ನಟ ದರ್ಶನ್‌ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡುತ್ತಿರುವ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ದರ್ಶನ್ ಅವರನ್ನು 'ಅತ್ಯಾಚಾರ ಆರೋಪಿ' ಎಂದು ಸಂಭೋದಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.  

ಬೆಂಗಳೂರು (ಆ.26): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್‌ ಗೆ ಪರಪ್ಪನ ಅಗ್ರಹಾರದಲ್ಲಿ ವಿವಿಐಪಿ ಸೌಲಭ್ಯ ಕೊಡುತ್ತಿರುವುದು ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ರಾಜ್ಯ ಸರ್ಕಾರದ ಆಡಳಿತ ಮತ್ತು ಜೈಲಿನ ಅವ್ಯವಸ್ಥೆ ಬಗ್ಗೆ ಪ್ರಶ್ನೆ ಎದ್ದಿದೆ. 

ಈ ಸುದ್ದಿಯ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹೇಳಿಕೆ ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. X ನಲ್ಲಿ ಮಾಹಿತಿ ಹಂಚಿಕೊಂಡಿರುವ ಶರ್ಮಾ, ಕನ್ನಡ ನಟ ದರ್ಶನ್ ತೂಗದೀಪ್ ಅತ್ಯಾಚಾರ ಆರೋಪಿ ಎಂದು ಸಂಭೋದಿಸಿದ್ದಾರೆ.

ರೌಡಿಗಳ ದೋಸ್ತಿಯಾದ ದರ್ಶನ್‌ಗೆ, ಕಬಾಬ್, ಬಿರಿಯಾನಿ ಸಪ್ಲೈ? ಬಯಲಾಯ್ತು ಜೈಲಾಧಿಕಾರಿಗಳ ಕಳ್ಳಾಟ!

ಜೈಲಿನಲ್ಲಿ ವಿಶೇಷ ಆತಿಥ್ಯ ಬಗ್ಗೆ ಟ್ವೀಟ್ ಮಾಡಿ, ಕಾಂಗ್ರೆಸ್ ಪಕ್ಷ ಅಧಿಕಾರ ದಲ್ಲಿರುವ ಅತ್ಯಾಚಾರ, ಕೊಲೆ ಆರೋಪದ ಮೇಲೆ ಜೈಲಿನಲ್ಲಿರುವ ನಟ ದರ್ಶನ್ ಗೆ ವಿಶೇಷ ಸವಲತ್ತು ನೀಡಲಾಗುತ್ತಿದೆ. ಈ ಬಗ್ಗೆ ಏನು ಹೇಳುತ್ತೀರಾ ಪ್ರಿಯಾಂಕಾ ಗಾಂಧಿ , ಸುಪ್ರಿಯಾ ಶ್ರೀನೇಥ್ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಕಮೆಂಟ್‌ ಮಾಡಿರುವ ಹಲವು ಮಂದಿ ದರ್ಶನ್ ಅತ್ಯಾಚಾರಿಯಲ್ಲ. ಮಹಿಳಾ ಆಯೋಗದ ಅಧ್ಯಕ್ಷೆಯಾಗಿರುವ ನೀವು ಈ ಬಗ್ಗೆ ತಿಳಿದುಕೊಳ್ಳದೇ ಏನೇನೋ ಟ್ವೀಟ್‌ ಮಾಡಬೇಡಿ. ಅವನು ಅತ್ಯಚಾರಿಯಲ್ಲ ರೇಣುಕಾಸ್ವಾಮಿ ಕೊಲೆ ಆರೋಪಿ, ನಿಮ್ಮ ಹೇಳಿಕೆಯನ್ನು ಬದಲಾವಣೆ ಮಾಡಿ ಎಂದಿದ್ದಾರೆ.

ಇನ್ನು ದರ್ಶನ್ ಅಭಿಮಾನಿಗಳಂತು ರೊಚ್ಚಿಗೆದ್ದಿದ್ದು, ನೀವು ಆ ಹುದ್ದೆಗೆ ಅನ್‌ಫಿಟ್‌ ಎಂದು ಆಕ್ರೋಶ ವ್ಯಕ್ತಪಡಿಸಿರುವುದು ಮಾತ್ರವಲ್ಲ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಈವರಗೆ ಯಾರದ್ದೆಲ್ಲ ಹೆಸರು ಕೇಳಿ ಬಂದಿದೆ. ಅಂತವರ ಹೆಸರನ್ನೆಲ್ಲ ಉಲ್ಲೇಖಿಸಿ ದರ್ಶನ್ ಅತ್ಯಾಚಾರ ಪ್ರಕರಣ ಆರೋಪಿಯಲ್ಲಿ ಎಂದಿದ್ದಾರೆ.

ಜೈಲಿನಲ್ಲಿ ದರ್ಶನ್ ಐಷಾರಾಮಿ ಜೀವನ: ಪತ್ನಿ ವಿಜಯಲಕ್ಷ್ಮಿಗೆ ಶಾಕ್, ಇಂದು ಭೇಟಿ ಇಲ್ಲ

ಆದರೆ ಈವರೆಗೆ ಟ್ವೀಟ್‌ ಬದಲಾವಣೆ ಮಾಡಿಲ್ಲ. ಮಾತ್ರವಲ್ಲ ಡಿಲೀಟ್ ಮಾಡಿಲ್ಲ. ಇಲ್ಲವೇ ಈ ಬಗ್ಗೆ ಸ್ಪಷ್ಟೀಕರಣ ಕೊಟ್ಟಿಲ್ಲ. ಹೀಗಾಗಿ ಕೊಲೆ ಆರೋಪಿ ದರ್ಶನ್‌ ಅಭಿಮಾನಿಗಳು ಕ್ಷಮೆಗಾಗಿ ಒತ್ತಾಯಿಸಿದ್ದಾರೆ.

ಬೆಳಗಾವಿ ಹಿಂಡಲಗಾ ಜೈಲಿಗೆ ಶಿಫ್ಟ್: ಇನ್ನು ದರ್ಶನ್ ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಹಿನ್ನೆಲೆ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಕಿಲ್ಲಿಂಗ್ ಸ್ಟಾರ್ ದರ್ಶನ್ ಮತ್ತು ಆತನ ಜೊತೆಗೆ ಕಾಣಿಸಿಕೊಂಡಿದ್ದ ರೌಡಿ ಶೀಟರ್‌ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ಸೇರಿ ಹಲವು ಮಂದಿಯನ್ನು ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲು ತಯಾರಿ ನಡೆಯುತ್ತಿದೆ. ದರ್ಶನ್‌ ಬೆಳಗಾವಿ ಹಿಂಡಲಗಾ ಜೈಲಿಗೆ ಶಿಫ್ಟ್ ಆಗಬಹುದು ಎನ್ನಲಾಗುತ್ತಿದೆ.

Scroll to load tweet…