ಸಂಪರ್ಕ ಬೆಳೆದಿತ್ತು. ಈ ರೀಬಂಡವಾಳ ಎತ್ತುವ ಯೋಜನೆ ರೂಪಿಸಿದ್ದರು ಎನ್ನಲಾಗಿದೆ.
ದುಬೈನಲ್ಲಿ ಹಣ ಸಂಗ್ರಹ?: ಸಿನಿಮಾಗೆ ದುಬೈನಲ್ಲಿರುವ ಚಿನ್ನ ಕಳ್ಳ ಸಾಗಣೆ ಜಾಲದ ಸದಸ್ಯರು ಹಣ ಹೂಡುವ ಆಮಿಷವೊಡ್ಡಿದ್ದರು. ಹೀಗಾಗಿ ಚಿನ್ನ ಸಾಗಣೆ ಕೃತ್ಯಕ್ಕೆ ತಮ್ಮ ಕುಟುಂಬಕ್ಕೆ ಆಪ್ತರಾದ ರಾಜ್ಯದ ಪ್ರಭಾವಿ ಸಚಿವರೊಬ್ಬರ ಹೆಸರನ್ನು ರನ್ಯಾ ಬಳಸಿರುವ ಬಗ್ಗೆ ಡಿಆರ್‌ಐ ಅನುಮಾನಿಸಿದೆ ಎಂದು ಮೂಲಗಳು ಹೇಳಿವೆ.
ಗೋಲ್ಡ್ ಸ್ಮಗ್ಲಿಂಗ್ ಕೇಸ್: ಸಹಕಾರಿ ಬ್ಯಾಂಕಿಂದ ನಟಿ ರನ್ಯಾ ರಾವ್‌ಗೆ ಸಿಕ್ಕಿತ್ತು 10 ಲಕ್ಷ!
80 ಲಕ್ಷ ಕೊಟ್ಟು ದುಬೈ ವೀಸಾ ಪಡೆದಿದ್ದ ರನ್ಯಾ: ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ ಸುಮಾರು 80 ಲಕ್ಷ ರು. ನೀಡಿ ದುಬೈನ ರೆಸಿಡೆಂಟ್ ವೀಸಾ ಪಡೆದುಕೊಂಡಿರುವ ವಿಚಾರ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ)ದ ಅಧಿಕಾರಿಗಳ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಚಿನ್ನ ಕಳ್ಳ ಸಾಗಣೆಗೂ 80 ಲಕ್ಷ ರು.ಗೂ ಸಂಬಂಧವಿರುವ ಶಂಕೆ ವ್ಯಕ್ತವಾಗಿದೆ. ಹಾಗಾಗಿ ಡಿಆರ್‌ಐ ಅಧಿಕಾರಿಗಳು ಈ ಹಣದ ಮೂಲ ಪತ್ತೆಗೆ ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.
