Asianet Suvarna News Asianet Suvarna News

ನಟ ದರ್ಶನ್ ಗಾಗಿ ಮೈಸೂರಿನಿಂದ‌ ಚಕ್ಕುಲಿ ತಂದಿರುವ ಮಹಿಳೆ!

ಮೈಸೂರಿನ ಸರಸ್ವತಿಪುರಂ ನಿವಾಸಿ ಮಹಿಳೆಯೊಬ್ಬರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗಾಗಿ ಚಕ್ಕುಲಿ ತಯಾರಿಸಿಕೊಂಡು ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ. ನಮ್ಮನ್ನು ಒಳಬಿಡುವಂತೆ ಪೊಲೀಸರ ಮುಂದೆ ಮನವಿ ಮಾಡಿದ ಮಹಿಳೆ.

A woman who has brought a chakkuli from Mysore for actor Darshan rav
Author
First Published Jul 25, 2024, 3:45 PM IST | Last Updated Jul 25, 2024, 3:57 PM IST

ಬೆಂಗಳೂರು (ಜು.25): ಪ್ರೇಯಸಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದನೆಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನ ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ತಿಂಗಳಿಂದ ಪರಪ್ಪನ ಅಗ್ರಹಾರ ಜೈಲು ಸೇರಿರುವ ಸ್ಯಾಂಡಲ್‌ವುಡ್ ಸ್ಟಾರ್ ನಟ ದರ್ಶನ್ ನೋಡಲು ಬರುವವರ ಸಂಖ್ಯೆ ಕಡಿಮೆಯಾಗಿಲ್ಲ. ಮೊದಲ ದಿನವೇ ಪರಪ್ಪನ ಅಗ್ರಹಾರದ ಮುಂದೆ ಸಾವಿರಾರು ಅಭಿಮಾನಿಗಳು ನೋಡಲು ಬಂದಿದ್ದರು. ಆದರೆ ಯಾರಿಗೂ ದರ್ಶನ ಭಾಗ್ಯ ಸಿ್ಕಿಲ್ಲ. ಪರಪ್ಪನ ಅಗ್ರಹಾರದ ಜೈಲಿನೊಳಗೆ ವಿಶೇಷ ಭದ್ರತಾ ಕೊಠಡಿಯಲ್ಲಿರುವ ನಟ. ಅಲ್ಲಿನ ಇತರೆ ಕೈದಿಗಳಿಗೆ ದರ್ಶನ್ ನೋಡಲು ಸಾಧ್ಯವಿಲ್ಲದಷ್ಟ ಬಿಗಿ ಭದ್ರತೆ ಕಲ್ಪಸಿರುವ ಜೈಲಾಧಿಕಾರಿಗಳು. ಇಷ್ಟೆಲ್ಲ ತಿಳಿದಿದ್ದರೂ ದರ್ಶನರನ್ನ ಕಾಣಲು ಬರುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಇದೊಂದು ರೀತಿ ಜೈಲಾಧಿಕಾರಿಗಳೇ ರೋಸಿ ಹೋಗಿರಲಿಕ್ಕೆ ಸಾಕು!

ನಟ ದರ್ಶನ್ ಭೇಟಿ ಮಾಡಲು ಕನ್ನಡ ಚಲಚಿತ್ರರಂಗದ ಅನೇಕ ಕಲಾವಿದರು ಭೇಟಿ ಮಾಡಲು ಬಂದಿದ್ದಾರೆ ಆ ಪೈಕಿ ಕೆಲವೇ ಕೆಲವರು ಭೇಟಿ ಮಾಡಿದರೆ ಉಳಿದವರು ವಾಪಸ್ ಆಗಿದ್ದಾರೆ. ನಿನ್ನೆಯಷ್ಟೇ ಹಿರಿಯ ಹಾಸ್ಯನಟ ಸಾಧುಕೋಕಿ ಭೇಟಿಗೆ ಬಂದಿದ್ದರು. ಆದರೆ ಪೊಲೀಸರು ಅವಕಾಶ ಕೊಡದ ಹಿನ್ನೆಲೆ ವಾಪಸ್ ಆಗಿದ್ದರು. 

ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಅಲಾಯಿ ದೇವರು! ದರ್ಶನ್ ಬಿಡುಗಡೆ ಭವಿಷ್ಯ ನುಡಿದ ಕೌಡೇಪಿರ ಲಾಲಸಾಬ!

ಇನ್ನು ನೆಚ್ಚಿನ ನಟನಿಗಾಗಿ ಪರಪ್ಪನ ಅಗ್ರಾಹಾರದತ್ತ ಬರುತ್ತಲೇ ಇರುವ ವೃದ್ಧರು, ಅಂಗವಿಕಲರು, ದಾಸಯ್ಯಗಳ ಸಂಖ್ಯೆ ಕಡಿಮೆಯಾಗಿಲ್ಲ.  ಅವರ ಸಾಲಿಗೆ ಇದೀಗ ಮತ್ತೊಬ್ಬ ವೃದ್ಧೆ ದರ್ಶನ್‌ಗಾಗಿ ಮೈಸೂರಿನಿಂದ ಚಕ್ಕುಲಿ ತಂದು ಸುದ್ದಿಯಾಗಿದ್ದಾಳೆ.

ಹೌದು ನಟ ದರ್ಶನ್‌ಗಾಗಿ ಮೈಸೂರಿನ ಸರಸ್ವತಿಪುರಂ ನಿವಾಸಿಯಾದ ಮಂಜುಳಾ ಎಂಬಾಕೆ ದರ್ಶನರನ್ನು ಭೇಟಿ ಮಾಡಲು ಚಕ್ಕುಲಿ, ಬಾತ್ ಕೈಯಾರೆಮಾಡಿಕೊಂಡು ಚೀಲದಲ್ಲಿ ತುಂಬಿಕೊಂಡು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದಾಳೆ. ಆದರೆ ಗೇಟ್‌ನಲ್ಲಿ ಒಳಬಿಡದ ಪೊಲೀಸರು.'ದರ್ಶನ್ ತಪ್ಪು ಮಾಡಿದ್ದರೆ ತಪ್ಪೇ. ನಮಗೆ ಎರಡು ದಿನ ಬೇಜಾರಿತ್ತು. ಆದೆ ದರ್ಶನ್ನರನ್ನ ಬಿಟ್ಟುಕೊಡೋಾಗುತ್ತಾ? ದಯವಿಟ್ಟು ದರ್ಶನ್ ಭೇಟಿ ಮಾಡಬೇಕು ಅವರಿಗೆ ಚಕ್ಕುಲಿ ಕೊಡಬೇಕು ಒಳಗೆ ಬಿಡಿ, ನಮ್ಮನ್ನ ಒಳಗೆ ಕಳಿಸುವಂತೆ ಮಾಧ್ಯಮದವರು ಸಹಾಯ ಮಾಡಬೇಕು ಎಂದು ಮಾಧ್ಯಮದವರ ಸಹಾಯ ಕೇಳುತ್ತಿರುವ ಮಹಿಳೆ. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಪೊಲೀಸರು ಬ್ಯಾರಿಕೇಡ್ ಎಳೆದು ವಾಪಸ್ ಕಳಿಸಿದ್ದಾರೆ.

Latest Videos
Follow Us:
Download App:
  • android
  • ios