ಬೆಂಗಳೂರು: ಬೆಳ್ಳಂಬೆಳಗ್ಗೆ ಕಾರು-ಲಾರಿ ನಡುವೆ ಭೀಕರ ಅಪಘಾತ; ತಾಯಿ-ಮಕ್ಕಳು ಸಾವು!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಕಾರು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ತಾಯಿ-ಮಕ್ಕಳು ಮೃತಪಟ್ಟ ಘಟನೆ ನಡೆದಿದೆ.
ಬೆಂಗಳೂರು (ಅ.3): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಕಾರು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ತಾಯಿ-ಮಗು ಮೃತಪಟ್ಟ ಘಟನೆ ನಡೆದಿದೆ. ಅಪಘಾತದಲ್ಲಿ ತಾಯಿ ಮತ್ತು ಪ್ರಣವಿ (5)ಹಾಗೂ ಕುಶಾವಿ(2) ಸಾವನ್ನಪ್ಪಿದ್ದ ಮಕ್ಕಳು. ಇನ್ನು ಗಂಭೀರ ಗಾಯಗೊಂಡಿರುವ ಮಹೇಂದ್ರನ್ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.
ಮೃತರು ಮೂಲತಃ ಸೇಲಂನವರಾಗಿದ್ದು ರಾಮಮೂರ್ತಿನಗರದ ವಿಜಿನಾಪುರ ವಾಸವಾಗಿದ್ದರು. ಅನ್ಲೈನ್ ನಲ್ಲಿ ಸೆಲ್ಫ್ ಡ್ರೈವ್ ಟಾಟಾ ನೆಕ್ಸಾನ್ ಕಾರು ಬಾಡಿಗೆ ಪಡೆದುಕೊಂಡು ಹೋಗಿದ್ದ ಕುಟುಂಬಸ್ಥರು
ರಸ್ತೆ ಪಕ್ಕ ಮಲಗಿದ್ದ 10 ಕಾರ್ಮಿಕರ ಮೇಲೆ ಹರಿದ ಟ್ರಕ್: 5 ಸಾವು, ಐವರು ಗಂಭೀರ
ರಾತ್ರಿ ನಾಗಸಂದ್ರ ಬಳಿಗೆ ಹೋಗಿದ್ದಾರೆ. ಬೆಳಗಿನ ಜಾವ ಕುಟುಂಬ ಸಮೇತ ನೈಸ್ ರಸ್ತೆಗೆ ಬಂದಿದ್ದಾರೆ. ಸೋಮಪುರ ಬಳಿಯ ನೈಸ್ ರಸ್ತೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬೆಳಗಿನ ಜಾವ ನಾಲ್ಕು ಗಂಟೆ ಸಮಯ. ಈ ವೇಳೆ ಎದುರುಗಡೆಯಿಂದ ಬಂದ ಲಾರಿ ಡಿಕ್ಕಿ. ಡಿಕ್ಕಿಯಾದ ರಭಸಕ್ಕೆ ಲಾರಿಯೂ ಪಲ್ಟಿ ಹೊಡೆದಿದೆ. ಇತ್ತ ಕಾರಿಗೆ ಬೆಂಕಿ ಹೊತ್ತಿಕೊಂಡು ನಿದ್ದೆ ಪಂಪರಿನಲ್ಲಿದ್ದ ತಾಯಿ ಮಗು ಸಾವು. ಇನ್ನು ಗಂಭೀರ ಗಾಯಗೊಂಡ ಮಹೇಂದ್ರನ್ ಮತ್ತು ಇನ್ನೊಂದು ಮಗುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸ್ಥಳಕ್ಕೆ ತಲಘಟ್ಟಪುರ ಸಂಚಾರ ಪೊಲೀಸರು ಭೇಟಿ ನೀಡಿದ್ದು, ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ತೀವ್ರವಾಗಿ ಗಾಯಗೊಂಡಿರುವ ಮಹೇಂದ್ರ, ಮಗುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲಘಟ್ಟಪುರ ಸಂಚಾರ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲು.
ಟೆಸ್ಟ್ ಡ್ರೈವ್ ವೇಳೆ ಮರಕ್ಕೆ ಗುದ್ದಿ ಎಲೆಕ್ಟ್ರಿಕ್ ಬೈಕ್; ಸವಾರ ಸಾವು!
ವಾಟರ್ ಬಾಟಲಿಯಿಂದ ದುರಂತ:
ಸಂಜೆ ಐಕಿಯಾ ಗೆ ಹೋಗಿದ್ದ ಕುಟುಂಬ. ಬಳಿಕ ಹೊರಗಡೆ ಊಟ ಮಾಡಿಕೊಂಡು ಹೊರಗಡೆ ತಿರುಗಾಡಿದ್ದಾರೆ. ಕೊನೆಗೆ ನಸುಕಿನ ಜಾವ ಬಾಡಿಗೆ ಕಾರಿನಲ್ಲೇ ನೈಸ್ ರಸ್ತೆ ಬಂದಿದ್ದಾರೆ. ಕಾರಿನಲ್ಲಿ ವಾಟರ್ ಬಾಟೆಲ್ ಕಾಲಿನ ಕೆಳಗೆ ಬಂದಿದೆ. ಈ ವೇಳೆ ಕೆಳಗೆ ಬಗ್ಗಿ ಬಾಟೆಲ್ ತೆಗೆಯುವ ಯತ್ನ ಮಾಡುವಾಗ್ಲೇ ಅಪಘಾತ ಸಂಭವಿಸಿದೆ ಎಂದು ಮಾಹಿತಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹೇಂದ್ರನ್ ನಿಂದ ಮಾಹಿತಿ ಸದ್ಯ ಮಹೇಂದ್ರನ್ ಗೆ ಮುಂದುವರೆದ ಚಿಕಿತ್ಸೆ. ಅಪಘಾತದಲ್ಲಿ ಮಹೇಂದ್ರನ್ ಗೆ ಕಾಲಿನ ಭಾಗ ಸುಟ್ಟು ಹೋಗಿದೆ.