ಹೋದಲ್ಲಿ ಬಂದಲ್ಲಿ ಜನರು ಸೆಲ್ಫಿ ತೆಗೆದುಕೊಳ್ಳುವುದು ಇತ್ತೀಚಿಗೆ ಕಾಮನ್ ಆಗಿದೆ. ಕೆಲವೊಬ್ರು ಎಷ್ಟು ಸೆಲ್ಫಿ ತಗೊಳ್ತಿರಪ್ಪಾ ಅಂತ ಟೀಕಿಸೋದು ಇದೆ. ಆದ್ರೆ ಸೆಲ್ಫಿಯಿಂದಾನೂ ಸಾಕಷ್ಟು ಪ್ರಯೋಜನವಿದೆ.
Image credits: others
ಸೆಲ್ಫ್ ಲವ್
ಸ್ವಯಂ ಪ್ರೀತಿಯು ಪ್ರತಿಯೊಬ್ಬರಿಗೂ ಅತೀ ಅಗತ್ಯವಾಗಿದೆ. ಇದು ಮಾನಸಿಕ ಆರೋಗ್ಯವನ್ನು ಸುಸ್ಥಿರವಾಗಿಡುತ್ತದೆ. ಇತರರನ್ನು ಪ್ರೀತಿಸುವ ಮೊದಲು ನಮ್ಮನ್ನು ನಾವು ಪ್ರೀತಿಸಲು ಕಲಿಯಬೇಕು. ಸೆಲ್ಫಿ ಅದಕ್ಕೊಂದು ಉತ್ತಮ ದಾರಿ.
Image credits: others
ಆತ್ಮವಿಶ್ವಾಸ ಹೆಚ್ಚಿಸುತ್ತೆ
ಸೆಲ್ಫಿ ತೆಗೆದುಕೊಳ್ಳದವರಿಗಿಂತ ಸೆಲ್ಫಿ ತೆಗೆದುಕೊಳ್ಳುವ ಜನರು ಹೆಚ್ಚು ಆತ್ಮವಿಶ್ವಾಸ ಮತ್ತು ಹೆಚ್ಚು ಆಕರ್ಷಕವಾಗಿರುತ್ತಾರೆ ಎಂದು ಅಧ್ಯಯನಗಳು ತೋರಿಸಿವೆ.
Image credits: others
ಸಂಪರ್ಕ ಸಾಧನ
ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಹಂಚಿಕೊಳ್ಳಲಾದ ಚಿತ್ರಗಳಲ್ಲಿ ಸೆಲ್ಫಿಗಳು ಹೆಚ್ಚು. ಸೆಲ್ಫಿಗಳು ಇತರರೊಂದಿಗೆ ಸಂಪರ್ಕ ಹೆಚ್ಚಿಸಲು ಅವಕಾಶ ಮಾಡಿಕೊಡುತ್ತದೆ.
Image credits: others
ಮನಸ್ಥಿತಿಯನ್ನು ತಿಳಿಸುತ್ತೆ
ಸೆಲ್ಫಿ ಜೀವನದ ಬಗ್ಗೆ ಸಕಾರಾತ್ಮಕ ಭಾವನೆಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಹಾಗೆಯೇ ನಾವೆಷ್ಟು ಖುಷಿಯಾಗಿದ್ದೇವೆ, ಇಲ್ಲ ಎಂಬುದನ್ನು ನಮಗೆ ತೋರಿಸುತ್ತದೆ.
Image credits: others
ಉತ್ತಮವಾದ ನೆನಪು
ಸೆಲ್ಫಿಗಳು ಉತ್ತಮವಾದ ನೆನಪುಗಳನ್ನು ಸೆರೆಹಿಡಿಯಲು ಉತ್ತಮ ಮಾರ್ಗವಾಗಿದೆ. ವರ್ಷಗಳ ನಂತರ ನೋಡಿದಾಗ ಖುಷಿ ನೀಡುವ ಅನುಭವವಾಗಿದೆ.