ಗೃಹ ಲಕ್ಷ್ಮಿ ಹಣ ಕೂಡಿಟ್ಟು ಸೊಸೆಗೆ ಫ್ಯಾನ್ಸಿ ಸ್ಟೋರ್ ಹಾಕಿಸಿಕೊಟ್ಟ ಅತ್ತೆ!
ಗೃಹಲಕ್ಷ್ಮೀ ಹಣ ಕೂಡಿಟ್ಟು ತನ್ನ ಸೊಸೆಗಾಗಿ ಮನೆಯಲ್ಲೇ ಫ್ಯಾನ್ಸಿ ಸ್ಟೋರಿ ಹಾಕಿಸಿಕೊಟ್ಟ ಸೊಸೆ. ಘಟನೆ ಹಾವೇರಿ ಜಿಲ್ಲೆಯ ನೀರಲಗಿ ಗ್ರಾಮದಲ್ಲಿ ನಡೆದಿದ್ದು ಅತ್ತೆ ಕಾರ್ಯಕ್ಕೆ, ಸೊಸೆ ಮೇಲಿನ ಪ್ರೀತಿಗೆ ಬೇಷ್ ಎಂದಿದ್ದಾರೆ.
ಹಾವೇರಿ (ಆ.27): ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಿದಾಗ ರಾಜ್ಯಾದ್ಯಂತ ಪರ-ವಿರೋಧ ತೀವ್ರ ಚರ್ಚೆಗೆ ಹುಟ್ಟುಹಾಕಿತ್ತು. ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನತಿಗೆ ಮಾಸಿಕ ಎರಡು ಸಾವಿರ ಕೊಡುವುದರಿಂದ ಮನೆಯಲ್ಲಿ ಅತ್ತೆ ಸೊಸೆ ಮಧ್ಯೆ ಜಗಳಕ್ಕೆ ಕಾರಣವಾಗುತ್ತದೆ. ಕುಟುಂಬಗಳು ಹೊಡೆದಾಡಿಕೊಂಡು ಬೀದಿಗೆ ಬಿಳುತ್ತವೆ ಎಂದು ವಿರೋಧ ಪಕ್ಷಗಳು ಟೀಕಿಸಿದವು. ಅದ್ಯಾವುದು ಆಗಲಿಲ್ಲ. ಬದಲಾಗಿ ಗೃಹಲಕ್ಷ್ಮೀ ಹಣವನ್ನ ಕೂಡಿಟ್ಟು ಅತ್ತೆಯೇ ಸೊಸೆಗಾಗಿ ಫ್ಯಾನ್ಸಿ ಸ್ಟೋರ್ ಹಾಕಿಸಿಕೊಟ್ಟ ಅಪರೂಪದ ಘಟನೆಗೆ ಹಾವೇರಿ ಜಿಲ್ಲೆ ಸಾಕ್ಷಿಯಾಗಿದೆ.
ಗೃಹಲಕ್ಷ್ಮೀ ದುಡ್ಡಿನಲ್ಲಿ ಊರಿಗೆಲ್ಲ ಹೋಳಿಗೆ ಊಟ ಹಾಕಿಸಿದ ವೃದ್ಧೆ
ಶಿಗ್ಗಾವಿ ತಾಲೂಕಿನ ನೀರಲಗಿ ಗ್ರಾಮದವರಾದ ಅತ್ತೆ ದಾಕ್ಷಯಿಣಿ. ತನ್ನ ಸೊಸೆ ಕುಮಾರಿ ಶಿವನಗೌಡ ಪಾಟೀಲ್ ಮಗಳಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಸೊಸೆ ಹೊರಗಡೆ ಕೆಲಸಕ್ಕೆ ಹೋಗಬಾರದು ಮನೆಯಿಂದಲೇ ಏನಾದರೂ ಕೆಲಸ ಮಾಡುವಂತಾಗಬೇಕು ಎಂದು ಯೋಚಿಸಿದ್ದ ಅತ್ತೆ ದಾಕ್ಷಯಿಣಿ. ಅದೇ ವೇಳೆ ಗೃಹಲಕ್ಷ್ಮೀ ಯೋಜನೆ ಜಾರಿಯಾಗಿ ಪ್ರತಿ ತಿಂಗಳು 2000 ಸಾವಿರ ರೂಪಾಯಿ ಬರಲಾರಂಭಿಸಿದ ಬಂದ ಹಣವನ್ನು ಖರ್ಚು ಮಾಡದೇ ಹಾಗೆ ಕೂಡಿಟ್ಟಿರುವ ಅತ್ತೆ
ಅಕೌಂಟ್‌ಗೆ ಗೃಹಲಕ್ಷ್ಮೀ ಹಣ ಬಿದ್ದದ್ದೇ ತಡ ಮನೆಗೆ ವಾಷಿಂಗ್ ಮಷಿನ್ ತಂದ ಗೃಹಿಣಿ!
ಇದೀಗ ಇಂದಿಗೆ ಹತ್ತು ತಿಂಗಳ ಕಂತಿನ ಗೃಹಲಕ್ಷ್ಮೀ ಹಣ ಒಟ್ಟು 20,000 ರೂ. ಆಗಿದೆ. ಗೃಹಲಕ್ಷ್ಮೀ ಹಣದಿಂದ ಸೊಸೆಗಾಗಿ ಫ್ಯಾನ್ಸಿ ಸ್ಟೋರ್ ಇಟ್ಟುಕೊಟ್ಟಿರುವ ಅತ್ತೆ. ಶ್ರಾವಣ ಮಂಗಳವಾರದ ಮಂಗಳಕರ ದಿನದಂದೇ ಪೂಜೆ ಕಾರ್ಯ ನೆರವೇರಿಸಿ ಫ್ಯಾನ್ಸಿ ಸ್ಟೋರ್‌ಗೆ ಚಾಲನೆ ನೀಡಿರುವ ಅತ್ತೆ. ಅತ್ತೆಯ ಕಾರ್ಯಕ್ಕೆ ಗ್ರಾಮಸ್ಥರು ಬೇಷ್ ಎಂದಿದ್ದಾರೆ. ಪ್ರತಿಕುಟುಂಬದಲ್ಲೂ ಇಂತಹ ಅತ್ತೆ-ಸೊಸೆ ಇದ್ದರೆ ಮನೆ