Asianet Suvarna News Asianet Suvarna News

ನಟ ದರ್ಶನ್ ಇಂದು ಬಳ್ಳಾರಿ ಜೈಲಿಗೆ ಶಿಫ್ಟ್ ಆಗೋದು ಡೌಟ್?

ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿರೋ ಹಿನ್ನೆಲೆಯಲ್ಲಿ ತನಿಖೆ ಮುಗಿಯೋತನಕ ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್ ಆಗುವ ಸಾಧ್ಯತೆ ಕಡಿಮೆ ಇದೆ. 

actor Darshan will be shifted to Ballari Jail on august 28th Doubt grg
Author
First Published Aug 28, 2024, 5:51 PM IST | Last Updated Aug 28, 2024, 5:51 PM IST

ಬೆಂಗಳೂರು(ಆ.28): ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ನಟ ದರ್ಶನ್ ಇಂದು ಬಳ್ಳಾರಿ ಜೈಲಿಗೆ ಶಿಫ್ಟ್ ಆಗೋದು ಡೌಟ್ ಆಗಿದೆ. ಹೌದು,  ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ಕೇಸ್ ತನಿಖೆ ಹಿನ್ನೆಲೆಯಲ್ಲಿ ದರ್ಶನ್ ಇಂದು ಬಳ್ಳಾರಿಗೆ ಶಿಫ್ಟ್ ಆಗೋ ಸಾಧ್ಯತೆ ಕಡಿಮೆ ಇದೆ ಎಂದು ತಿಳಿದು ಬಂದಿದೆ. 

ನಟ ದರ್ಶನ್ ಇಬ್ಬರು ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಬೇಕು. ಸ್ಥಳ ಮಹಜರು ವೇಳೆ ನಟ ದರ್ಶನ್ ಖುದ್ದು ಹಾಜರಿದ್ದು, ಹೇಳಿಕೆ ದಾಖಲು ಮಾಡಬೇಕು. ದರ್ಶನ್ ಕೈಯಲ್ಲಿದ್ದದ್ದು, ಸಿಗರೇಟ್ ಅಥವಾ ಗಾಂಜಾನಾ?. ಈ ಬಗ್ಗೆ ತನಿಖಾಧಿಕಾರಿಗಳು ತನಿಖೆ ಮಾಡಬೇಕಿದೆ ದರ್ಶನ್ ಕಪ್‌ನಲ್ಲಿ ಕುಡಿದದ್ದು ಕಾಫಿನಾ? ಟೀನಾ?. ಅಥವಾ ಮದ್ಯಪಾನನಾ? ಈ ಬಗ್ಗೆ ಕೂಡ ತನಿಖೆ ಆಗಬೇಕಿದೆ. ಈ ಎಲ್ಲಾ ತನಿಖೆಗೆ ನಟ ದರ್ಶನ್ ವೈದ್ಯಕೀಯ ಪರೀಕ್ಷೆ ಆಗಬೇಕಿದೆ. ರಕ್ತ, ಮೂತ್ರ ಸ್ಯಾಂಪಲ್ ಪಡೆದು ಪರೀಕ್ಷೆ ನಡೆಸಬೇಕಿದೆ. ಈ ಎಲ್ಲಾ ಪರೀಕ್ಷೆಗೆ ನಟ ದರ್ಶನ್ ಸಹಕರಿಸಬೇಕು. ಇಲ್ಲವಾದರೆ ತನಿಖೆ ಮತ್ತಷ್ಟು ವಿಳಂಬ ಆಗುವ ಸಾಧ್ಯತೆ ಇದೆ.  ತನಿಖೆ ಮುಗಿಯದ ಹೊರತು ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಡೌಟ್ ಎನ್ನಲಾಗಿದೆ.  ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿರೋ ಹಿನ್ನೆಲೆಯಲ್ಲಿ ತನಿಖೆ ಮುಗಿಯೋತನಕ ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್ ಆಗುವ ಸಾಧ್ಯತೆ ಕಡಿಮೆ ಇದೆ. 

ಜೈಲಲ್ಲಿ ದೌಲತ್ತು ಮಾಡಿ ದಿಕ್ಕಾಪಾಲಾದ ಡಿ ಗ್ಯಾಂಗ್​​..! ದರ್ಶನ್ ವಿರುದ್ಧ ದಾಖಲಾಯ್ತು ಮತ್ತೆರಡು FIR..!

ಧರ್ಮ ಜೈಲಿನಿಂದ ವಿಡಿಯೋ ಕಾಲ್ ಮಾಡಿದ್ದ ಮೊಬೈಲ್ ಕೂಡ ಪತ್ತೆ ಆಗಿಲ್ಲ. ಮೊಬೈಲ್ ಗಾಗಿ ಜೈಲಿನಲ್ಲಿ ತನಿಖಾಧಿಕಾರಿ ಶೋಧಕಾರ್ಯ ನಡೆಸುತ್ತಿದ್ದಾರೆ. ತನಿಖಾಧಿಕಾರಿ ಎಲೆಕ್ಟ್ರಾನಿಕ್ ಸಿಟಿ ಎಸಿಪಿ ಮಂಜುನಾಥ್ ಅವರು ಶೋಧಕಾರ್ಯ ನಡೆಸಿದ್ದಾರೆ. ಧರ್ಮ ಮಾಡಿದ ವಿಡಿಯೋ ಕಾಲ್ ನಲ್ಲಿ ಸತ್ಯನ ಜೊತೆ ದರ್ಶನ್ ಮಾತನಾಡಿದ್ದ. ಮೊಬೈಲ್ ಪತ್ತೆಯಾಗದೆ ತನಿಖೆ ತಾರ್ಕಿಕ ಅಂತ್ಯ ಕಾಣೋದಿಲ್ಲ. 

Latest Videos
Follow Us:
Download App:
  • android
  • ios