ಗ್ರಾಹಕರು ತಮ್ಮ ಮನೆ ಬದಲಿಸುವ ಸಂದರ್ಭದಲ್ಲಿ ಹಾಗೂ ಇತರೆ ಸಂದರ್ಭಗಳಲ್ಲಿ ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಸ್ಥಳದಿಂದ ಸ್ಥಗಿತಗೊಳಿಸಿ ಮತ್ತೊಂದು ಸ್ಥಳದಲ್ಲಿ ಹೊಸದಾಗಿ ನೋಂದಣಿ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸಲು ಡಿ-ಲಿಂಕಿಂಗ್‌ ಸೌಲಭ್ಯ ಅಗತ್ಯ. ಹೀಗಾಗಿ ಕೂಡಲೇ ಎಲ್ಲಾ ಎಸ್ಕಾಂಗಳು ಡಿ-ಲಿಂಕಿಂಗ್‌ ಸೌಲಭ್ಯ ಕಲ್ಪಿಸಬೇಕು ಎಂದು ಆದೇಶ ಮಾಡಿದ ಇಂಧನ ಇಲಾಖೆ ಅಧೀನ ಕಾರ್ಯದರ್ಶಿ

ಬೆಂಗಳೂರು(ಫೆ.08): ಗೃಹಜ್ಯೋತಿ ಯೋಜನೆಯಡಿ ನೋಂದಣಿ ಆಗಿರುವವರು ನೋಂದಣಿ ರದ್ದುಪಡಿಸಲು ಬಯಸಿದರೆ ಅಂಥವರಿಗೆ ಡಿ-ಲಿಂಕಿಂಗ್‌ ಸೌಲಭ್ಯ ಕಲ್ಪಿಸುವಂತೆ ಎಸ್ಕಾಂಗಳಿಗೆ ಇಂಧನ ಇಲಾಖೆ ಸೂಚನೆ ನೀಡಿದೆ. ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆಯಡಿ 200 ಯುನಿಟ್‌ವರೆಗೆ ಗೃಹ ಬಳಕೆ ವಿದ್ಯುತ್ತನ್ನು ಉಚಿತವಾಗಿ ಪೂರೈಸಲಾಗುತ್ತಿದೆ.

ಮಾನದಂಡಗಳ ಪ್ರಕಾರ, ಫಲಾನುಭವಿಗಳು ಅರ್ಹರಿರುವಷ್ಟು ಯುನಿಟ್‌ಗೆ ಶೂನ್ಯ ಬಿಲ್‌ ನೀಡಲಾಗುತ್ತಿದೆ. ಇದಕ್ಕೆ ಆಧಾರ್‌ ಲಿಂಕ್‌ ಮಾಡಿ ನೋಂದಾಯಿಸಬೇಕು. ಒಂದು ವೇಳೆ ಮನೆ ಖಾಲಿ ಮಾಡಿ ಬೇರೆಡೆ ಸ್ಥಳಾಂತರವಾದರೆ ಹಳೆಯ ಮನೆಯ ಆರ್‌.ಆರ್‌. ನಂಬರ್‌ಗೆ ನೋಂದಾಯಿಸಿದ್ದ ಆಧಾರ್‌ ಕಾರ್ಡ್‌ ಡಿ-ಲಿಂಕ್‌ ಮಾಡಲು ಸಾಧ್ಯವಿರಲಿಲ್ಲ. ಹೀಗಾಗಿ ಸಮಸ್ಯೆ ಎದುರಿಸುವಂತಾಗಿತ್ತು.

ಕರ್ನಾಟಕದ ಜನತೆಗೆ ಉಚಿತ ವಿದ್ಯುತ್‌ ಯೂನಿಟ್‌ಗಳ ಮಿತಿ ಹೆಚ್ಚಿಸಿದ ಸರ್ಕಾರ! ಯಾರಿಗೆಲ್ಲಾ ಅನ್ವಯ ಗೊತ್ತಾ?

ಹೀಗಾಗಿ ಇಂಧನ ಇಲಾಖೆ ಅಧೀನ ಕಾರ್ಯದರ್ಶಿ, ಗ್ರಾಹಕರು ತಮ್ಮ ಮನೆ ಬದಲಿಸುವ ಸಂದರ್ಭದಲ್ಲಿ ಹಾಗೂ ಇತರೆ ಸಂದರ್ಭಗಳಲ್ಲಿ ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಸ್ಥಳದಿಂದ ಸ್ಥಗಿತಗೊಳಿಸಿ ಮತ್ತೊಂದು ಸ್ಥಳದಲ್ಲಿ ಹೊಸದಾಗಿ ನೋಂದಣಿ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸಲು ಡಿ-ಲಿಂಕಿಂಗ್‌ ಸೌಲಭ್ಯ ಅಗತ್ಯ. ಹೀಗಾಗಿ ಕೂಡಲೇ ಎಲ್ಲಾ ಎಸ್ಕಾಂಗಳು ಡಿ-ಲಿಂಕಿಂಗ್‌ ಸೌಲಭ್ಯ ಕಲ್ಪಿಸಬೇಕು ಎಂದು ಆದೇಶ ಮಾಡಿದ್ದಾರೆ.