ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಬಿಬಿಎಂಪಿ ಸ್ವತ್ತುಗಳ ರಕ್ಷಣೆ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಏಕರೂಪತೆ ತರಲು ಸರ್ಕಾರ ಗಂಭೀರವಾಗಿ ಚಿಂತನೆ ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

ವಿಧಾನ ಪರಿಷತ್‌ (ಫೆ.24): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಬಿಬಿಎಂಪಿ ಸ್ವತ್ತುಗಳ ರಕ್ಷಣೆ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಏಕರೂಪತೆ ತರಲು ಸರ್ಕಾರ ಗಂಭೀರವಾಗಿ ಚಿಂತನೆ ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಪ್ರಶ್ನೋತ್ತರ ವೇಳೆ ಜೆಡಿಎಸ್‌ನ ಮರಿತಿಬ್ಬೇಗೌಡ ಅವರು, ಬೆಂಗಳೂರು ದಕ್ಷಿಣ ತಾಲ್ಲೂಕಿನ ಬೇಗೂರು ಹೋಬಳಿಯ ದೇವರ ಚಿಕ್ಕನಹಳ್ಳಿ ಗ್ರಾಮದಲ್ಲಿ ಭೂಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಬಿಡಿಎ 50 ನಿವೇಶನಗಳ ಪೈಕಿ 7 ಜನರಿಗೆ ಮಾತ್ರ ಹಂಚಿಕೆ ಮಾಡಲಾಗಿದೆ. 

ಉಳಿದ ನಿವೇಶನಗಳ ಹಂಚಿಕೆಯಾಗಿಲ್ಲ. ಬಡಾವಣೆ ರಚಿಸಿ ನಿವೇಶನಗಳ ಸಂಖ್ಯೆ ಗುರುತಿಸಿ ಸುಮಾರು 40 ವರ್ಷವಾದರೂ ನಿವೇಶನ ಹಂಚಿಕೆ ಮಾಡಿಲ್ಲ. ಆದರೆ ಬಿಡಿಎ ಅಧಿಕಾರಿಗಳು ಈ ನಿವೇಶನಗಳನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಇಲ್ಲವೇ ಒಡಂಬಡಿಕೆ ಮಾಡಿಕೊಂಡಿದ್ದು, ಸುಮಾರು 500 ಕೋಟಿ ರು. ಅವ್ಯವಹಾರವಾಗಿದೆ. ಇಂತಹ ಬೆಲೆ ಬಾಳುವ ಭೂಮಿಯನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, ನಿಯಮದ ಪ್ರಕಾರವೇ ಬಿಡಿಎ ಭೂಸ್ವಾಧೀನ ಪಡಿಸಿಕೊಳ್ಳುತ್ತದೆ. 

‘ಗೃಹಿಣಿ ಶಕ್ತಿ’ಯಡಿ 500 ಬದಲು 1000: ಸಿಎಂ ಬೊಮ್ಮಾಯಿ ಘೋಷಣೆ

ಅಂತಿಮ ಅಧಿಸೂಚನೆ ಹೊರಡಿಸಿದ ಬಳಿಕ ಯಾವುದೇ ಕಾರಣಕ್ಕೂ ಭೂಮಿಯನ್ನು ಕೈ ಬಿಡುವುದಿಲ್ಲ. ಆದರೂ ಭೂ ಮಾಲಿಕರು ತಮಗೆ ಪರಿಹಾರದ ಮೊತ್ತ ಕಡಿಮೆಯಾಗಿದೆ ಎಂದು ಇಲ್ಲವೇ ಬೇರೆ ಬೇರೆ ಕಾರಣ ಮುಂದಿಟ್ಟುಕೊಂಡು ನ್ಯಾಯಾಲಯದ ಮೊರೆ ಹೋಗುತ್ತಾರೆ. ಕೆಲವು ಪ್ರಕರಣಗಳಲ್ಲಿ ಬಿಡಿಎ ಪರವಾಗಿ ಇನ್ನೂ ಕೆಲವು ಪ್ರಕರಣಗಳಲ್ಲಿ ಅರ್ಜಿದಾರರ ಪರವಾಗಿ ಬಂದಿರುತ್ತದೆ. ಕೆಲವು ಸಾರಿ ಒಂದೇ ರೀತಿಯ ಪ್ರಕರಣಗಳಿಗೆ ಬೇರೆ ಬೇರೆ ರೀತಿಯ ತೀರ್ಪು ಸಹ ಬಂದಿರುತ್ತದೆ. ಕೆಲವು ಸಾರಿ ಸರ್ಕಾರದ ಪರವಾಗಿ ಸಮರ್ಪಕವಾಗಿ ವಾದ ಮಂಡಿಸಿಲ್ಲ ಎಂಬ ಮಾತುಗಳೂ ಕೇಳಿ ಬಂದಿವೆ.

ಅವ್ಯವಹಾರವಾಗಿದ್ದರೆ ಕ್ರಮ: ಮುಂದಿನ ದಿನಗಳಲ್ಲಿ ದೋಷ ಎಲ್ಲ ಸರಿಪಡಿಸಿ ಬಿಡಿಎ ಮತ್ತು ಪಾಲಿಕೆಯ ಆಸ್ತಿ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು. ದೇವರ ಚಿಕ್ಕನಹಳ್ಳಿಯ ಪ್ರಕರಣದಲ್ಲಿ ಅವ್ಯವಹಾರವಾಗಿದ್ದರೆ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು, ಅದೇ ರೀತಿ ಇದೇ ಜಾಗದಲ್ಲಿ ಭಾರತೀಯ ತೈಲ ನಿಗಮ ಆರಂಭಿಸಿರುವ ಪೆಟ್ರೋಲ್‌ ಬಂಕ್‌ ನಡೆಯಲು ಇರುವ ಅಡೆತಡೆಗಳನ್ನು ನಿವಾರಿಸಲಾಗುವುದು ಎಂದು ಭರವಸೆ ನೀಡಿದರು.

ಕೆಆರ್‌ಐಡಿಎಲ್‌ನ 72% ಕಾಮಗಾರಿ ವಿಳಂಬ: ‘ಹಣಕಾಸಿನ ಲಭ್ಯತೆ ಇದ್ದರೂ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್‌) ತನ್ನ ಕಾಮಗಾರಿಗಳಲ್ಲಿ ಭಾರೀ ವಿಳಂಬ ಮಾಡಿದೆ. ಇದರಿಂದ 84,574 ಕಾಮಗಾರಿಗಳ ಪೈಕಿ ಕೇವಲ 24,014 ಕಾಮಗಾರಿಗಳನ್ನು (ಶೇ.28) ಮಾತ್ರ ಪೂರ್ಣಗೊಳಿಸಿದೆ. ಉಳಿದ ಶೇ.72ರಷ್ಟುಕಾಮಗಾರಿಗಳು ವಿಳಂಬವಾಗಿವೆ. ಕೆಲ ಅನರ್ಹ ಕಾಮಗಾರಿಗಳನ್ನು ನಡೆಸಲಾಗಿದೆ. ಕೆಲ ನಿಗದಿತ ಟೆಂಡರ್‌ ಪ್ರಕ್ರಿಯೆಗಳನ್ನು ತಪ್ಪಿಸಲು ಕಾಮಗಾರಿಗಳನ್ನು ವಿಭಜಿಸಿ ನೀಡಲಾಗಿದೆ. ಈ ಸಂಸ್ಥೆಯಲ್ಲಿ ಗುಣಮಟ್ಟ ನಿಯಂತ್ರಣ ವ್ಯವಸ್ಥೆಯೇ ಇಲ್ಲ...’

ಕಣ್ಣೀರಿಗೆ ಕರಗದೇ ಅಭಿವೃದ್ಧಿಗೆ ಮತ ನೀಡಿ: ಸಿ.ಪಿ.ಯೋಗೇಶ್ವರ್‌

ಇದು, ಗುರುವಾರ ಸದನದಲ್ಲಿ ಮಂಡಿಸಲಾದ ಕೆಆರ್‌ಐಡಿಎಲ್‌ ಕಾರ್ಯ ನಿರ್ವಹಣಾ ಲೆಕ್ಕ ಪರಿಶೋಧನೆಗೆ ಸಂಬಂಧಿಸಿದ ಭಾರತದ ಲೆಕ್ಕ ನಿಯಂತ್ರಣಕರು ಮತ್ತು ಮಹಾ ಲೆಕ್ಕಪರಿಶೋಧಕರ 2021ರ ಮಾಚ್‌ರ್‍ಗೆ ಕೊನೆಗೊಂಡ ವರದಿಯ ಪ್ರಮುಖ ಅಂಶಗಳು. ಇಂತಹ ಅಂಶಗಳನ್ನು ಹೊರಗೆಳೆದಿರುವ ಸಿಎಜಿ, ಟೆಂಡರ್‌ ಪ್ರಕ್ರಿಯೆ ನಡೆಸದಿರಲು ಕಾರಣ ನೀಡುವುದನ್ನು ಕಡ್ಡಾಯಗೊಳಿಸಿ, ಕಾಮಗಾರಿ ವಹಿಸುವಿಕೆ ಷರತ್ತುಗಳನ್ನು ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದೂ ಸೇರಿ ಸರ್ಕಾರಕ್ಕೆ 11 ಶಿಫಾರಸ್ಸನ್ನೂ ಮಾಡಿದೆ.