Asianet Suvarna News Asianet Suvarna News

ರೌಡಿಗಳ ದೋಸ್ತಿಯಾದ ದರ್ಶನ್‌ಗೆ, ಕಬಾಬ್, ಬಿರಿಯಾನಿ ಸಪ್ಲೈ? ಬಯಲಾಯ್ತು ಜೈಲಾಧಿಕಾರಿಗಳ ಕಳ್ಳಾಟ!

ನಟ ದರ್ಶನ್‌ಗೆ  ರಾಜಾತಿಥ್ಯ ಹಿನ್ನೆಲೆ, ಸಿಸಿಟಿವಿ ದೃಶ್ಯಾವಳಿ ಹಿನ್ನೆಲೆ ಐಷಾರಾಮಿ ವಸ್ತುಗಳನ್ನು ಪೂರೈಸಲಾಗುತ್ತಿದೆ ಎಂಬುದನ್ನು ಬಹಿರಂಗಪಡಿಸಿವೆ. ಜೈಲು ಅಧಿಕಾರಿಗಳ ಪಾತ್ರದ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.

actor Darshan get vip treatment in jail with help of Wilson Garden Naga and prison superintendent gow
Author
First Published Aug 26, 2024, 3:57 PM IST | Last Updated Aug 26, 2024, 4:03 PM IST

ಬೆಂಗಳೂರು (ಆ.26): ಕೊಲೆ ಆರೋಪಿಯಾಗಿ ಪರಪ್ಪನ ಅಗ್ರಹಾರದಲ್ಲಿ  ವಿಚಾರಣಾಧೀನ ಕೈದಿಯಾಗಿರುವ ದರ್ಶನ್‌ ಗೆ ವಿವಿಐಪಿ ಟ್ರಿಟ್‌ಮೆಂಟ್‌ ಬೆನ್ನಲ್ಲೇ ಇಡೀ ರಾಜ್ಯ ಸರ್ಕಾರವನ್ನು ಜನತೆ ಪ್ರಶ್ನೆ ಮಾಡುವಂತಾಗಿದೆ. ಇದರ ಬೆನ್ನಲ್ಲೇ ದರ್ಶನ್ ಜೈಲಿನಲ್ಲಿ ಸಿಗರೇಟ್‌ ಬಿರಿಯಾನಿ ಊಟ ಸಿಗುತ್ತಿರುವುದು ಹೇಗೆ? ಜೈಲಾಧಿಕಾರಿಗಳ ಪಾತ್ರವೇನು ಎಂದೆಲ್ಲ ಪ್ರಶ್ನೆ ಎದ್ದಿದೆ. ಕೆದಕುತ್ತಾ ಹೊಂದಂತೆ ಒಂದೊಂದೇ ವಿಚಾರಗಳು ಹೊರಬರುತ್ತಿದೆ.

ಜೈಲಾಧಿಕಾರಿಗಳು ಎಷ್ಟು ನಿರ್ಲಕ್ಷ್ಯ ತೋರುತ್ತಿದ್ದಾರೆ ಎನ್ನುವುದಕ್ಕಿಂತ ಖೈದಿಗಳಿಗೆ ಎಷ್ಟು ಬೆಂಬಲ ಸೂಚಿಸುತ್ತಿದ್ದಾರೆ ಎಂಬುದೇ ಶಾಕಿಂಗ್ ಸುದ್ದಿ, ಇದಕ್ಕೆ ನಿದರ್ಶನವಿದೆ. ದರ್ಶನ್ ನ ಐಷಾರಾಮಿ ಜೀವನಕ್ಕೆ  ಜೈಲು ಅಧಿಕಾರಿಗಳೇ ಸಾಥ್ ನೀಡುತ್ತಿದ್ದಾರಾ? ವಿಲ್ಸನ್ ಗಾರ್ಡನ್ ನಾಗನ ಅಣತಿ ಮೇರೆಗೆ ಜೈಲಾಧಿಕಾರಿಗಳೇ ದರ್ಶನ್ ಗೆ ಸಾಥ್ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಪೆಷಲ್ ಸೆಲ್ ಬ್ಯಾರಕ್ ನಂ10 ನಲ್ಲಿ ದರ್ಶನ್‌ ನನ್ನು  ಇಡಲಾಗಿದೆ. ದರ್ಶನ್ ಗೆ ವಿಶೇಷ ಸೌಲಭ್ಯ ನೀಡುತ್ತಿದ್ದು ಜೈಲು ಅಧಿಕಾರಿಗಳೇ ಎಂಬುದು ಈಗ ಬಲವಾದ ಅನುಮಾನ.

ಜೈಲಿನಲ್ಲಿ ದರ್ಶನ್ ಐಷಾರಾಮಿ ಜೀವನ: ಪತ್ನಿ ವಿಜಯಲಕ್ಷ್ಮಿಗೆ ಶಾಕ್, ಇಂದು ಭೇಟಿ ಇಲ್ಲ

ಎರಡು ದಿನದ ಹಿಂದೆ ಸಿಸಿಬಿ ಅಧಿಕಾರಿಗಳು ಜೈಲಿನಲ್ಲಿ ರೇಡ್ ಮಾಡಿದ್ದರು. ಇಬ್ಬರು ಎಸಿಪಿಗಳಿಂದ ದರ್ಶನ್ ಮತ್ತು ವಿಲ್ಸನ್ ಗಾರ್ಡನ್‌ ನಾಗನ ಬ್ಯಾರಕ್ ಪರಶೀಲನೆ ಮಾಡಿದ್ದರು. ಆದರೆ ಪರಿಶೀಲನೆ ನಡೆಸಿ ಮರಳಿ ಬರುವಾಗ  ಖಾಲಿ ಕೈನಲ್ಲಿ ಸಿಸಿಬಿ ಅಧಿಕಾರಿಗಳು ವಾಪಸ್ ಆಗಿದ್ದರು. ಆದರೆ ಅನುಮಾನ ಬಂದು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಅಸಲಿ ಮಾಹಿತಿ ಪತ್ತೆಯಾಗಿತ್ತು. 

ಬೆಳಗ್ಗೆ ಸುಮಾರು 11:20 ಕ್ಕೆ ಬ್ಯಾರಕ್ ಗೆ ಸಿಸಿಬಿ ಅಧಿಕಾರಿಗಳು ನುಗ್ಗಿದರು. ಬ್ಯಾರಕ್ ಒಳಗೆ ಕಂಪ್ಲೀಟ್ ಶುಚಿ ಆಗಿತ್ತು. ಎಲ್ಲಿ ಏನೂ ಹುಡುಕಿದರೂ ಖಾಲಿ ಖಾಲಿಯಾಗಿ ಕಾಣಿಸಿತು. ಅನುಮಾನಗೊಂಡ ಅಧಿಕಾರಿಗಳು ಸಿಸಿಟಿವಿ ಪರಿಶೀಲನೆ ನಡೆಸಿದರು. ಈ ವೇಳೆ ವಿಲ್ಸನ್ ಗಾರ್ಡನ್  ನಾಗ  ಮತ್ತು ದರ್ಶನ್ ಹಾಗೂ ಜೈಲು ಸಿಬ್ಬಂದಿಗಳ ಕಳ್ಳಾಟ ಬಯಲಾಗಿದೆ.

ಜೈಲು ಅವ್ಯವಸ್ಥೆಗೆ ಸಿಎಂ ಕೆಂಡಾಮಂಡಲ, ದರ್ಶನ್ ಗ್ಯಾಂಗ್‌ ಬೇರೆ ಜೈಲಿಗೆ ಶಿಫ್ಟ್‌ ಮಾಡಲು ಸಿದ್ದರಾಮಯ್ಯ ಖಡಕ್‌ ಸೂಚನೆ

ಅಧಿಕಾರಿಗಳು ಚೆಕ್ಕಿಂಗ್‌ ಗೆ ಬರುತ್ತಾರೆ ಎಂದು ತಿಳಿದ ಜೈಲು ಅಧಿಕಾರಿಗಳು, ಸಿಬ್ಬಂದಿಗಳಿಂದ 10:40 ಕ್ಕೆ ಬ್ಯಾರಕ್ ಕ್ಲೀನ್ ಮಾಡಿಸಿದ್ದಾರೆ. ದರ್ಶನ್ ಮತ್ತು ನಾಗನ ಬ್ಯಾರಕ್ ನಲ್ಲಿದ್ದ ಎಲ್ಲಾ ವಸ್ತುಗಳನ್ನು ಹೊತ್ತು ಹೋಗಿದ್ದಾರೆ. ಗಾರ್ಬೇಜ್ ನೆಪದಲ್ಲಿ ಸಿಬ್ಬಂದಿಗಳು ಅಲ್ಲಿ ಇದ್ದ ಎಲ್ಲಾ ವಸ್ತುಗಳನ್ನು ಹೊತ್ತು ಹೋಗಿದ್ದಾರೆ. ಈ ವಿಚಾರವನ್ನು ಕೂಡಲೇ   ಸಿಸಿಬಿ ಅಧಿಕಾರಿಗಳು
 ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ದಾಳಿ ನಡೆಸಲು ಪರ್ಮಿಷನ್ ಕೇಳುತ್ತಿದ್ದಂತೆ ಅಲರ್ಟ್ ಆಗಿ, ಕ್ಲೀನ್ ಮಾಡಿಸಿದ್ದರು.

ದರ್ಶನ್‌ಗೆ ದಿನಕ್ಕೊಂದು ಕಡೆಯಿಂದ ಭರ್ಜರಿ ಬಾಡೂಟ:
ಈ ನಡುವೆ ದರ್ಶನ್ ಗೆ ದಿನಕ್ಕೊಂದು ಹೋಟೆಲ್ ಗಳಿಂದ ಬಿರಿಯಾನಿ ಸಪ್ಲೈ ಆಗುತ್ತಿದ್ದು, ಎಂಬ ಮಾಹಿತಿಯೂ ಇದೆ. ವಿಲ್ಸನ್ ಗಾರ್ಡನ್ ನಾಗನಿಂದ ದರ್ಶನ್‌ ಗೆ ಸಕಲ ಸೌಲಭ್ಯವೂ  ಸಿಕ್ಕಿತ್ತು. ಸಿಗರೇಟ್ ಮಾತ್ರವಲ್ಲ  ಬಿರಿಯಾನಿ, ಕಬಾಬ್ ಸೇರಿ ದರ್ಶನ್ ಕೇಳಿದ ಊಟವನ್ನು ತರಿಸಿಕೊಡಲಾಗುತ್ತಿತ್ತು.

ವಿಲ್ಸನ್ ಗಾರ್ಡನ್ ನಾಗನಿಗೆ ಪ್ರತಿದಿನ ಆತನ ಸಹಚರರು ಊಟ ಸಪ್ಲೈ ಮಾಡುತ್ತಿದ್ದರು. ತನಗೆಂದು ತರಿಸಿಕೊಳ್ಳುತ್ತಿದ್ದ ನಾನ್ ವೆಜ್ ಊಟವನ್ನು ದರ್ಶನ್ ಗೆ ನಾಗ ನೀಡುತ್ತಿದ್ದ. ದಿನಕ್ಕೊಂದು ಹೋಟೆಲ್ ‌ನಿಂದ ಬೇರೆ ಬೇರೆ ರುಚಿಯ ಊಟ ಸಪ್ಲೈ ಮಾಡಲಾಗುತ್ತಿತ್ತು.

ಬನಶಂಕರಿಯ ಫೇಮಸ್ ಶಿವಾಜಿ ಹೋಟೆಲ್ ಸೇರಿ ಹಲವು ಹೊಟೇಲ್ ನಿಂದ ಸಪ್ಲೈ ಮಾಡಲಾಗುತ್ತಿತ್ತು. ದರ್ಶನ್ ಗೆ ಏನೆಲ್ಲ ಸೌಕರ್ಯ ಸಿಗುತ್ತಿತ್ತು ಎಂಬ ಬಗ್ಗೆ ತನಿಖೆ ಆರಂಭಗೊಂಡಿದೆ.  ತನಿಖೆ ವೇಳೆ ದಿನಕ್ಕೊಂದು ಹೊಟೆಲ್ ನಿಂದ ಭರ್ಜರಿ ಊಟದ ವ್ಯವಸ್ಥೆ ಇತ್ತು ಎಂಬುದು ಕೂಡ  ಬಯಲಾಗಿದೆ. ಜೈಲು ಸಿಬ್ಬಂದಿಗಳು ಹಣ ಪಡೆದು ವಿಲ್ಸನ್ ಗಾರ್ಡನ್ ನಾಗ, ದರ್ಶನ್ ಸೇರಿ ಹಲವರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದರು ಎನ್ನಲಾಗಿದೆ. ಇದೆಲ್ಲವನ್ನು ಜೈಲು ಅಧಿಕಾರಿಗಳ ಅನುಮತಿ ಇಲ್ಲದೆ ಸಾಧ್ಯವೇ ಇಲ್ಲ.

ಜೈಲು ನಿಯಮಗಳು ಏನ್ ಹೇಳುತ್ತೆ?

  • ಕೋರ್ಟ್ ನಿರ್ದೇಶನ ಇಲ್ಲದೆ ಹೊರಗಿನ ಯಾವ ವಸ್ತುಗಳನ್ನು ವಿಚಾರಣಾಧೀನ ಕೈದಿ ಮತ್ತು ಸಾಮಾನ್ಯ ಕೈದಿಗೆ ಕೊಡುವ ಹಾಗಿಲ್ಲ.
  • ಸಿಗರೇಟು, ಮಾದಕವಸ್ತು ಮತ್ತು ಮದ್ಯ ಜೈಲಿನೊಳಗೆ ಹೋಗೋದು ನಿಷೇಧ.
  • ಜೈಲಿನೊಳಗೆ ಪತ್ತೆಯಾದರೆ ಅಥವಾ ಅದನ್ನ ಸೇವಿಸಿದ್ದು ಸಾಬೀತಾದರೆ ಕಾನೂನು ಕ್ರಮ. ಅಧಿಕಾರಿಗಳ ಮೇಲೂ ಕ್ರಮಕ್ಕೆ ಅವಕಾಶ.
  • ವಿಐಪಿ ಸೆಲ್ ನಲ್ಲಿ ಇರುವವರಿಗೆ ಒಳ್ಳೆಯ ಕಾಟ್, ಬೆಡ್, ಟಿವಿ, ಫ್ಯಾನ್ ಕೊಡಬಹುದು. 
  • ಆದರೆ ಯಾರಿಗೂ ಲಾನ್ ನಲ್ಲಿ ಕೂತು ಮಾತಾಡುವಂಥ ವ್ಯವಸ್ಥೆ ಮಾಡುವಂತಿಲ್ಲ. 
  • ಲಾನ್ ನಲ್ಲಿ ಚೇರ್ ಹಾಕಿಕೊಂಡು ಕೂತು ಮಾತಾಡುವಂತಿಲ್ಲ.

ಅಧಿಕಾರಿಗಳ ಕೆಲಸವೇನು?

  • ಯಾವುದೇ ಖೈದಿಯು ತನ್ನ ಆವರಣವನ್ನು ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು.
  • ಯಾವುದೇ ಖೈದಿ ಜೈಲಿನ ಹೊರಗಿನ ಯಾವುದೇ ವ್ಯಕ್ತಿಯೊಂದಿಗೆ ಸಂವಹನ ನಡೆಸಲು ಅವಕಾಶ ನೀಡಬಾರದು.
  • ನಗುವುದು, ಆಡುವುದು, ಅನಗತ್ಯ ಮಾತನಾಡುವುದನ್ನು ತಡೆಯಬೇಕು.
  • ಜಗಳವಾಡುವುದು ಮತ್ತು ಇತರ ಅನೈತಿಕ ನಡವಳಿಕೆ ತಡೆಯುವುದು.
  • ಮೊಬೈಲ್ ಫೋನ್ ಗಳ ಬಳಕೆ ಸಂಪೂರ್ಣ ನಿಷೇಧ ಹೇರುವುದು.
Latest Videos
Follow Us:
Download App:
  • android
  • ios