ತನ್ನ ಮೇಲೆ ಹಲ್ಲೆ ಮಾಡಿರುವ ನವಿಲೊಂದರ ಮೇಲೆ ಮಹಿಳೆಯೊಬ್ಬರು ಅರಣ್ಯ ಇಲಾಖೆಗೆ ದೂರು ನೀಡಿರುವ ಅಪರೂಪದ ಪ್ರಸಂಗವೊಂದು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ನಡೆದಿದೆ.

ಚನ್ನಪಟ್ಟಣ (ಜು.3) : ತನ್ನ ಮೇಲೆ ಹಲ್ಲೆ ಮಾಡಿರುವ ನವಿಲೊಂದರ ಮೇಲೆ ಮಹಿಳೆಯೊಬ್ಬರು ಅರಣ್ಯ ಇಲಾಖೆಗೆ ದೂರು ನೀಡಿರುವ ಅಪರೂಪದ ಪ್ರಸಂಗವೊಂದು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಅರಳಾಳುಸಂದ್ರದ ಲಿಂಗಮ್ಮ ಜೂ.28ರಂದು ತನ್ನ ಮೇಲೆ ನವಿಲೊಂದು ದಾಳಿ ಮಾಡಿದ್ದು, ಸೂಕ್ತ ಕ್ರಮ ಜರುಗಿಸುವಂತೆ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ದೂರು ನೀಡಿದ್ದಾರೆ. ಈ ದೂರಿಗೆ ಕೆಲ ಗ್ರಾಮಸ್ಥರೂ ಸಹಿ ಮಾಡಿದ್ದಾರೆ.

HSR Layout ಪೊಲೀಸ್‌ ಠಾಣೆಯಲ್ಲಿ ಹೀಗೊಂದು ಅಸಂಬದ್ಧ ಎಫ್‌ಐಆರ್! ಅಧಿಕಾರಿಗಳೇ ಹೈರಾಣು!

ಏನಿದು ದೂರು?: ನಾವು ಕೃಷಿಕರಾಗಿದ್ದು, ಕಳೆದ ನಾಲ್ಕೈದು ದಿನಗಳಿಂದ ನವಿಲೊಂದು ನಮ್ಮ ಮನೆ ಆಸುಪಾಸಿನಲ್ಲಿ ವಾಸಿಸುತ್ತಿದೆ. ಜೂ.26ರಂದು ನಮ್ಮ ಮನೆಯ ಹಿಂದೆ ಕೆಲಸ ಮಾಡುತ್ತಿದ್ದಾಗ, ನನ್ನ ಮೇಲೆ ಏಕಾಏಕಿ ದಾಳಿ ಮಾಡಿ ಗಂಭೀರವಾಗಿ ಗಾಯ ಮಾಡಿದೆ. ಘಟನೆ ನಡೆದಾಗ ಸಂಜೆಯಾಗಿತ್ತು. ಗಾಯಗೊಂಡ ನಾನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಮರುದಿನ ಬಿ.ವಿ.ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದೇನೆ. ನವಿಲಿನ ದಾಳಿಯಿಂದ ಗಾಯಗೊಂಡ ಕಾರಣ ಸಾಕಷ್ಟುವೆಚ್ಚವಾಗಿದೆ. ಆದ್ದರಿಂದ ನವಿಲಿನ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಇಷ್ಟುದಿನ ಅರಳಾಳುಸಂದ್ರ ಭಾಗದಲ್ಲಿ ಕಾಡಾನೆ ದಾಳಿ ಕುರಿತಂತೆ ದೂರುಗಳು ಬರುತ್ತಿತ್ತು. ಆದರೀಗ ನವಿಲಿನ ದಾಳಿಯ ವಿರುದ್ಧವೂ ದೂರು ಬಂದಿದೆ.