ನನಗೆ ಮುಂದಿನ ಜನ್ಮ ಅಂತ ಇದ್ದರೆ ದೈವಾರಾಧಕರ ಸಮುದಾಯದಲ್ಲಿ ಹುಟ್ಟಿ ದೈವಗಳ ಚಾಕರಿ ಮಾಡುವ ಅವಕಾಶ ಕೊಡು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಚಿತ್ರನಟ, ನಿರ್ದೇಶಕ ರಿಷಬ್‌ ಶೆಟ್ಟಿ ಹೇಳಿದ್ದಾರೆ.  

ಉಡುಪಿ (ಸೆ.04): ನನಗೆ ಮುಂದಿನ ಜನ್ಮ ಅಂತ ಇದ್ದರೆ ದೈವಾರಾಧಕರ ಸಮುದಾಯದಲ್ಲಿ ಹುಟ್ಟಿ ದೈವಗಳ ಚಾಕರಿ ಮಾಡುವ ಅವಕಾಶ ಕೊಡು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಚಿತ್ರನಟ, ನಿರ್ದೇಶಕ ರಿಷಬ್‌ ಶೆಟ್ಟಿ ಹೇಳಿದ್ದಾರೆ. ಭಾನುವಾರ ರಾಜಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಪಾಣರ ಯಾನೆ ನಲಿಕೆ ಸಮಾಜ ಸೇವಾ ಸಂಘದ ವತಿಯಿಂದ ನಡೆದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ದೈವಾರಾಧನೆ ಕುರಿತ ಕಾಂತಾರ ಸಿನೆಮಾದ ಯಶಸ್ಸಿಗೆ ನಾನು ಕಾರಣ ಅಲ್ಲ, ಅದು ಪಂಜುರ್ಲಿ ದೈವದ ಆಶೀರ್ವಾದ ಎಂದ ರಿಷಬ್‌ ಶೆಟ್ಟಿ, ಈ ಜನ್ಮದಲ್ಲಿ ಕಾಂತಾರ ಸಿನೆಮಾದ ಮೂಲಕವಾದರೂ ದೈವದ ಸೇವೆ ಮಾಡುವ ಅವಕಾಶ ಸಿಕ್ಕಿತು ಎಂದು ಸಂತಸ ವ್ಯಕ್ತಪಡಿಸಿದರು. ಅಮೆರಿಕದ ಮ್ಯೂಸಿಯಂನಲ್ಲೂ ನಮ್ಮ ಪಂಜುರ್ಲಿಯ ಮೊಗ ಇಟ್ಟಿದ್ದಾರೆ. ಇದು ನಮ್ಮ ದೈವ-ದೇವರುಗಳ ಶಕ್ತಿ ತೋರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಏಕಾಂಗಿ ಸ್ಪರ್ಧೆ: ದೇವೇಗೌಡ

ಇದೇ ವೇಳೆ ತಾನು ಸಮಾಮುಖಿ ಟ್ರಸ್ಟೊಂದನ್ನು ರಚಿಸುತ್ತಿದ್ದೇನೆ ಎಂದ ಅವರು, ಅದರ ಮೂಲಕ ದೈವಾರಾಧಕರ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುತ್ತೇನೆ. ದೈವಾರಾಧಕರ ಸಮುದಾಯ ಭವನ ನಿರ್ಮಾಣಕ್ಕೂ ಸಹಕಾರ ನೀಡುತ್ತೇನೆ. ಸರ್ಕಾರಕ್ಕೆ ಮನವರಿಕೆ ಮಾಡಿ, ದೈವಾರಾ​ಧ​ಕರ ಬೇಡಿಕೆಗಳನ್ನು ಈಡೇರಿಸಿಕೊಳ್ಳೋಣ ಎಂದರು. ಇದೇ ಸಂದರ್ಭದಲ್ಲಿ ರಿಷಬ್‌ ಶೆಟ್ಟಿ ಮತ್ತು ಸಮಾಜ ಸೇವಕ ಕೃಷ್ಣಮೂರ್ತಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಜೋಯಿಡಾದಲ್ಲಿ ಕೊಂಕಣಿ ಕಲಿತ ರಿಷಬ್‌: ಜೋಯಿಡಾದ ಕುಣಬಿ ಜನಾಂಗದವರೊಂದಿಗೆ ದಿನವಿಡೀ ಕಾಲ ಕಳೆದ ನಟ ರಿಷಬ್‌ ಶೆಟ್ಟಿಮರಾಠಿ ಮಿಶ್ರಿತ ಕೊಂಕಣಿ ಭಾಷೆಯನ್ನೂ ಕಲಿಯುವ ಪ್ರಯತ್ನ ಮಾಡಿದರು. ಕೆಲವು ಶಬ್ದಗಳನ್ನು ಕಲಿತು ಅವರೊಂದಿಗೆ ಸಂವಹನಕ್ಕೆ ಬಳಸುತ್ತ ಸ್ಥಳೀಯರ ಪ್ರೀತಿಗೆ ಪಾತ್ರರಾದರು. 

ರಿಷಬ್‌ ಜೊತೆ ಫೋಟೋಕ್ಕಾಗಿ ನಿಂತಾಗ ಬಾಲಕಿಯೊಬ್ಬಳು ಬೇರೆಡೆ ನೋಡುತ್ತಿದ್ದಳು. ಆಗ ಆಕೆಯ ತಾಯಿ ಹಾಂಗ್‌ ಪೊಳೆ (ಇಲ್ಲಿ ನೋಡು) ಎಂದಾಗ ರಿಷಬ್‌ ಹಾಗೆಂದರೆ ಏನು ಎಂದು ಕೇಳಿ ತಿಳಿದುಕೊಂಡು, ‘ಅಲ್ಲಿ ನೋಡು ಹೇಳಲು ಏನು ಹೇಳುತ್ತಾರೆ’ ಎಂದು ಕೇಳಿದರು. ‘ಆಗ ತೈ ಪೊಳೆ ಎನ್ನುತ್ತಾರೆ’ ಎಂದರು. ನಂತರ ರಿಷಬ್‌ ತಮ್ಮ ಜೊತೆ ಫೋಟೋ ಶೂಟ್‌ಗೆ ನಿಂತವರಿಗೆಲ್ಲ ತೈ ಪೊಳೆ, ಹಾಂಗ್‌ ಪೊಳೆ ಎನ್ನುತ್ತ ಅವರದ್ದೇ ಭಾಷೆಯಲ್ಲಿ ಹೇಳತೊಡಗಿದರು. ಮತ್ತೂ ಕೆಲವು ಶಬ್ದಗಳನ್ನು ಕೇಳಿ ತಿಳಿದುಕೊಂಡರು.

ನೀರು ಅಮೂಲ್ಯವಾದುದು, ರೈತರ ನಿಜವಾದ ಜೀವನಾಡಿ: ವೀರೇಂದ್ರ ಹೆಗ್ಗಡೆ

ಮಗಲ್‌ ನಾವ್‌ ರಿಷಬ್‌!: ಪಾತಾಗುಡಿಯಲ್ಲಿ ಹಿರಿಯರೊಬ್ಬರು ಬಂದು ‘ತುಗೆಲ್‌ ನಾವ್‌ ಕಿತೆ’ (ನಿನ್ನ ಹೆಸರೇನು?) ಎಂದು ಕೇಳಿದಾಗ ಅರ್ಥವಾಗದೆ ರಿಷಬ್‌ ಏನು ಹೇಳುತ್ತಿದ್ದಾರೆ, ಎಂದು ಕೇಳಿ ತಿಳಿದು ಕೊಂಡರು. ಅದಕ್ಕೆ ಉತ್ತರಿಸುವ ಕ್ರಮವನ್ನೂ ಕೇಳಿಕೊಂಡು ‘ಮಗಲ್‌ ನಾವ್‌ ರಿಷಬ್‌ ಶೆಟ್ಟಿ’ ಎಂದರು.