ವಿಜಯಪುರ: ಹೊತ್ತಿ ಉರಿದ ಖಾಸಗಿ ಟ್ರಾವೆಲ್ಸ್. ಚಾಲಕನ ಸಮಯ ಪ್ರಜ್ಞೆಗೆ 36 ಜೀವಗಳು ಬಚಾವ್!
ವಿಜಯಪುರ ನಗರದ ಹೊರವಲಯದ ಮನಗೂಳಿ ರಸ್ತೆಯಲ್ಲಿ ನಡೆಯಬೇಕಿದ್ದ ಭಾರಿ ಅನಾಹುತವೊಂದು ತಪ್ಪಿದೆ. ಖಾಸಗಿ ಟ್ರಾವೆಲ್ಸ್ ಬಸ್ ಬೆಂಕಿ ಹೊತ್ತಿ ಉರಿದಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನ ಸಮಯ ಪ್ರಜ್ಞೆಯಿಂದ 30ಕ್ಕೂ ಅಧಿಕ ಪ್ರಯಾಣಿಕರ ಜೀವಗಳು ಬಚಾವ್ ಆಗಿವೆ.
ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಡಿ.15): ವಿಜಯಪುರ ನಗರದ ಹೊರವಲಯದ ಮನಗೂಳಿ ರಸ್ತೆಯಲ್ಲಿ ನಡೆಯಬೇಕಿದ್ದ ಭಾರಿ ಅನಾಹುತವೊಂದು ತಪ್ಪಿದೆ. ಖಾಸಗಿ ಟ್ರಾವೆಲ್ಸ್ ಬಸ್ ಬೆಂಕಿ ಹೊತ್ತಿ ಉರಿದಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನ ಸಮಯ ಪ್ರಜ್ಞೆಯಿಂದ 30ಕ್ಕೂ ಅಧಿಕ ಪ್ರಯಾಣಿಕರ ಜೀವಗಳು ಬಚಾವ್ ಆಗಿವೆ.
ಹೊತ್ತಿ ಉರಿದ ಜನತಾ ಟ್ರಾವೆಲ್ ಬಸ್!
ಬೆಳ್ಳಂಬೆಳಗ್ಗೆ ವಿಜಯಪುರ ನಗರದ ಮನಗೂಳಿ ರಸ್ತೆಯ ಹಿಟ್ಟನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಐವತ್ತರಲ್ಲಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ಒಂದು ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದಂತಾಗಿದೆ. ಒಟ್ಟು 36 ಜನ ಪ್ರಯಾಣಿಕರು ಇದ್ದಂತಹ ಬೆಂಗಳೂರಿನಿಂದ ವಿಜಯಪುರಕ್ಕೆ ಆಗಮಿಸುತ್ತಿದ್ದ ಜನತಾ ಟ್ರಾವೆಲ್ಸ್‌ಗೆ ಸೇರಿದ ಬಸ್‌ಟೈರಿನಲ್ಲಿ ಘರ್ಷಣೆ ಕಾರಣದಿಂದ ಬೆಂಕಿ ಹೊತ್ತಿಕೊಂಡು ಬಸ್‌ಗೆ ವ್ಯಾಪಿಸಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಆದರೆ ಬೆಂಕಿ ವ್ಯಾಪಿಸುವುದಕ್ಕಿಂತಲೂ ಮುಂಚೆ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ.
ಸೈಬರ್ ವಂಚನೆಯಲ್ಲಿ ದೊಡ್ಡ ಸದ್ದು ಮಾಡ್ತಿದೆ ಡಿಜಿಟಲ್ ಅರೆಸ್ಟ್? ಕೇವಲ 15 ದಿನದಲ್ಲಿ ಮೂರೂವರೆ ಕೋಟಿ ವಂಚನೆ!
ಟೈರ್ ಬ್ಲಾಸ್ಟ್, ಘರ್ಷಣೆಯಿಂದ ಹೊತ್ತಿದ ಬೆಂಕಿ!
ಘಟನೆ ನಡೆದಿರೋದು ರಾಷ್ಟ್ರೀಯ ಹೆದ್ದಾರಿ 50 ವಿಜಯಪುರ ತಾಲೂಕಿನ ಹಿಟ್ಟನಹಳ್ಳಿ ಬಳಿ, ವಿಜಯಪುರ ನಗರದಿಂದ ಕೂಗಳತೆಯ ದೂರವಷ್ಟೇ.. ಅಷ್ಟಕ್ಕು ಘಟನೆಗೆ ಕಾರಣವೇನು ಎಂದರೆ, ಬಸ್ಸಿನ ಎಡಬದಿಯ ಹಿಂಭಾಗದ ಟೈರ್ ಬ್ಲಾಸ್ಟ್ ಆಗಿದೆ. ಬಳಿಕ ಚಕ್ರದ ಕಬ್ಬಿಣದ ಭಾಗ ರಸ್ತೆಗೆ ತಗುಲಿ ಘರ್ಷಣೆ ಉಂಟಾಗಿದೆ. ಇದರಿಂದ ಕಿಡಿ ಹೊತ್ತಿಕೊಂಡು ಬೆಂಕಿಯ ಕೆನ್ನಾಲಿಗೆ ಟೈರ್‌ಗೆ ವ್ಯಾಪಿಸಿದೆ. ಬಳಿಕ ಬಸ್‌ಗು ತಗುಲಿದೆ.
ಬಸ್ ಚಾಲಕನ ಸಮಯಪ್ರಜ್ಞೆ ಬದುಕುಳಿದ ಪ್ರಯಾಣಿಕರು!
ಬಸ್‌ನ ಚಕ್ರದಲ್ಲಿ ಬೆಂಕಿ ಹೊತ್ತಿಕೊಂಡಾಗ ಡ್ರೈವರ್ ಪಾಲಾಕ್ಷಪ್ಪ ಬಸ್ ಓಡಿಸುತ್ತಿದ್ದರು. ಟೈರ್‌ಗೆ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಪಾಲಾಕ್ಷಪ್ಪ ಬಸ್ ನಿಲ್ಲಿಸಿದ್ದಾರೆ. ಬಳಿಕ ಪ್ರಯಾಣಿಕರನ್ನ ಜಾಗ್ರತಗೊಳಿಸಿದ್ದಾರೆ. ತಕ್ಷಣವೇ ಇಳಿಯೋಕೆ ಸೂಚನೆ ನೀಡಿದ್ದಾರೆ. ಡ್ರೈವರ್ ಸಮಯ ಪ್ರಜ್ಷೆಯಿಂದಾಗಿ ಎಲ್ಲಾ ಪ್ರಯಾಣಿಕರು ತಮ್ಮ ಲಗೇಜ್ ಸಮೇತ ಸುರಕ್ಷಿತವಾಗಿ ಕೆಳಗಿಳಿಯುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆರಂಭದಲ್ಲಿ ಬೆಂಕಿನಂದಿಸಲು ಯತ್ನ, ವಿಫಲ
ಬೆಂಕಿ ಹೊತ್ತಿಕೊಂಡ ಆರಂಭದಲ್ಲಿ ಬೆಂಕಿನಂದಿಲಸಲು ಬಸ್ಸಿನ ಚಾಲಕ, ಕ್ಲೀನರ್, ಪ್ರಯಾಣಿಕರು ಮತ್ತು ದಾರಿಹೋಕ ಸ್ಥಳೀಯರ ನೆರವಿನಿಂದ ಪ್ರಯತ್ನಿಸಿದ್ದಾರೆ. ಆದ್ರೆ ಸಾಧ್ಯವಾಗಿಲ್ಲ. ಅಷ್ಟೋತ್ತಿಗೆ ಬೆಂಕಿಯ ಕೆನ್ನಾಲಿಗೆ ಬಸ್ ವ್ಯಾಪಿಸಿಕೊಂಡಿತ್ತು. ಕ್ಷಣಾರ್ಧದಲ್ಲೆ ಸುಟ್ಟು ಕರಕಲಾಗಿದೆ.
ಹುಡುಗಿ ಹೆಸರಲ್ಲಿ ಫೇಸ್‌ಬುಕ್; ಬರೋಬ್ಬರಿ ₹6.87 ಲಕ್ಷ ರೂ.ವಂಚಿಸಿದ ಭೂಪ!
ಡಿ. 24ಕ್ಕೆ ಅಂತ್ಯವಾಗಲಿದ್ದ ಬಸ್ ಇನ್ಸರೆನ್ಸ್, ಅನುಮಾನಗಳ ಬಗ್ಗೆಯೂ ತನಿಖೆ!
ವಿಚಿತ್ರ ಅಂದ್ರೆ ಜನತಾ ಬಸ್‌ನ ಇನ್ಸರೆನ್ಸ್ ಬರುವ ಡಿಸೆಂಬರ್ 24ಕ್ಕೆ ಅಂತ್ಯವಾಗಲಿತ್ತು ಎನ್ನಲಾಗಿದೆ. ಕೇವಲ 10 ದಿನಗಳಲ್ಲಿ ಇನ್ಸರೆನ್ಸ್ ಲ್ಯಾಪ್ಸ್ ಆಗಲಿಕ್ಕಿತ್ತು. ಅದಕ್ಕು ಮೊದಲೇ ದುರ್ಘಟನೆ ನಡೆದಿದೆ. ಬಸ್ ಸುಟ್ಟು ಭಸ್ಮವಾಗಿದೆ. ಇನ್ನು ಬಸ್‌ನ ಟೈರ್ ಬ್ಲಾಸ್ಟ್ ಆಗಿರೋದರ ಹಿಂದೆ ಏನಾದ್ರು ಸಮಸ್ಯೆಗಳು ಇದ್ವಾ, ಹಳೆ ಟೈರ್ ಬಳಕೆಯಾಗಿತ್ತಾ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ. ಕೆಲ ಖಾಸಗಿ ಟ್ರಾವೆಲ್ಸ್ ಹಣಕ್ಕಾಗಿ ಪ್ರಯಾಣಿಕರ ಜೀವದ ಬಗ್ಗೆ ಕೇರ್ ಮಾಡದೆ ಟೈರ್ ಅವಧಿ ಮುಗಿದ ಮೇಲೆಯೂ ಓಡಿಸುತ್ತಾರೆ ಎನ್ನುವ ಆರೋಪಗಳಿವೆ. ಬಸ್ ಕಂಡಿಶನ್ ಸರಿ ಇಲ್ಲದೆ ಹೋದರು ಓಡಿಸುತ್ತಾರೆ ಎನ್ನುವ ಆರೋಪಗಳಿಗೆ ಈ ಬಗ್ಗೆಯೂ ತನಿಖೆ ನಡೆಯಬೇಕಿದೆ..
ಬಚಾವ್ ಆದ 36 ಜನ ಪ್ರಯಾಣಿಕರ ಜೀವ!
ಈ ಬಸ್ಸಿನಲ್ಲಿ ಒಟ್ಟು 36 ಜನ ಪ್ರಯಾಣಿಕರು ಇದ್ದರೆನ್ನಲಾಗಿದೆ. ಎಲ್ಲರೂ ಸುರಕ್ಷಿತವಾಗಿ ಬಸ್ಸಿನಿಂದ ಇಳಿದು ಪಾರಾಗಿದ್ದಾರೆ. ಇಂದು ಬೆಳಿಗ್ಗೆ 6.30ಕ್ಕೆ ನಡೆದ ಘಟನೆ ಇದಾಗಿದ್ದು ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ವಿಜಯಪುರ ಹಾಗೂ ಬಸವನ ಬಾಗೇವಾಡಿಯ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತು ಹೈವೇ ಪೆಟ್ರೋಲಿಂಗ್ ವಾಹನ, ಅಂಬುಲೆನ್ಸ್ ಗಳಿಂದಲೂ ಕಾರ್ಯಾಚರಣೆ ನಡೆಸಲಾಗಿದೆ.