ವೈದ್ಯರು ಓವರ್‌ಡೋಸ್ ಇಂಜೆಕ್ಷನ್ ನೀಡಿದ ಆರೋಪ; ಹೊಟ್ಟೆನೋವು ಅಂತಾ ಬಂದು ಜೀವ ಬಿಟ್ಟ ಮಹಿಳೆ!
ಹಾವೇರಿಯ ವೀರಾಪುರ ಆಸ್ಪತ್ರೆಯಲ್ಲಿ ಹೊಟ್ಟೆ ನೋವಿಗೆ ಚಿಕಿತ್ಸೆ ಪಡೆಯಲು ಬಂದಿದ್ದ 23 ವರ್ಷದ ಯುವತಿ ಇಂಜೆಕ್ಷನ್ ನಂತರ ಸಾವನ್ನಪ್ಪಿದ್ದಾರೆ. ಕುಟುಂಬಸ್ಥರು ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.
ಹಾವೇರಿ (ಡಿ.27): ಹೊಟ್ಟೆ ನೋವೆಂದು ಆಸ್ಪತ್ರೆಗೆ ಬಂದಿದ್ದ ಮಹಿಳೆಗೆ ವೈದ್ಯರು ಇಂಜೆಕ್ಷನ್ ನೀಡಿದ ಬಳಿಕ ದಿಢೀರ್ ಆರೋಗ್ಯ ಏರುಪೇರಾಗಿ ಮೃತಪಟ್ಟ ಘಟನೆ ಹಾವೇರಿ ನಗರದ ನಗರದ ವೀರಾಪುರ ಆಸ್ಪತ್ರೆಯಲ್ಲಿ ನಡೆದಿದ್ದು,
ಶಮಿನ ಬಾನು ಅರಳಿಕಟ್ಟಿ (23) ಮೃತ ಮಹಿಳೆ. ಬ್ಯಾಡಗಿ ಪಟ್ಟಣದ ನಿವಾಸಿಯಾಗಿರುವ ಮಹಿಳೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆ. ಕುಟುಂಬಸ್ಥರು ಬ್ಯಾಡಗಿಯಿಂದ ನಗರದ ವೀರಾಪುರ ಆಸ್ಪತ್ರೆಗೆ ದಾಖಲಿಸಿದ್ದರು ಬ್ಯಾಡಗಿಯಿಂದ ವೀರಾಪುರ ಆಸ್ಪತ್ರೆಗೆ ಬರುವವರೆಗೆ ಚೆನ್ನಾಗಿದ್ದ ಮಹಿಳೆ, ಆಸ್ಪತ್ರೆಯಲ್ಲಿ ವೈದ್ಯರು ಇಂಜೆಕ್ಷನ್ ನೀಡಿದ ಬಳಿಕ ಮಹಿಳೆ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮನಮೋಹನ್ ಸಿಂಗ್ ನಿಧನಕ್ಕೆ ಶಾಲೆಗಳಿಗೆ ರಜೆ; ಕೆರೆಗೆ ಈಜಾಡಲು ಹೋಗಿದ್ದ ವಿದ್ಯಾರ್ಥಿ ಕಣ್ಮರೆ!
ವೈದ್ಯರು ಓವರ್ ಡೋಸ್ ಇಂಜೆಕ್ಷನ್ ನೀಡಿದ ಪರಿಣಾಮದಿಂದಲೇ ಮೃತಪಟ್ಟಿದ್ದಾರೆ. ಮಗಳ ಸಾವಿಗೆ ವೈದ್ಯರೇ ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯ ಮುಂಭಾಗ ಜಮಾಯಿಸಿದ ಪೋಷಕರು, ಕುಟುಂಬಸ್ಥರು. ವೈದ್ಯರ ಮೇಲೆ ಹಲ್ಲೆ ಮುಂದಾಗಿದ್ದ ಮೃತ ಮಹಿಳೆಯ ಕುಟುಂಬಸ್ಥರು ಪೊಲೀಸರು ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.