ಇಲ್ಲಿನ ಹಾರಂಗಿ ಅಣೆಕಟ್ಟು ಮುಂಭಾಗದಲ್ಲಿ ಪ್ರವಾಸಿಗರೊಬ್ಬರು ಸೆಲ್ಫೀ ತೆಗೆಯುವ ಸಂದರ್ಭದಲ್ಲಿ ಆಯತಪ್ಪಿ ನದಿಗೆ ಬಿದ್ದು ನೀರುಪಾಲಾಗಿರುವ ಘಟನೆ ಗುರುವಾರ ನಡೆದಿದೆ. ಬೆಂಗಳೂರಿನ ಉದ್ಯಮಿ ಸಂದೀಪ್‌ (40) ನೀರುಪಾಲಾಗಿರುವವರು

ಕುಶಾಲನಗರ (ಆ.4) : ಇಲ್ಲಿನ ಹಾರಂಗಿ ಅಣೆಕಟ್ಟು ಮುಂಭಾಗದಲ್ಲಿ ಪ್ರವಾಸಿಗರೊಬ್ಬರು ಸೆಲ್ಫೀ ತೆಗೆಯುವ ಸಂದರ್ಭದಲ್ಲಿ ಆಯತಪ್ಪಿ ನದಿಗೆ ಬಿದ್ದು ನೀರುಪಾಲಾಗಿರುವ ಘಟನೆ ಗುರುವಾರ ನಡೆದಿದೆ.

ಬೆಂಗಳೂರಿನ ಉದ್ಯಮಿ ಸಂದೀಪ್‌ (40) ನೀರುಪಾಲಾಗಿರುವವರು. ಬೆಂಗಳೂರಿನಿಂದ ಜಿಲ್ಲೆಗೆ ಆಗಮಿಸಿದ ನಾಲ್ವರು ಪ್ರವಾಸಿಗರು ಗೋಣಿಕೊಪ್ಪ, ಮಡಿಕೇರಿ ನಂತರ ಗುರುವಾರ ಸಂಜೆ ಹಾರಂಗಿ ಅಣೆಕಟ್ಟೆಗೆ ಭೇಟಿ ನೀಡಿದರು. ಅಣೆಕಟ್ಟೆಯ ಎದುರುಗಡೆ ಇರುವ ಸೇತುವೆಯಲ್ಲಿ ಸೆಲ್ಫೀ ತೆಗೆಯುವ ಸಂದರ್ಭ ಸಂದೀಪ್‌ ನದಿಗೆ ಬಿದ್ದಿರುವುದಾಗಿ ಅವರ ಸ್ನೇಹಿತರು ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸ್‌ ಮತ್ತು ಅಗ್ನಿಶಾಮಕ ತಂಡ ಸಂದೀಪ್‌ಗಾಗಿ ಶೋಧ ನಡೆಸಲಾಯಿತು.

ಸೆಲ್ಫಿ ಗೀಳಿದ್ರೆ ಒಳ್ಳೇದೆ..'ಸ್ವಂತಿ' ಕ್ಲಿಕ್ಕಿಸಿ ಖುಷ್ ಖುಷಿಯಾಗಿರಿ

ಜಮೀನು ವಿಚಾರಕ್ಕೆ ಮಾರಾಮಾರಿ

ಕುದೂ​ರು: ಜಮೀನು ವಿಚಾರವಾಗಿ ಎರಡು ಸಮುದಾಯಗಳ ನಡುವೆ ಮಾರಾಮಾರಿ ನಡೆದಿರುವಂತಹ ಘಟನೆ ಕುದೂರು ಹೋಬ​ಳಿಯ ಹೊನ್ನಾಪುರ ಗ್ರಾಮದಲ್ಲಿ ನಡೆ​ದಿ​ರು​ವುದು ತಡವಾಗಿ ಬೆಳಕಿಗೆ ಬಂದಿದೆ. ಸರ್ಕಾರಿ ಗೋಮಾಳ ಜಮೀ​ನನ್ನು ಪ್ರಶ್ನಿಸಿ ನಡು ರಸ್ತೆ​ಯ​ಲ್ಲಿಯೇ ಓರ್ವ ಪುರುಷ ಹಾಗೂ ಮೂವರು ಮಹಿ​ಳೆ​ಯರ ನಡುವೆ ಗಲಾಟೆ ನಡೆ​ದಿದೆ.

ಜಮೀನು ವಿವಾದ: ಎರಡು ಕುಟುಂಬಗಳ ನಡುವೆ ಮಾರಾಮಾರಿ, ಕೊಲೆಯಲ್ಲಿ ಅಂತ್ಯ!

ಈ ಮಾರಾ​ಮಾ​ರಿಯ ವಿಡಿಯೋ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ವೈರಲ್‌ ಆಗಿ​ದೆ. ಲಿಂಗಾಯತ ಸಮುದಾಯದವರು ಹಲ್ಲೆ ಮತ್ತು ಜಾತಿನಿಂದನೆ ಮಾಡಿದ್ದಾರೆಂದು ಆರೋಪಿಸಿ ದಲಿತ ಸಮುದಾಯದವರು ದೂರು ಸಲ್ಲಿ​ಸಿ​ದರೆ, ವಿನಾಕಾರಣ ಮಹಿಳೆ ಮೇಲೆ ಹಲ್ಲೆ ಮಾಡಿರುವ ಕುರಿತಾಗಿ ದಲಿತ ಸಮುದಾಯದ ವಿರುದ್ಧ ಲಿಂಗಾ​ಯತ ಸಮು​ದಾ​ಯ​ದವರು ಪ್ರತಿ ದೂರು ಸಲ್ಲಿ​ಸಿ​ದ್ದಾರೆ. ಸದ್ಯ ಎರಡೂ ಕಡೆಯ ಪ್ರಕರಣದ ಕುರಿತು ಕುದೂರು ಪೊಲೀಸರು ಪರಿಶೀಲನೆ ನಡೆ​ಸು​ತ್ತಿ​ದ್ದಾ​ರೆ.