ಇಂಡಿ ಕ್ಷೇತ್ರದ ಹಳ್ಳಿಗಳ ಕಾಲುವೆಗೆ ನೀರು ಬರದಿದ್ದರೆ ರಾಜಿನಾಮೆ ನೀಡ್ತೇನೆ: ಕೈ ಶಾಸಕ ಯಶವಂತರಾಯಗೌಡ ಎಚ್ಚರಿಕೆ
ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯಡಿ ಇಂಡಿ ತಾಲೂಕಿನ ಕಟ್ಟ ಕಡೆಯ ಗ್ರಾಮಗಳ ಕಾಲುವೆಗೆ ನೀರು ಹರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ.
ವಿಜಯಪುರ (ನ.07): ವಿಜಯಪುರ ಜಿಲ್ಲೆಯಲ್ಲಿ ಭೀಕರ ಬರ ಬಿದ್ದಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಕಾಲುವೆಯಿರುವ ಕಟ್ಟಕಡೆಯ ಗ್ರಾಮಕ್ಕೂ ನೀರು ಸರಬರಾಜು ಆಗಬೇಕು. ಇಲ್ಲವಾದರೆ ನನ್ನ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ನಂತರ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಶಾಸಕ ಯಶವಂತರಾಯಗೌಡ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರಕ್ಕೆ ನೀರು ಬರದಿದ್ರೆ ರಾಜೀನಾಮೆ ಕೊಡ್ತೀನಿ. ನಾಳೆ ರಾಜೀನಾಮೆ ಹಾಗೂ ನಾಡಿದ್ದು ನಿವೃತ್ತಿ ಘೋಷಣೆ ಮಾಡುತ್ತೇನೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಜಿಲ್ಲಾಡಳಿತದ ವಿರುದ್ಧ ರೊಚ್ಚಿಗೆದ್ದಿದ್ದಾರೆ. ತಮ್ಮ ಕ್ಷೇತ್ರ ಕಟ್ಟ ಕಡೆಯ ರೈತರಿಗೆ ನೀರು ಸಿಗ್ತಿಲ್ಲವೆಂದರೆ ನನಗೆ ಯಾವ ಪುರುಷಾರ್ಥಕ್ಕೆ ಶಾಸಕ ಸ್ಥಾನ ಬೇಕಿದೆ. ನನ್ನ ಕ್ಷೇತ್ರದ ಜನರಿಗೆ ನೀರು ಸಿಗದೆ ಹೋದ್ರೆ ಯಾವ ಹಂತಕ್ಕೆ ಹೋಗಲು ಸಿದ್ಧನಾಗಿದ್ದೇನೆ. ನೀರು ಬರದೆ ಹೋದ್ರೆ ನಾನು ಯಾರಿಗೂ ಕೇರ್ ಮಾಡೋದಿಲ್ಲ ಎಂದು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.
ಭಾರತರತ್ನ ವಿಶ್ವೇಶ್ವರಯ್ಯ ನಿರ್ಮಿಸಿದ್ದ ಏಷ್ಯಾದ ಮೊಟ್ಟ ಮೊದಲ ನೀರಾವರಿ ಸುರಂಗ ಕಾಲುವೆಯ ಮೇಲ್ಭಾಗದ ಮಣ್ಣು ಕುಸಿತ
ಕಾಂಗ್ರೆಸ್ ಪಕ್ಷದಲ್ಲಿಯೇ ನಿವೃತ್ತಿ ಆಗ್ತೇನೆ: ಕಳೆದ 22 ವರ್ಷದಿಂದ ಇಂಡಿ ಕ್ಷೇತ್ರದ ಕಾಲುವೆಗಳಿಗೆ ನೀರು ಬರ್ತಿಲ್ಲ. ನಾನು ಕಟ್ಟ ಕಡೆಯ ಗ್ರಾಮಕ್ಕೂ ನೀರು ಹರಿಸುವುದಾಗಿ ವಾಗ್ದಾನ ನೀಡಿದ್ದೇನೆ. ಹೀಗಾಗಿ, ಜಿಲ್ಲಾಡಳಿತದಿಂದ ಇಂಡಿ ಕ್ಷೇತ್ರದ ಕೊನೆಯ ಗ್ರಾಮಕ್ಕೂ ನೀರನ್ನು ಹರಿಸಬೇಕು. ಇಲ್ಲವಾದರೆ ನಾನು ಶಾಸಕ ಸ್ಥಾನ್ಕೆ ರಾಜಿನಾಮೆ ನೀಡಿ, ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ. ರಾಜ್ಯದಲ್ಲಿ ನನಗೆ ಪಕ್ಷದ ಬದ್ಧತೆ ಇದೆ. ಕಾಂಗ್ರೆಸ್ ಪಕ್ಷದಿಂದಲೇ ರಾಜಕಾರಣ ಮಾಡಿದ್ದು, ಇದರಲ್ಲಿಯೇ ನಿವೃತ್ತಿ ಆಗ್ತೇನೆ. ಆದ್ರೆ ಜನರ ಸಮಸ್ಯೆ ಅಂತಾ ಬಂದರೆ ನೇರಗಾರಿಕೆ, ಎದೆಗಾರಿಕೆಯಿಂದ ಇರ್ತಿನಿ ಎಂದು ಶಾಸಕ ಯಶವಂತರಾಯಗೌಡ ಹೇಳಿದರು.
ಸರ್ಕಾರ ಪತನ ಕಾಂಗ್ರೆಸ್ಸಿಗರಿಂದಲೇ ಆಗುತ್ತೆ: ಮಾಜಿ ಸಚಿವ ಬಿ.ಸಿ. ಪಾಟೀಲ್
ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ: ವಿಜಯಪುರ ಜಿಲ್ಲೆಯಲ್ಲಿ ಭೀಕರ ಬರ ಬಿದ್ದಿದೆ. ಬರದ ನಡುವೆ ಇಂಡಿ ಕ್ಷೇತ್ರದ ಕಟ್ಟ ಕಡೆಯ ಹಳ್ಳಿಗಳಿಗೆ ಕಾಲುವೆಯ ನೀರು ಬರುತ್ತಿಲ್ಲವೆಂದು ಸಿಡಿದೆದ್ದ ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳಿದ್ದಾರೆ. ನಮ್ಮ ಕ್ಷೇತ್ರದ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿದೆ. ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯಡಿ ಇಂಡಿ ಶಾಖಾ ಕಾಲುವೆ ಮೂಲಕ ನೀರು ಹರಿಯಬೇಕಿದೆ. ಇಂಡಿ ಕ್ಷೇತ್ರದ ಗಡಿವರಗೆ ಮಾತ್ರ ನೀರು ಹರಿಯುತ್ತಿದ್ದು, ನಮ್ಮ ಕ್ಷೇತ್ರದಲ್ಲಿರುವ ಕಾಲುವೆ ಕಟ್ಟಕಡೆಯ ಗ್ರಾಮಗಳಿಗೆ ನೀರು ಬರ್ತಿಲ್ಲ. ಇದನ್ನು ಕೂಡಲೇ ಸರಿಪಡಿಸಿ ನೀರು ಹರಿಸಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.